ಸಿದ್ದರಾಮಯ್ಯ ಭ್ರಷ್ಟಾಚಾರದ ಕುರಿತು ನಮ್ಮ ಬಳಿ ಹಲವು ಫೈಲ್‌ಗಳಿವೆ ; ನಮ್ಮ ಸರಕಾರದ ಮೇಲೆ ಆರೋಪ ಮಾಡುತ್ತಿರುವ ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು

31-10-22 10:49 pm       HK News Desk   ಕರ್ನಾಟಕ

ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಎಲ್ಲಾ-ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು. ಇದೆಲ್ಲಾ ಸಿದ್ದರಾಮಣ್ಣನ ಒಳ ತಂತ್ರಗಾರಿಕೆ. ಸಾಕ್ಷಿ ಪುರಾವೆ ಕೊಡಿ, ಇಲ್ಲವೇ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ, ಅ 31 : ಭ್ರಷ್ಟಾಚಾರ ಆರೋಪ ಮಾಡುತ್ತಿರುವ ಎಲ್ಲಾ-ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು. ಇದೆಲ್ಲಾ ಸಿದ್ದರಾಮಣ್ಣನ ಒಳ ತಂತ್ರಗಾರಿಕೆ. ಸಾಕ್ಷಿ ಪುರಾವೆ ಕೊಡಿ, ಇಲ್ಲವೇ ಲೋಕಾಯುಕ್ತಕ್ಕೆ ದೂರು ಕೊಡಿ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, "ಕೇವಲ ಮಾಧ್ಯಮದವರ ಮುಂದೆ ಮಾತಾಡೋದಲ್ಲ ಕಾಂಗ್ರೆಸ್ ಲೋಕಾಯುಕ್ತದ ಜೀವ ತೆಗೆದಿತ್ತು, ನಾವು ಓಪನ್ ಮಾಡಿದೀವಿ, ನೀವು ಬೇಕಾದರೆ ಕೇಸ್ ಕೊಡಿ. ನಂತರ ತನಿಖೆಯಾಗುತ್ತದೆ. ನಮ್ಮ ಸರಕಾರದ ಮೇಲೆ ಆರೋಪ ಮಾಡುತ್ತಿರುವ ಗುತ್ತಿಗೆದಾರರು ಕಾಂಗ್ರೆಸ್ ಏಜೆಂಟರು ಮಾಡುತ್ತಿರುವ ಕೆಲಸ. ಕಾಂಗ್ರೆಸ್‌ನಲ್ಲಿ ಅತೀ ಹೆಚ್ಚು ಗುತ್ತಿಗೆದಾರರು ಇದ್ದಾರೆ, ಅವರೆಲ್ಲರೂ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಲು ತಯಾರಾಗಿದ್ದಾರೆ. ಡಿಕೆಶಿ-ಸಿದ್ದರಾಮಯ್ಯ ಗುತ್ತಿಗೆದಾರರಿಗೆ ನಿಮಗೆ ಟಿಕೆಟ್ ಬೇಕೆಂದರೆ ಇಂತ ಕೆಲಸ ಮಾಡಿ ಎಂದು ಹೇಳಿರಬಹುದು" ಎಂದು ತಿಳಿಸಿದರು.

Siddaramaiah dares Bommai for public debate on corruption | Deccan Herald

"ಸಿದ್ದರಾಮಯ್ಯ ಭ್ರಷ್ಟಾಚಾರದ ಕುರಿತು ನಮ್ಮ ಬಳಿ ಫೈಲ್ ಹಲವು ಫೈಲ್‌ಗಳಿವೆ. ಸಮಯ ಬರಲಿ ನಾವೆಲ್ಲ ದಾಖಲೆ ಸಂಗ್ರಹ ಮಾಡುತ್ತಿದ್ದೀವಿ. ಈಗಾಗಲೇ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. 2ನೇ ದೂರಿನಲ್ಲಿ 1.3 ಕೋಟಿ ರೂ. ಚೆಕ್‌ ಬಹಿರಂಗವಾಗಿದೆ, ಇನ್ನು ಹತ್ತಾರು ದಾಖಲೆಗಳಿವೆ, ಸಮಯ ಬರಲಿ ನಾವು ತೋರುಸುತ್ತೇವೆ. ದಾಖಲೆ ಇಟ್ಕೊಂಡು ನಾವು ಹೋಗುತ್ತೇವೆ" ಎಂದು ಕಟೀಲು ಎಚ್ಚರಿಕೆ ನೀಡಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ

Bengaluru News Highlights: CM Bommai blames 'Congress toolkit' as it  demands probe into cash gifts to journalists; Yelenahalli lake in Bengaluru  restored

ವಿಜಯಪುರ ಹಾಗೂ ಕೊಳ್ಳೆಗಾಲದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅತೀ ಹೆಚ್ಚು ಸ್ಥಾನಗಳಲ್ಲಿ ಗೆದ್ದಿದೆ. ಇಡೀ ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅತೀ ಹೆಚ್ಚು ಸ್ಥಾನ ಗೆದ್ದಿದೆ ಮತದಾರರಿಗೆ, ಕಾರ್ಯಕರ್ತರಿಗೆ ಅಭಿನಂದನೆ ತಿಳಿಸುತ್ತೇನೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರ ಆಡಳಿತವನ್ನು ಜನ ಮೆಚ್ಚಿದಾರೆ ಅನ್ನೋದಕ್ಕೆ ಇದು ಉದಾಹರಣೆ. ಅಲ್ಲದೆ ಕಾಂಗ್ರೆಸ್‌ನವರು 40 ಪರ್ಸೆಂಟ್ ಕಮಿಷನ್‌ ಆರೋಪ ಮಾಡಿದ್ದರು, ಆದರೆ ಜನತೆ ಅದನ್ನು ಸುಳ್ಳು ಎಂದು ಜನರು ಮತ ನೀಡುವ ಮೂಲಕ ಅದನ್ನು ಸುಳ್ಳು ಮಾಡಿದ್ದಾರೆ. ಮುಂದಿನ ಚುನಾಚಣೆಗೆ ಇದು ದಿಕ್ಸೂಚಿ ಎಂದು ಕಟೀಲು ವಿಶ್ವಾಸ ವ್ಯಕ್ತಪಡಿಸಿದರು. ‌

We have many files of  Siddaramaiah over Corruption slams Nalin Kumar in Hubbali.