ಗಾಳಿಬೀಡು ಗ್ರಾಮದಲ್ಲಿ ಆಫ್ರಿಕನ್ ಹಂದಿ ಜ್ವರ ಪತ್ತೆ ; ಹಂದಿಗಳ ವಧೆಗೆ ಸೂಚನೆ 

26-10-22 07:29 pm       HK News Desk   ಕರ್ನಾಟಕ

ಇಲ್ಲಿನ ಗಾಳಿಬೀಡು ಗ್ರಾಮದಲ್ಲಿ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಆಫ್ರಿಕನ್‌ ಹಂದಿ ಜ್ವರ ಇರುವುದು ಪತ್ತೆಯಾಗಿದೆ. 

ಮಡಿಕೇರಿ, ಅ.26 : ಇಲ್ಲಿನ ಗಾಳಿಬೀಡು ಗ್ರಾಮದಲ್ಲಿ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಆಫ್ರಿಕನ್‌ ಹಂದಿ ಜ್ವರ ಇರುವುದು ಪತ್ತೆಯಾಗಿದೆ. 

ಆಫ್ರಿಕನ್ ಹಂದಿ ಜ್ವರ ಎಂದು ದೃಢ ಪಡುತ್ತಲೇ ಕೊಡಗು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಗಾಳಿಬೀಡು ಗ್ರಾಮದ‌ ಬಿ.ಸಿ.ಗಣೇಶ್ ಅವರ ಹಂದಿ‌ ಸಾಕಾಣಿಕೆ ಕೇಂದ್ರದಲ್ಲಿ ಜ್ವರ ಪತ್ತೆಯಾಗಿದೆ. ‌ಹಂದಿಗಳಿಗೆ ಜ್ವರ ಕಾಣಿಸಿಕೊಂಡಿದ್ದ ಕಾರಣ ಆರೋಗ್ಯ ಇಲಾಖೆಯಿಂದ ತಪಾಸಣೆ ನಡೆದಿತ್ತು. 

ಹಂದಿ ಸಾಕಾಣಿಕೆ ಕೇಂದ್ರದ ಒಂದು ಕಿ.ಮೀ. ವ್ಯಾಪ್ತಿಯನ್ನು ರೋಗ ಪೀಡಿತ ವಲಯ ಎಂದು ಘೋಷಣೆ ಮಾಡಲಾಗಿದೆ. ‌10 ಕಿ.ಮೀ ವ್ಯಾಪ್ತಿಯನ್ನು ಜಾಗೃತ ವಲಯ ಎಂದು ಘೋಷಿಸಲಾಗಿದೆ. ಅಲ್ಲದೆ, ಸೋಂಕಿಗೆ ತುತ್ತಾಗಿರುವ ಹಂದಿಗಳನ್ನು ವಧೆ ಮಾಡಿ, ವೈಜ್ಞಾನಿಕ ರೂಪದಲ್ಲಿ ಸಂಸ್ಕಾರ ಮಾಡುವಂತೆ ಆದೇಶ ಮಾಡಲಾಗಿದೆ. ಕೊಡಗು ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟು ಹಂದಿ ಜ್ವರದ ಹತೋಟಿಗೆ ಕ್ರಮ ಕೈಗೊಂಡಿದ್ದಾರೆ.

A case of African swine flu disease has been confirmed at a  village in Kodagu on Tuesday. Swine flu was was diagnosed in a pig farm run by BC Ganesha in Galibeedu village near Madikeri. Kodagu deputy commissioner Sateesha BC has sent a team of the livestock disease monitoring committee to the spot and took strict measures to prevent the spread of the of the disease to other places.