ಸೋನಿಯಾ ರಿಮೋಟ್ ಪರಿಧಿಯಲ್ಲೇ ಇದ್ದುಬಿಡಿ, ಸ್ವಂತಿಕೆ ತೋರಿದ್ರೆ ಒದ್ದು ಹಾಕ್ತಾರೆ, ಸೀತರಾಂ ಕೇಸರಿ ಸ್ಥಿತಿ ನಿಮಗೂ ಬರಬಹುದು! 

26-10-22 08:36 pm       HK News Desk   ಕರ್ನಾಟಕ

ನೀವು ರಿಮೋಟ್ ಪರಿಧಿಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದ್ರೆ ಸೀತರಾಂ ಕೇಸರಿಗೆ ಏನು ಮಾಡಿದ್ರಿ ಅನ್ನೋದನ್ನ ನೆನಪಿನಲ್ಲಿ ಇಟ್ಕಂಡಿರಿ. ಯಾವ ಕಾರಣಕ್ಕೂ ಸೋನಿಯಾ, ರಾಹುಲ್ ರಿಮೋಟ್ ಪರಧಿ ಒಳಗೆ ಇರಿ, ಹಾಗಿದ್ರೆ ಮಾತ್ರ ನಿಮ್ಮನ್ನ ಉಳಿಸುತ್ತಾರೆ.

ಹಾಸನ, ಅ.26 : ನೀವು ರಿಮೋಟ್ ಪರಿಧಿಯಿಂದ ಹೊರಗೆ ಹೋಗುವ ಪ್ರಯತ್ನ ಮಾಡಿದ್ರೆ ಸೀತರಾಂ ಕೇಸರಿಗೆ ಏನು ಮಾಡಿದ್ರಿ ಅನ್ನೋದನ್ನ ನೆನಪಿನಲ್ಲಿ ಇಟ್ಕಂಡಿರಿ. ಯಾವ ಕಾರಣಕ್ಕೂ ಸೋನಿಯಾ, ರಾಹುಲ್ ರಿಮೋಟ್ ಪರಧಿ ಒಳಗೆ ಇರಿ, ಹಾಗಿದ್ರೆ ಮಾತ್ರ ನಿಮ್ಮನ್ನ ಉಳಿಸುತ್ತಾರೆ. ನೀವು ಸ್ವಂತಿಕೆ ತೋರಿಸುವ ಪ್ರಯತ್ನ ಮಾಡಿದ್ರೆ, ಆ ಗಳಿಗೆ ಅಪಮಾನ ಮಾಡಿ ಕಿತ್ತಾಕುತ್ತಾರೆ.‌ ಹೀಗೆಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ, ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೇರಿದ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ವ್ಯಂಗ್ಯ ಮಾತುಗಳಿಂದ ಟಾಂಗ್ ನೀಡಿದ್ದಾರೆ.‌

ಖರ್ಗೆ ಅಧ್ಯಕ್ಷ ಸ್ಥಾನಕ್ಕೇರಿದ ವಿಚಾರದಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.‌ ನಮ್ಮ ರಾಜ್ಯದ ಒಬ್ಬರು ಐವತ್ತು ವರ್ಷಗಳ ನಂತರ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರ ಹಿರಿತನ, ಅನುಭವವನ್ನು ಗಮನದಲ್ಲಿಟ್ಟು ನಾನು ಕಿರಿಯನಾಗಿ ಒಂದು ಮಾತು ಹೇಳಲು‌ ಬಯಸುತ್ತೇನೆ. ಈ‌ ಹಿಂದೆ ನಿಜಲಿಂಗಪ್ಪ, ಸೀತಾರಂ ಕೇಸರಿ ಅವರಿಗೆ ಏನು ಮಾಡಿದ್ದರು ಅಂತ ಗೊತ್ತಿದೆ. ಯಾರೇ ಆಗಲಿ ಸ್ವತಂತ್ರ ಅಸ್ತಿತ್ವವನ್ನ ತೋರಿಸುವ ಪ್ರಯತ್ನ ಮಾಡುತ್ತಾರೋ ಅವರನ್ನ ಕಾಂಗ್ರೆಸ್‌ನ ಸೋನಿಯಾಜಿ, ರಾಹುಲ್‌ಜಿ ಕುಟುಂಬ ಸಹಿಸಲ್ಲ. ನಿಮ್ಮ ಸ್ವತಂತ್ರ ಅಸ್ತಿತ್ವವನ್ನು ಯಾವುದೇ ಕಾರಣಕ್ಕೂ ತೋರಿಸಲು ಹೋಗಬೇಡಿ.‌ ಸ್ವತಂತ್ರ ಅಸ್ತಿತ್ವವನ್ನು ಮರೆತು ಇದ್ರೆ, ಇರುವಷ್ಟು ದಿನ ಇರಬಹುದು. 

