ತೂಗುಸೇತುವೆ ಮುರಿದು ಬಿದ್ದು 60ಕ್ಕೂ ಹೆಚ್ಚು ಸಾವು ; ತೇಲುವ ಸೇತುವೆ ಎಂದು ಪ್ರಸಿದ್ಧಿ ಪಡೆದಿದ್ದ ಗುಜರಾತಿನ 'ಟೂರಿಸ್ಟ್ ಸ್ಪಾಟ್'

30-10-22 10:39 pm       HK News Desk   ಕರ್ನಾಟಕ

ಗುಜರಾತಿನ ಮೋರ್ಬಿ ನಗರದಲ್ಲಿ ತೂಗು ಸೇತುವೆ ಮುರಿದು ಬಿದ್ದು 60ಕ್ಕೂ ಹೆಚ್ಚು ಜನರು ಮೃತಪಟ್ಟ ದುರಂತ ನಡೆದಿದೆ.

ಅಹ್ಮದಾಬಾದ್, ಅ.30:ಗುಜರಾತಿನ ಮೋರ್ಬಿ ನಗರದಲ್ಲಿ ತೂಗು ಸೇತುವೆ ಮುರಿದು ಬಿದ್ದು 60ಕ್ಕೂ ಹೆಚ್ಚು ಜನರು ಮೃತಪಟ್ಟ ದುರಂತ ನಡೆದಿದೆ. ಭಾನುವಾರ ಸಂಜೆ ಮುಚ್ಚು ನದಿಯ ಅಡ್ಡಲಾಗಿರುವ ಸೇತುವೆ ಕುಸಿದು ನೀರಿಗೆ ಬಿದ್ದಿದೆ.

ಸ್ಥಳೀಯ ಶಾಸಕ ಮತ್ತು ಗುಜರಾತ್ ಸರಕಾರದಲ್ಲಿ ಪಂಚಾಯತ್ ರಾಜ್ ಸಚಿವನಾಗಿರುವ ಬ್ರಿಜೇಶ್ ಮೆರ್ಜಾ ಸ್ಥಳಕ್ಕೆ ಆಗಮಿಸಿದ್ದು 60ಕ್ಕು ಹೆಚ್ಚು ಜನರು ಸಾವಿಗೀಡಾದ ಶಂಕೆ ವ್ಯಕ್ತಪಡಿಸಿದ್ದಾರೆ. ರಾಜಕೋಟ್ ಸಂಸದ ಮೋಹನ್ ಕುಂದರಿಯಾ, 60 ಶವಗಳನ್ನು ಪತ್ತೆ ಮಾಡಲಾಗಿದೆ ಎಂದಿದ್ದಾರೆ.

ಎನ್ ಡಿ ಆರ್ ಎಫ್ ಮತ್ತು ಇತರ ರಕ್ಷಣಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಮೃತರಲ್ಲಿ ಹಲವರು ಪ್ರವಾಸಿಗರು ಆಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ವಾಹಿನಿಗಳು ವರದಿಯ ಮಾಡಿವೆ. ಪ್ರಧಾನಿ ನರೇಂದ್ರ ಮೋದಿ ತುರ್ತು ಪರಿಹಾರ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಮೃತರ ಕುಟುಂಬಕ್ಕೆ ತಲಾ ನಾಲ್ಕು ಲಕ್ಷ ಪರಿಹಾರ ಘೋಷಿಸಿದ್ದಾರೆ.

ಭಾನುವಾರ ಸಂಜೆ 6.30ರ ವೇಳೆಗೆ ದುರಂತ ನಡೆದಿದೆ. ತೇಲುವ ಸೇತುವೆ ಎಂದು ಪ್ರಸಿದ್ಧಿ ಪಡೆದಿದ್ದ ಕಾರಣ ಟೂರಿಸ್ಟ್ ಸ್ಪಾಟ್ ಆಗಿತ್ತು. ಸೇತುವೆ ನೋಡುವುದಕ್ಕಾಗಿಯೇ ಜನರು ಬರುತ್ತಿದ್ದರು. ಘಟನೆ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಜನರಿದ್ದರು. ಇದರ ಭಾರದಿಂದಾಗಿ ಒಂದು ಪಾರ್ಶ್ವ ಕುಸಿದು ಬಿದ್ದಿದೆ ಎನ್ನಲಾಗಿದೆ. 79 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಆ ಪೈಕಿ 60 ಮಂದಿಯ ಸ್ಥಿತಿ ಗಂಭೀರ ಇದೆ. ಕೆಲವರು ನೀರಿನಲ್ಲಿ ಈಜಿ ದಡ ಸೇರುವುದು, ಅವರನ್ನು ರಕ್ಷಣೆ ಮಾಡುವ ವಿಡಿಯೋ ವೈರಲ್ ಆಗಿದೆ.

At least 60 people have died after a cable bridge collapsed in Gujarat on Sunday evening, state minister Brijesh Merja said. The incident took place on the Machhu river in Morbi district.