ಎಸ್ಸಿ - ಎಸ್ಟಿ ಮೀಸಲು ಆದೇಶಕ್ಕೆ ಕಾನೂನು ಮಾನ್ಯತೆ ಇರಲ್ಲ ; ಶೇ. 50 ಮೀಸಲು ಹೆಚ್ಚಿಸಿದ್ದು ತಪ್ಪಾಗುತ್ತದೆ ; ಸಿದ್ದರಾಮಯ್ಯ 

31-10-22 05:21 pm       HK News Desk   ಕರ್ನಾಟಕ

ಪರಿಶಿಷ್ಟ ಜಾತಿ ಬಗ್ಗೆ ಮೀಸಲು ನೀಡಿ ಆದೇಶ ಮಾಡಿರುವುದಕ್ಕೆ ಕಾಯ್ದೆ ಮಾನ್ಯತೆ ಇಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಕಾಯ್ದೆ ಮಾಡುವ ಬದಲು ಸುಗ್ರೀವಾಜ್ಞೆ ಹೊರಡಿಸಿದೆ.

ಮೈಸೂರು, ಅ.31 : ಪರಿಶಿಷ್ಟ ಜಾತಿ ಬಗ್ಗೆ ಮೀಸಲು ನೀಡಿ ಆದೇಶ ಮಾಡಿರುವುದಕ್ಕೆ ಕಾಯ್ದೆ ಮಾನ್ಯತೆ ಇಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಕಾಯ್ದೆ ಮಾಡುವ ಬದಲು ಸುಗ್ರೀವಾಜ್ಞೆ ಹೊರಡಿಸಿದೆ. ಕೇಂದ್ರ ಸರ್ಕಾರ ಇದನ್ನು 9ನೇ ಶೆಡ್ಯೂಲ್‌ಗೆ ಸೇರಿಸದೇ ಇದ್ದರೆ ಮೀಸಲು ಆದೇಶಕ್ಕೆ ರಕ್ಷಣೆ ಇರಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ. 

1992ರಲ್ಲಿ 9 ನ್ಯಾಯಾಧೀಶರನ್ನು ಒಳಗೊಂಡಿದ್ದ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠ ಆದೇಶ ಮಾಡಿದ್ದು ಅದರನ್ವಯ ಮೀಸಲಾತಿ ಪ್ರಮಾಣ ಶೇ.50ಕ್ಕಿಂತ ಮೀರಬಾರದು.‌ ಈಗ ಬಸವರಾಜ ಬೊಮ್ಮಾಯಿ ಸರ್ಕಾರ ಶೇ.5ರಷ್ಟು ಎಸ್ಸಿ ಮೀಸಲಾತಿ ಹೆಚ್ಚಿಸಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಅಂದರೆ ಶೇ.66ರಷ್ಟು ಆಗುತ್ತೆ. ಇದಕ್ಕೆ ಕಾನೂನು ಮಾನ್ಯತೆ ಇರಲ್ಲ. 9ನೇ ಶೆಡ್ಯೂಲ್‌ಗೆ ಸೇರಿಸದೇ ಇದ್ದರೆ ಮೀಸಲಾತಿಗೆ ರಕ್ಷಣೆ ಇರಲ್ಲ. 

Supreme Court: Latest news, Updates, Photos, Videos and more.

ಆದ್ದರಿಂದಲೇ ನಾನು ವಿಶೇಷ ಅಧಿವೇಶನ ಕರೆದು ಕಾಯ್ದೆ ಮಾಡಿ ಅಂತ ಒತ್ತಾಯ ಮಾಡಿದ್ದೆ. ಡಬಲ್ ಇಂಜಿನ್ ಸರ್ಕಾರ ಅಂತ ಹೇಳಿಕೊಳ್ಳುವ ಬಿಜೆಪಿಯವರು ಮೀಸಲಾತಿ ಹೆಚ್ಚಳಕ್ಕೆ ಕೇಂದ್ರ ಸರ್ಕಾರವನ್ನು ಆಗ್ರಹ ಮಾಡಲಿ.  ಪರಿಶಿಷ್ಟ ಜಾತಿಗೆ ಮೀಸಲಾತಿ ಹೆಚ್ಚಳಕ್ಕೆ ನ್ಯಾ‌. ನಾಗಮೋಹನ್ ದಾಸ್ ಸಮಿತಿ ರಚಿಸಿದ್ದು ನಮ್ಮ ಮೈತ್ರಿ ಸರ್ಕಾರ. ಆಗ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಪ್ರಿಯಾಂಕ ಖರ್ಗೆಗೆ ಹೇಳಿ ಸಮಿತಿ ರಚಿಸಿದ್ದು ನಾವು. ನ್ಯಾ.ನಾಗಮೋಹನ್ ದಾಸ್ ಸಮಿತಿ 20-07-2020ರಲ್ಲಿ ವರದಿ ಕೊಟ್ಟಿತ್ತು. ಅಂದರೆ ಎರಡು ವರ್ಷದ ನಂತರ ಅದನ್ನು ಜಾರಿಗೆ ಒಪ್ಪಿದ್ದಾರೆ. 

It's quota or quit: Sriramulu on Valmiki reservation | Deccan Herald

ಶ್ರೀರಾಮುಲು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಳ ಮಾಡುತ್ತೇವೆ, ರಕ್ತದಲ್ಲಿ ಬರೆದುಕೊಡುತ್ತೇನೆ ಅಂತ ಹೇಳಿದ್ದ. ವಾಲ್ಮೀಕಿ ಸ್ವಾಮೀಜಿ ಧರಣಿ ಕುಳಿತುಕೊಳ್ಳುವರೆಗೂ ಯಾಕೆ ಇವರು ಅದೇಶ ಮಾಡಲಿಲ್ಲ. ಸಂವಿಧಾನಕ್ಕೆ 73, 74ರ ತಿದ್ದುಪಡಿ ತಂದು ಹಿಂದುಳಿದವರು, ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ‌ಪಿ.ವಿ.ನರಸಿಂಹರಾವ್, ರಾಜೀವ್ ಗಾಂಧಿ ಪ್ರಯತ್ನದ ಫಲವಾಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಸಿಕ್ಕಿದೆ. ಇದನ್ನು ವಿರೋಧಿಸಿ ಬಿಜೆಪಿ ರಾಜ್ಯಸಭಾ ಸದಸ್ಯ ರಾಮಾ ಜೋಯಿಸ್ ಸುಪ್ರೀಂಕೋರ್ಟ್‌ ಹೋಗಿದ್ದರು.‌ ಈಗ ಹಿಂದುಳಿದ ವರ್ಗಗಳ ಮೀಸಲಾತಿ ಬಗ್ಗೆ ಮಾತನಾಡುವ ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಎಲ್ಲ ಆಗ ಎಲ್ಲಿಗೆ ಹೋಗಿದ್ದರು. ಬಸವರಾಜ ಬೊಮ್ಮಾಯಿ ಬಿಜೆಪಿ ಸೇರಿದ್ದೇ 2008ರಲ್ಲಿ‌. ಅಲ್ಲಿವರೆಗೂ ಜೆಡಿಯು‌ನಲ್ಲಿದ್ದರು. ಮೀಸಲಾತಿ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲವೆಂದು  ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

No importance of  implementing SC ST quota hike of 50 percent says  Siddaramaiah.