ಬ್ರೇಕಿಂಗ್ ನ್ಯೂಸ್
28-10-22 06:49 pm Bangalore Correspondent ಕರ್ನಾಟಕ
ಬೆಂಗಳೂರು, ಅ.28: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಈ ಸಂದರ್ಭದಲ್ಲಿ ನಗರದಲ್ಲಿ ವಾಹನ ಸವಾರರಿಗೆ ಯಾವುದೇ ಸಮಸ್ಯೆಗಳಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿಗೆ ಭೇಟಿ ನೀಡುವ ಸಂದರ್ಭದಲ್ಲಿ ದಕ್ಷಿಣ ಭಾರತದ ಮೊದಲ 'ವಂದೇ ಭಾರತ್ ಎಕ್ಸ್ ಪ್ರೆಸ್' ರೈಲಿಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಪ್ರತಿಮೆ ಮತ್ತು 5,000 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಅನ್ನು ಉದ್ಘಾಟಿಸಲಿದ್ದಾರೆ.
ನವೆಂಬರ್ 11ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ಪ್ರಧಾನಿ ಮೋದಿಯವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ್ದರು. ಈ ವೇಳೆ ಮೋದಿಯವರು, ಸಿಎಂ ಬೊಮ್ಮಾಯಿ ಮತ್ತು ಇತರ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ತಮ್ಮ ಎಲ್ಲಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ನವೆಂಬರ್ 11ರಂದು ಬೆಳಗ್ಗೆ 10 ಗಂಟೆಗೆ ನಗರದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಬಳಿಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಲಿದ್ದಾರೆ. ರೈಲು ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆ ಹಾಗೂ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಂಧ್ರ ಪ್ರದೇಶಕ್ಕೆ ತೆರಳುವ ಮುನ್ನ ವಿಮಾನ ನಿಲ್ದಾಣದ ಬಳಿ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ. ವಿಮಾನ ನಿಲ್ದಾಣದ ಬಳಿ ಪ್ರಧಾನಿ ರ್ಯಾಲಿಯಲ್ಲಿ ಸುಮಾರು ಎರಡು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
Prime Minister Narendra Modi will lead the inaugural trips of South India’s first and fifth Vande Bharat Express trains on November 11 in Bengaluru. This will also be the State’s first Vande Bharat train, which is set to go to the Legislative Assembly elections scheduled for next year.
31-12-24 10:06 pm
HK News Desk
Honnavara Accident, Mangalore: ಹೊಸ ವರ್ಷಾಚರಣೆಯ...
31-12-24 05:47 pm
Soldier Poonch Accident: ಜಮ್ಮು ಕಾಶ್ಮೀರದಲ್ಲಿ ಸ...
30-12-24 01:13 pm
Bangalore Police, New Year 2024 Rules; ಹೊಸ ವರ...
29-12-24 06:29 pm
Mandya Police Assult, Slap, Video: ತನ್ನ ಕಪಾಳಕ...
29-12-24 12:31 pm
31-12-24 11:57 am
HK News Desk
ಬಿಹಾರದಲ್ಲಿ ಸಿಎಂ ನಿತೀಶ್ ವಿರುದ್ಧ ಬೀದಿಗಿಳಿದ ವಿದ್...
30-12-24 11:14 pm
Maha Kumbh Mela 2025: 12 ವರ್ಷಗಳ ಬಳಿಕ ಉತ್ತರ ಪ್...
29-12-24 10:23 pm
South Korea Flight Crash: ದಕ್ಷಿಣ ಕೊರಿಯಾದಲ್ಲಿ...
29-12-24 02:35 pm
ಮನಮೋಹನ್ ಸಿಂಗ್ ಸ್ಮಾರಕದ ಹೆಸರಲ್ಲಿ ವಿವಾದ ; ನರಸಿಂಹ...
28-12-24 09:46 pm
31-12-24 10:40 pm
Mangalore Correspondent
Ullal Panchayat, Mangalore: ವಾರ್ಡ್ ಅಭಿವೃದ್ಧಿ...
31-12-24 10:10 pm
Mangalore Court, Death Penalty, Mulki, crime:...
31-12-24 06:45 pm
Mangalore, Ration cards, Koraga families: ಅನರ...
31-12-24 05:52 pm
redBus case, Seabird bus, Shobhraj Pavoor: ಮಂ...
30-12-24 10:45 pm
31-12-24 11:32 am
Bangalore Correspondent
Online Fraud, Stock Market, Mangalore: ಯೂಟ್ಯೂ...
29-12-24 10:50 pm
Mangalore online game suicide: ಜಾಬ್ ಆಫರ್ ಲಿಂಕ...
28-12-24 04:26 pm
Bangalore Digital Arrest, Japanese, Crime: ಬೆ...
26-12-24 07:41 pm
Fake Gold Loan, Mangalore Samaja seva sahakar...
25-12-24 02:41 pm