Sonia, Rahul to not participate in choosing next Congress president - The  Hindu

ಖರ್ಗೆ ಅಧ್ಯಕ್ಷರಾಗಿರುವುದರಿಂದ ರಾಜಕೀಯವಾಗಿ ಏನು ಪರಿಣಾಮ ಆಗುತ್ತೆ ಅಂತ ಇವತ್ತು ಹೇಳಲು‌ ಆಗಲ್ಲ. ಅವರು ಮಾಡಿರೋದೇನು ಪ್ರಧಾನಮಂತ್ರಿ ಅಭ್ಯರ್ಥಿ ಅಲ್ಲ. ಸೋತು ನೆಲಕಚ್ಚಿ, ಸೋಲಿನ ಮೇಲೆ ಸೋಲು ಅನುಭವಿಸುತ್ತಿರುವ ಕಾಂಗ್ರೆಸ್‌ಗೆ ಮುಳುಗುವ ಹಡಗಿಗೆ ಕ್ಯಾಪ್ಟನ್ ಆಗಿದ್ದಾರೆ. ಕಾಂಗ್ರೆಸ್ ಒಂದು ಮುಳುಗುವ ಹಡಗು, ಹಡಗನ್ನು ಉಳಿಸುವುದು ಪ್ರಶ್ನಾರ್ಥಕ ಚಿಹ್ನೆ. ಲೈಫ್ ಜಾಕೆಟ್ ಹಾಕೊಂಡ್ರೆ ಅವರು ಉಳಿದುಕೊಳ್ಳಬಹುದು, ಹಡಗು ಉಳಿಯಲ್ಲ.‌ ಇಷ್ಟು ಮುಂದಾಲೋಚನೆ, ಅನುಭವ ಖಂಡಿತ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇದೆಯೆಂದು ಭಾವಿಸುತ್ತೇನೆ ಎಂದು ಹೇಳಿದರು. 

Once bitten, twice shy: Will Mallikarjun Kharge become AICC president this  time? | Deccan Herald

ಭಾರತೀಯರಿಗೆ ದೇಶ ಆಳುವ ಯೋಗ್ಯತೆ ಇಲ್ಲ ಎಂದಿದ್ದರವರು ! 

ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಕ್ ಆಯ್ಕೆ ಬಗ್ಗೆ ಕೇಳಿದ್ದಕ್ಕೆ,1947 ರಲ್ಲಿ ಅಂದಿನ ಅಂದಿನ ಪ್ರಧಾನಮಂತ್ರಿ ಆಗಿದ್ದ ವಿನ್ಸ್‌ಟಂಟ್ ಚರ್ಚಿಲ್ ಭಾರತೀಯರಿಗೆ ಭಾರತವನ್ನು ಆಳುವ ಯೋಗ್ಯತೆ ಇಲ್ಲ.‌ ಅವರು ನಿಸ್ವಾರ್ಥದಿಂದ ಆಳ್ವಿಕೆ ನಡೆಸೋದಿಲ್ಲ.‌ ಭಾರತ ಹತ್ತಾರು ಹೋಳುಗಳಾಗುತ್ತೆ, ಯಾರಿಗೂ ಸಾಮರ್ಥ್ಯವಿಲ್ಲ ಎಂಬ ಮಾತುಗಳನ್ನ ಹೇಳಿದ್ದರು.‌ ನಾವು ನೂರಾರು ಸವಾಲುಗಳನ್ನು ಮೆಟ್ಟಿ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ನಂತರವೂ ಗಟ್ಟಿಯಾಗಿ ನಿಂತಿದ್ದೇವೆ.‌ ಜನರ ಆಶಯಕ್ಕೆ ತಕ್ಕಂತೆ ಪ್ರಜಾಪ್ರಭುತ್ವದ ಮೌಲ್ಯವನ್ನು ಎತ್ತಿ ಹಿಡಿಯುತ್ತಾ ಬಂದಿದ್ದೇವೆ. ಸಾಮಾನ್ಯ ಚಾಯಿವಾಲಾ ಕೂಡ ದೇಶದ ಪ್ರಧಾನಮಂತ್ರಿ ಆಗುವಂತಹ ಸೌಭಾಗ್ಯವನ್ನು ಕಂಡಿದೆ.‌ ಜಗತ್ತು ಸಂಕಷ್ಟದಲ್ಲಿ ಇದ್ದಾಗ ನೂರಕ್ಕೂ ಹೆಚ್ಚು ದೇಶಗಳಿಗೆ ಕೋವಿಡ್ ವ್ಯಾಕ್ಸಿನ್ ಕೊಡುವ ಮೂಲಕ ನೆರೆಹೊರೆಯ ರಾಷ್ಟ್ರಗಳ ಸಂಕಷ್ಟಕ್ಕೆ ಸ್ಪಂದಿಸಿದೆ. ಯಾವ ಜನ ಆಳುವ ಯೋಗ್ಯತೆ ಇಲ್ಲ ಅಂತ ಹೇಳಿದ್ರೋ, ಆ ದೇಶವನ್ನೇ ಆಳುವ ಯೋಗ್ಯತೆಯೂ ಇದೆ ಅನ್ನೋದನ್ನ ಇವತ್ತು ರಿಷಿ ಸುನಕ್ ತೋರಿಸಿದ್ದಾರೆ. ಭಾರತ ಮೌಲ್ಯಗಳ ಆಧಾರದಲ್ಲಿ ರೂಪಿತಗೊಂಡಿರುವ ರಾಷ್ಟ್ರ, ಈ ಮೌಲ್ಯಗಳಿಗೆ ಯಾವತ್ತು ಸೋಲಿಲ್ಲ. ಮೌಲ್ಯಗಳಿಗೆ ಹಿಂಜರಿತ ಬರಬಹುದು, ಸೋಲು ಯಾವತ್ತೂ ಬರಲು ಸಾಧ್ಯವಿಲ್ಲ ಎಂದರು.

What is the profit of Mallikarjun Kharge being the Congress President slams CT Ravi in Hassan.