ರಸ್ತೆ ಗುಂಡಿಗೆ 18 ಬಲಿ, ಬೆಂಗಳೂರಿನ ಜನತೆಗೆ ಬಿಜೆಪಿ ಸರ್ಕಾರದಿಂದ ಮರಣ ಭಾಗ್ಯ ; ಡಿಕೆಶಿ ವ್ಯಂಗ್ಯ 

31-10-22 06:46 pm       Bangalore Correspondent   ಕರ್ನಾಟಕ

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಎರಡು ವರ್ಷದಲ್ಲಿ 18 ಜನ ಸತ್ತಿದ್ದು, ಈ ಮೂಲಕ ನೀವು ಜನತೆಗೆ ಮರಣ ಭಾಗ್ಯವನ್ನಂತೂ ನೀಡಿದ್ದೀರಿ. ಇದು ಬೆಂಗಳೂರಿನ ಜನತೆಗೆ ನೀವು ಕೊಟ್ಟಿರುವ ಕೊಡುಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಬೆಂಗಳೂರು, ಅ.31: ಮುಖ್ಯಮಂತ್ರಿಗಳೇ ನೀವು ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದೀರಿ. ಬೆಂಗಳೂರಿನ ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆಯೋ ನಿಮಗೆ ಗೊತ್ತಿರಲ್ಲ. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಎರಡು ವರ್ಷದಲ್ಲಿ 18 ಜನ ಸತ್ತಿದ್ದು, ಈ ಮೂಲಕ ನೀವು ಜನತೆಗೆ ಮರಣ ಭಾಗ್ಯವನ್ನಂತೂ ನೀಡಿದ್ದೀರಿ. ಇದು ಬೆಂಗಳೂರಿನ ಜನತೆಗೆ ನೀವು ಕೊಟ್ಟಿರುವ ಕೊಡುಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 

ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದು ಬೆಂಗಳೂರು ನಗರಕ್ಕೆ ಇಷ್ಟು ದೊಡ್ಡ ಶಕ್ತಿ, ರಾಜ್ಯಕ್ಕೆ ಗೌರವ ಬಂದಿದ್ದರೆ ಅದು ಹಿಂದಿನ ಕಾಂಗ್ರೆಸ್ ಸರ್ಕಾರದಿಂದ. ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯ ಅತಿ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ. ಇದನ್ನು ತೊಡೆದು ಹಾಕಿ ಮತ್ತೆ ರಾಜ್ಯವನ್ನು ನಂಬರ್ 1 ಮಾಡಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.

Student killed in accident 'caused by a bad patch of road' - The Hindu

ಮುಖ್ಯಮಂತ್ರಿಗಳು ಯಾತ್ರೆ, ಸಮಾವೇಶ ಮಾಡುತ್ತಿದ್ದಾರೆ. ಧಮ್ಮು ತಾಕತ್ತು ಇದ್ದರೆ ಯಾತ್ರೆ ನಿಲ್ಲಿಸಿ ಎಂದು ಸವಾಲು ಹಾಕಿದ್ದಾರೆ. ಅವರ ಸವಾಲಿಗೆ ಪ್ರತ್ಯುತ್ತರ ನೀಡಲು ನಾನು ಸಿದ್ಧನಿದ್ದೇನೆ. ನಾವು ಎರಡು ತಿಂಗಳಿಂದ ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದೀರಾ ಎಂದು ಪ್ರತಿನಿತ್ಯ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಮುಖ್ಯಮಂತ್ರಿಗಳೇ, ನಿಮಗೆ ಧಮ್ ಇದ್ದರೆ, ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಕಾಂಗ್ರೆಸ್ ಮಾಡಬಾರದನ್ನು ಮಾಡಿದೆ, ಎಲ್ಲದರ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಮುಖ್ಯಮಂತ್ರಿಗಳೇ ನಿಮಗೆ ಧಮ್ ಇದ್ದರೆ ನಮ್ಮ ಕಾಲ ಹಾಗೂ ನಿಮ್ಮ ಸರ್ಕಾರದ ಅವಧಿಯಲ್ಲಿನ ಪ್ರಕರಣಗಳ ತನಿಖೆಗೆ ಪ್ರತ್ಯೇಕ ಆಯೋಗ ರಚಿಸಿ ಎಂದು ಸವಾಲು ಹಾಕಿದರು. 

ರಾಜ್ಯ ಸರಕಾರದ 40 ಶೇ. ಕಮಿಷನ್ ಭ್ರಷ್ಟಾಚಾರಕ್ಕೆ ಪೊಲೀಸ್ ಇನ್ಸ್ ಪೆಕ್ಟರ್ ಬಲಿಯಾಗಿದ್ದಾರೆ. ನಂದೀಶ್ ಮನೆಗೆ ಭೇಟಿ ನೀಡಲು ನಾನು ಹಾಗೂ ರಾಮಲಿಂಗಾ ರೆಡ್ಡಿ ನಿರ್ಧರಿಸಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿ ಸಚಿವ ಎಂಟಿಬಿ ನಾಗರಾಜ್ ಅವರು 70-80 ಲಕ್ಷ ಕೊಟ್ಟು ಬಂದರೆ ಇನ್ನೇನಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಇದು ಹೃದಯಾಘಾತದ ಸಾವಲ್ಲ, ಸರ್ಕಾರದ ಕೊಲೆ ಎಂದು ಹೇಳಲು ಬಯಸುತ್ತೇನೆ. ಯುವಕರಿಗೆ ಉದ್ಯೋಗ ನೀಡಲು, ಪೋಸ್ಟಿಂಗ್ ಮಾಡಲು ಲಂಚ ಪಡೆಯಲಾಗಿದ್ದು, ಎಲ್ಲ ಹಂತದಲ್ಲೂ ಭ್ರಷ್ಟಾಚಾರ ತಾಂಡವ ಆಡುತ್ತಿರುವುದಕ್ಕೆ ಸಾಕ್ಷಿ ಎಂದು ಆರೋಪಿಸಿದರು.

Total 18 died in two years due to deadly potholes in Bangalore in BJP ruled state.