ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣ ; ಸಚಿವ ಎಂಟಿಬಿ, ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಲೋಕಾಯುಕ್ತಕ್ಕೆ ದೂರು 

31-10-22 10:31 pm       Bangalore Correspondent   ಕರ್ನಾಟಕ

ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣದ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಡಾ. ರಾಘವೇಂದ್ರ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಬೆಂಗಳೂರು, ಅ.31 : ಇನ್ಸ್ ಪೆಕ್ಟರ್ ನಂದೀಶ್ ಸಾವು ಪ್ರಕರಣದ ಬಗ್ಗೆ ಸಚಿವ ಎಂಟಿಬಿ ನಾಗರಾಜ್ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ವಿರುದ್ಧ ಡಾ. ರಾಘವೇಂದ್ರ ಎಂಬವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲನೆ ಸಂಸ್ಥೆ ಅಧ್ಯಕ್ಷ ರಾಘವೇಂದ್ರ ಅವರು ಸಚಿವ ಎಂಟಿಬಿ ನಾಗರಾಜ್ ಇನ್ಸ್ ಪೆಕ್ಟರ್ ದರ್ಜೆ ಹುದ್ದೆಗೆ ಸುಮಾರು 70-80 ಲಕ್ಷ ಹಣ ಲಂಚ ಪಡೆಯುವ ಹೇಳಿಕೆ ಸಂಬಂಧ ದೂರು ಕೊಟ್ಟಿದ್ದಾರೆ.  ಪೊಲೀಸರು ತಾವು ಹುದ್ದೆಗೆ ಸೇರುವ ವೇಳೆ ಇರುವ ಆತ್ಮಸ್ಥೈರ್ಯ ಸೇವೆಯ ಬಳಿಕ ಇರುವುದಿಲ್ಲ. ಪೊಲೀಸರು ಭ್ರಷ್ಟ ಅಧಿಕಾರಿಗಳಾಗಲು ನಮ್ಮ ಸರ್ಕಾರಗಳೇ ಕಾರಣ, ಹೀಗಾಗಿ ಎಂಟಿಬಿ ನಾಗರಾಜ್, ಗೃಹ ಸಚಿವರ ವಿರುದ್ಧ ಉನ್ನತ ಮಟ್ಟದ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.

Cash for post' row: Karnataka minister M T B Nagaraj does a U-turn, accuses  media of twisting remarks | Cities News,The Indian Express

Gunshot welcome' shouldn't happen again, says Karnataka home minister Araga  Jnanendra | Deccan Herald

Decade-old cases await clearance by Karnataka Lokayukta | Deccan Herald

ಇತರೆ ಇಲಾಖೆಗಳಲ್ಲಿ ನಡೆಯುವ ತಹಶೀಲ್ದಾರ್, ಉಪ ವಿಭಾಗಾಧಿಕಾರಿಗಳು, ಸಬ್ ರಿಜಿಸ್ಟ್ರಾರ್ ಗಳಂತಹ ಹುದ್ದೆಗಳಿಗೂ ಲಂಚ ಸ್ವೀಕರಿಸಲಾಗುತ್ತಿದೆ. ಆದ್ದರಿಂದ ಮಾನ್ಯ ಗೃಹ ಮಂತ್ರಿಗಳನ್ನು ವಿಚಾರಣೆಗೊಳಪಡಿಸಬೇಕು. ಅಧಿಕಾರಿಗಳ ವರ್ಗಾವಣೆಗೆ ಉತ್ತಮ ವ್ಯವಸ್ಥೆ ರೂಪಿಸಬೇಕೆಂದು ದೂರಿನಲ್ಲಿ ಮನವಿ ಮಾಡಲಾಗಿದೆ.

Bangalore Inspector Nandish death, complaint filed against MTB and Home Minister Araga Jnanendra at Lokayukta.