ಬ್ರೇಕಿಂಗ್ ನ್ಯೂಸ್
01-11-22 01:15 pm Bengalore Correspondent ಕರ್ನಾಟಕ
ಬೆಂಗಳೂರು, ನ.01: ರಾಜ್ಯ ಸರ್ಕಾರ 11 ಐಪಿಎಸ್ ಮತ್ತು ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಎಸಿಬಿಯಲ್ಲಿ ಕೆಲಸ ಇಲ್ಲದೆ ಕುಳಿತಿದ್ದ ಅಧಿಕಾರಿಗಳಿಗೆ ಕೆಲಸ ಕೊಟ್ಟಿದೆ. ಎಸಿಬಿ ಎಡಿಜಿಪಿಯಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಬೆಂಗಳೂರಿನ ಕೆ ಎಸ್ ಆರ್ ಪಿ ಎಡಿಜಿಪಿ ಆಗಿ ನೇಮಿಸಲಾಗಿದೆ. ಕೆಎಸ್ ಆರ್ ಪಿಯ ಎಡಿಜಿಪಿ ರವಿ ಎಸ್ ಅವರನ್ನು ಬೆಂಗಳೂರಿನ ಪಿಸಿ ಎಎಸ್ ಐಜಿಪಿಯನ್ನಾಗಿ ವರ್ಗ ಮಾಡಲಾಗಿದೆ.
ಹುದ್ದೆ ನಿರೀಕ್ಷೆಯಲ್ಲಿದ್ದ ಅಜಯ್ ಹೀಲೋರಿ ಅವರನ್ನು ಡಿಸಿಆರ್ ಇ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ಎಸಿಬಿ ಎಸ್ಪಿಯಾಗಿದ್ದ ಯತೀಶ್ ಚಂದ್ರ ಜಿ.ಹೆಚ್ ಅವರನ್ನು ಕ್ರೈಂ-3 ವಿಭಾಗದ ಡಿಸಿಪಿಯಾಗಿ ನೇಮಿಸಿದೆ. ಕಲಬುರ್ಗಿಯಲ್ಲಿ ಎಸಿಬಿ ಎಸ್ಪಿಯಾಗಿದ್ದ ಅಮರನಾಥ್ ರೆಡ್ಡಿ ವೈ ಅವರನ್ನು ಕಲಬುರ್ಗಿ ಗುಪ್ತಚರ ವಿಭಾಗದ ಎಸ್ಪಿಯಾಗಿ ನೇಮಿಸಲಾಗಿದೆ. ಬಳ್ಳಾರಿಯಲ್ಲಿ ಎಸಿಬಿ ಎಸ್ಪಿಯಾಗಿದ್ದ ಶ್ರೀಹರಿ ಬಾಬು ಬಿಎಲ್ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿಯಾಗಿ ನೇಮಕ ಮಾಡಲಾಗಿದೆ. ಬೆಂಗಳೂರು ಎಸಿಬಿಯ ಎಸ್ಪಿಯಾಗಿದ್ದ ಡಾ.ಶೋಭಾರಾಣಿ ವಿ.ಜೆ ಅವರನ್ನು ಬಿಎಂಟಿಎಫ್ ಎಸ್ಪಿಯನ್ನಾಗಿ ನೇಮಕ ಮಾಡಲಾಗಿದೆ.
