ಸಿದ್ದರಾಮಯ್ಯ ವಿರುದ್ದ ಕಿಕ್ ಬ್ಯಾಕ್ ಆರೋಪ ; 1.3 ಕೋಟಿ ರೂ. ಚೆಕ್ ಪಾವತಿ ಬಗ್ಗೆ ಬಿಜೆಪಿ ಲೋಕಾಯುಕ್ತಕ್ಕೆ ದೂರು

02-11-22 01:43 pm       Bangalore Correspondent   ಕರ್ನಾಟಕ

ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಚೆಕ್ ಮೂಲಕ ಕಿಕ್ ಬ್ಯಾಕ್ ಪಡೆದಿದ್ದಾರೆಂದು ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಿದ್ದಾರೆ.  

ಬೆಂಗಳೂರು, ನ.2: ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಅಧಿಕಾರಾವಧಿಯಲ್ಲಿ ಚೆಕ್ ಮೂಲಕ ಕಿಕ್ ಬ್ಯಾಕ್ ಪಡೆದಿದ್ದಾರೆಂದು ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದೆ. ಬಿಜೆಪಿ ಮುಖಂಡ ಎನ್.ಆರ್ ರಮೇಶ್ ಲೋಕಾಯುಕ್ತಕ್ಕೆ ದಾಖಲೆ ಸಹಿತ ದೂರು ನೀಡಿದ್ದಾರೆ.  

ಸಿದ್ದರಾಮಯ್ಯ ಸಾಲದ ರೂಪದಲ್ಲಿ 1.3 ಕೋಟಿ ರೂ. ಹಣ ಪಡೆದು ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದರು.  ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಬೆಂಗಳೂರು ಟರ್ಫ್ ಕ್ಲಬ್ ಉಸ್ತುವಾರಿ ಹುದ್ದೆಗೆ 2014 ರಲ್ಲಿ ವಿವೇಕಾನಂದ ಎಂಬವರು ನೇಮಕವಾಗಿದ್ದರು. ಅದಕ್ಕಾಗಿ ವಿವೇಕಾನಂದ ಬಳಿಯಿಂದ 1.3 ಕೋಟಿ ರೂ. ಪಡೆದಿದ್ದಾರೆಂದು ಆರೋಪ ಕೇಳಿಬಂದಿದೆ. 

Siddaramaiah dares Bommai for public debate on corruption | Deccan Herald

ವಿವೇಕಾನಂದ ಬಳಿ 1.3 ಕೋಟಿ ರೂ.ವನ್ನು ಚೆಕ್ ಮೂಲಕ ಪಡೆದಿದ್ದಾಗಿ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದಾಖಲೆ ಬಿಡುಗಡೆ ಮಾಡಿದ್ದಾರೆ. ಮೂರು ವರ್ಷದ ಅವಧಿಗೆ ಉಸ್ತುವಾರಿ ನೇಮಕ ಮಾಡಿ ಸಿದ್ದರಾಮಯ್ಯ ಆದೇಶ  ಮಾಡಿದರು. ಇದಕ್ಕಾಗಿ ಕಿಕ್ ಬ್ಯಾಕ್ ಪಡೆದಿದ್ದಾಗಿ ಆರೋಪಿಸಲಾಗಿದೆ. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಮಾಹಿತಿಯಲ್ಲಿ ಸಿದ್ದರಾಮಯ್ಯ, ತಾನು ವಿವೇಕಾನಂದ ಬಳಿಯಿಂದ ಸಾಲ ಪಡೆದಿದ್ದಾಗಿ ಮಾಹಿತಿ ನೀಡಿದ್ದರು. 

ಕೇಂದ್ರ ಗೃಹ ಇಲಾಖೆ ನಿಯಮದ ಪ್ರಕಾರ, ಅಧಿಕಾರದಲ್ಲಿದ್ದವರು ಯಾವುದೇ ಹುದ್ದೆ ನೀಡಿ ಉಡುಗೊರೆ, ಚೆಕ್ ಪಡೆಯುವಂತಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಕಾಲಂ 7, 8, 9, 10, 13 ಅಡಿ ದುಡ್ಡು ಪಡೆದಿರೋದು ಶಿಕ್ಷಾರ್ಹ ಅಪರಾಧವಾಗಿದೆ. ಈ ಬಗ್ಗೆ ಎನ್‌ ಆರ್‌ ರಮೇಶ್‌ ಅವರು ದೂರು ನೀಡಿದ್ದು ತ‌ನಿಖೆಗೆ ಆಗ್ರಹಿಸಿದ್ದಾರೆ.

He alleged that Siddaramaiah had made L Vivekananda, a hotelier from Mysuru, the steward of Bangalore Turf Club after receiving Rs 1,30,00,000 from him through a cheque. “I am of the opinion that Siddaramaiah received the money from Vivekanand only to make him a Steward of Bangalore Turf Club.