ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ ; ಅಪ್ಪು ನೆನೆದು ಕನ್ನಡದಲ್ಲಿ ಟ್ವೀಟ್​ ಮಾಡಿದ ದೆಹಲಿ ಸಿಎಂ ಕೇಜ್ರಿವಾಲ್

29-10-22 06:23 pm       Bangalore Correspondent   ಕರ್ನಾಟಕ

ಪವರ್​​ಸ್ಟಾರ್​ ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು.

ಬೆಂಗಳೂರು, ಅ.29: ಪವರ್​​ಸ್ಟಾರ್​ ಪುನೀತ್ ರಾಜ್​ಕುಮಾರ್ ಪುಣ್ಯಸ್ಮರಣೆ ಹಿನ್ನೆಲೆ ದೊಡ್ಮನೆ ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದರು.

ಅಪ್ಪು ನೆನೆದು ಪತ್ನಿ ಅಶ್ವಿನಿ ಭಾವುಕರಾದರು. ಶಿವರಾಜ್​ಕುಮಾರ್​ ರಾಘವೇಂದ್ರ ರಾಜ್​ಕುಮಾರ್, ವಿನಯ್​ ರಾಜ್​ಕುಮಾರ್​ ಸೇರಿ ಹಲವರು ಭಾಗಿಯಾಗಿದ್ದರು. ಇನ್ನು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಸಹ ಪುನೀತ್​ ರಾಜ್​ ಕುಮಾರ್​ ಅವರನ್ನು ನೆನೆದು ಟ್ವೀಟ್​ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ – Public TV

ಪುನೀತ್ ರಾಜ್ ಕುಮಾರ್ – Public TV

KMF pays unique tribute to Puneeth Rajkumar- The New Indian Express

Dr. Rajkumar's family members offers pooja to Appu's samadhi: Ashwini  Puneeth Rajkumar emotional - Just Kannada | Online Kannada News | Breaking  Kannada News | Karnataka News | Live Updates | ಕನ್ನಡ ನ್ಯೂಸ್ | ಜಸ್ಟ್ ಕನ್ನಡ

ಮರೆಯದ ಮಾಣಿಕ್ಯನಿಗೆ ನನ್ನದೊಂದು ನಮನ. ಡಾ ಪುನೀತ್ ರಾಜ್‌ಕುಮಾರ್ ಅವರ ಪುಣ್ಯತಿಥಿಯಂದು ನಾನು ಅವರನ್ನು ಗಾಢವಾಗಿ ನೆನಪಿಸಿಕೊಳ್ಳುತ್ತಿದ್ದೇನೆ. ಅವರ ಚಲನಚಿತ್ರಗಳು, ಹಾಡುಗಳು, ಸಾಮಾಜಿಕ ಕಾರ್ಯಗಳ ಮೂಲಕ ಪುನೀತ್​ ನಮ್ಮ ಬಳಿಯೇ ಇದ್ದಾರೆ. ಅವರು ಎಂದಿಗೂ ನಮ್ಮನ್ನು ತೊರೆದಿಲ್ಲ ಎಂದು ನಮಗೆ ಅನಿಸುತ್ತದೆ. ಅವರು ಎಂದೆಂದಿಗೂ ಕರುನಾಡಿನ ಪವರ್ ಸ್ಟಾರ್ ಅಂತಾ ಮೊದಲ ಸಾಲು ಕನ್ನಡದಲ್ಲೇ ಟ್ವೀಟ್​ ಮಾಡಿದ್ದಾರೆ.

Image

Image

Image

ಅಪ್ಪು ಸಮಾಧಿ ಬಳಿ ಜನಸಾಗರ: 

ಪುನೀತ್​ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಹಿನ್ನೆಲೆ ರಾತ್ರಿಯಿಂದಲೇ ಅಪ್ಪು ಸಮಾಧಿ ಬಳಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜನಸಾಗರವೇ ಅಪ್ಪು ಸಮಾಧಿಗೆ ಹರಿದು ಬರುತ್ತಿದೆ. ಅಪ್ಪು ಸಮಾಧಿಗೆ ವಿಶೇಷ ಪುಷ್ಪಾಲಂಕಾರ ಮಾಡಲಾಗಿದೆ. ಸಮಾಧಿ ಪೂರ್ತಿ ಹಸಿರು ಶ್ವೇತಾಂಬರಿ ವರ್ಣದ ಹೂಗಳಿಂದ ಸಿಂಗಾರಗೊಂಡಿದೆ.

ಪುನೀತ್​ ನೆನೆದು ಅಭಿಮಾನಿಗಳು ಕಣ್ಣೀರು: ನಿನ್ನೆಯಷ್ಟೇ ಅಪ್ಪು ಅಭಿನಯದ, ಅಭಿನಯಕ್ಕಿಂತ ಹೆಚ್ಚು ಜೀವಿಸಿದ ಗಂಧದ ಗುಡಿ ಸಿನಿಮಾ ರಿಲೀಸ್ ಆಗಿದೆ. ಅಭಿಮಾನಿಗಳು ಅಪ್ಪು ಜರ್ನಿ ಕಂಡು ಭಾವುಕರಾಗುತ್ತಿದ್ದಾರೆ. ಇಂದು ಅಪ್ಪು ಅಭಿಮಾನಿಗಳಿಗೆ ಸಮಾಧಿ ಬಳಿ ಅಭಿಮಾನಿಗಳಿಗೆ ಅನ್ನದಾನದ ವ್ಯವಸ್ಥೆ ಕೂಡ ಮಾಡಲಾಗಿದೆ.

Today is the first death anniversary of popular sandalwood star Puneeth Rajkumar. The family members of Dr. Rajkumar visited the Appu’s samadhi located at the Kanteerava Studio and offered pooja and prayers. The family members offered Appu’s favourite food and snacks and offered their prayers as per the rituals. The family first offered pooja to the samadhis of Dr. Rajkumar and Parvathamma Rajkumar. Shivarajkumar, Raghavendra Rajkumar, Geetha Shivrajkumar, Puneeth’s wife Ashwini, Poornima, Lakshmi, Vinay Rajkumar, Chinnegowda and Govindaraju accompanied.