ಮೈಸೂರು ವಿಭಾಗದ ಎಸಿಬಿ ಎಸ್ಪಿಯಾಗಿದ್ದ ಸಜಿತ್ ವಿಜೆ ಅವರನ್ನು ಕರ್ನಾಟಕ ಲೋಕಾಯುಕ್ತ ಎಸ್ಪಿಯನ್ನಾಗಿ ನೇಮಿಸಿದೆ. ರಾಂ ಎಲ್ ಅರಶಿದ್ದಿ ಅವರನ್ನು ವಿಜಯಪುರ ಜಿಲ್ಲೆಯ ಹೆಚ್ಚುವರಿ ಎಸ್ಪಿಯಿಂದ ವರ್ಗಾವಣೆ ಮಾಡಿ ಕರ್ನಾಟಕ ಲೋಕಾಯುಕ್ತ ಎಸ್ಪಿಯನ್ನಾಗಿ ನೇಮಿಸಿದೆ. ಬೆಳಗಾವಿಯಲ್ಲಿ ಎಸಿಬಿ ಎಸ್ಪಿ ಬಾಬಸಾಬ್ ನೇಮಗೌಡ ಅವರನ್ನು ಬೆಳಗಾವಿಯ ಗುಪ್ತಚರದ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ದ.ಕ.ಕ್ಕೆ ಎಂ.ಆರ್ ರವಿ ಜಿಲ್ಲಾಧಿಕಾರಿ
ಇದೇ ವೇಳೆ, ರಾಜ್ಯ ಸರ್ಕಾರ ಆಡಳಿತ ಯಂತ್ರಕ್ಕೂ ಸರ್ಜರಿ ಮಾಡಿದ್ದು ಎಂಟು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ರಾಜೀವ್ ಗಾಂಧಿ ವಿವಿಯಲ್ಲಿ ರಿಜಿಸ್ಟ್ರಾರ್ ಆಗಿದ್ದ ರವಿ ಕುಮಾರ್ ಎಂ.ಆರ್ ಅವರನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ. ದ.ಕ. ಜಿಪಂ ಸಿಇಓ ಆಗಿದ್ದ ಡಾ.ಕುಮಾರ್ ಅವರನ್ನು ವರ್ಗಾವಣೆ ಜಿಲ್ಲಾಧಿಕಾರಿ ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತ ಮಾಡಲಾಗಿದೆ.
ಅನ್ನೀಸ್ ಕಣ್ಮಿ ಜೋಯ್ ಅವರನ್ನು ಬೆಂಗಳೂರಿನ ಕಮರ್ಷಿಯಲ್ ಟ್ಯಾಕ್ಸ್ ಹೆಚ್ಚುವರಿ ಕಮೀಷನರ್ ಆಗಿ ನೇಮಿಸಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದ ಚಾರುಲತಾ ಸೋಮಲ್ ಅವರನ್ನು ನವದೆಹಲಿಯ ಕರ್ನಾಟಕ ಭವನದ ಎಆರ್ ಸಿ ಆಗಿ ನೇಮಿಸಿದೆ.
ಹುದ್ದೆಯ ನಿರೀಕ್ಷೆಯಲ್ಲಿದ್ದ ಐಎಎಸ್ ಅಧಿಕಾರಿ ಬಸವರಾಜೇಂದ್ರ ಹೆಚ್ ಅವರನ್ನು ಸ್ಕಿಲ್ ಡೆಲವೆಲಪ್ ಮೆಂಟ್, ಎಂಟರ್ ಪ್ರೈನರ್ ಮತ್ತು ಲೈವ್ಲಿ ಹುಡ್ ಇಲಾಖೆಯ ಜಾಯಿಂಟ್ ಸೆಕ್ರೇಟರಿಯಾಗಿ ನೇಮಕ ಮಾಡಿದೆ. ಡಾ.ವಾಸಂತಿ ಅಮರ್ ಬಿವಿ, ಕೆ ಎಸ್ ಎಂ ಸಿ ಎಲ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಹುದ್ದೆಯಿಂದ ಬೆಂಗಳೂರು ನಗರ ನಾರ್ಥ್ ವಿಭಾಗದ ವಿಶೇಷ ಡೆಪ್ಯೂಟಿ ಕಮೀಷನರ್ ಆಗಿ ನೇಮಕ ಮಾಡಲಾಗಿದೆ.
Seemant Kumar Singh transfered to KSRP, Ravikumar M R new DC of Dakshina Kannada. IAS officer Ravikumar M R has been appointed the next deputy commissioner of Dakshina Kannada. He is taking charge from Dr Kumara who was appointed as in-charge DC after the transfer of Dr Rajendra K V to Mysuru
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am