ಹೆಂಡತಿ ಹೊಡೆಯುತ್ತಾಳೆಂದು ಪ್ರಧಾನಿ ಮೋದಿಗೆ ದೂರಿತ್ತ ಇಂಜಿನಿಯರ್ ಪತಿರಾಯ ! ಟ್ವಿಟರ್ ಪೋಸ್ಟ್ ವೈರಲ್

02-11-22 10:46 pm       Bangalore Correspondent   ಕರ್ನಾಟಕ

ಹೆಂಡತಿ ಹೊಡೆಯುತ್ತಾಳೆ ಎಂದು ಪತಿರಾಯನೊಬ್ಬ ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಿದ ಟ್ವೀಟ್ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜಾಲತಾಣದಲ್ಲಿ ಭಾರೀ ಆಕರ್ಷಣೆಗೂ ಕಾರಣವಾಗಿದೆ. 

ಬೆಂಗಳೂರು, ನ.2 : ಹೆಂಡತಿ ಹೊಡೆಯುತ್ತಾಳೆ ಎಂದು ಪತಿರಾಯನೊಬ್ಬ ಪ್ರಧಾನಿ ನರೇಂದ್ರ ಮೋದಿಗೆ ದೂರು ನೀಡಿದ ಟ್ವೀಟ್ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜಾಲತಾಣದಲ್ಲಿ ಭಾರೀ ಆಕರ್ಷಣೆಗೂ ಕಾರಣವಾಗಿದೆ. 

ಯದುನಂದನ್ ಆಚಾರ್ಯ ಎನ್ನುವ ವ್ಯಕ್ತಿಯ ಖಾತೆಯಲ್ಲಿ ಈ ಬಗ್ಗೆ ಪ್ರಧಾನಿ ಮೋದಿಗೆ ಟ್ವೀಟ್ ಮಾಡಲಾಗಿದೆ. ”ಯಾರಾದರೂ ನನಗೆ ಸಹಾಯ ಮಾಡುವರೇ? ಅಥವಾ ಇಂಥದು ಸಂಭವಿಸಿದಾಗ ಯಾರಾದರೂ ನನಗೆ ಸಹಾಯ ಮಾಡಿದ್ದಾರೆಯೇ? ಇಲ್ಲ, ಏಕೆಂದರೆ ನಾನು ಒಬ್ಬ ಗಂಡಸು! ನನ್ನ ಹೆಂಡತಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದಳು, ಇದು ನೀವು ಹೆಚ್ಚಿಸುವ ನಾರಿ ಶಕ್ತಿಯೇ? ಇದಕ್ಕಾಗಿ ನಾನು ಅವಳ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಹಾಕಬಹುದೇ? ಇಲ್ಲ!” ಎಂದು ಗಾಯಗೊಂಡಿರುವ ಫೋಟೋ ಸಮೇತ ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ, ಕಾನೂನು ಸಚಿವ ಕಿರಣ್ ರಿಜಿಜು, ಬೆಂಗಳೂರು ಪೊಲೀಸ್ ಆಯುಕ್ತರನ್ನು ಟ್ಯಾಗ್ ಮಾಡಿದ್ದಾರೆ.

ಪೊಲೀಸರು ಟ್ವೀಟ್ ಗೆ ಪ್ರತಿಕ್ರಿಯಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಯದುನಂದನ್ ಆಚಾರ್ಯ ತಾನೊಬ್ಬ ಇಂಜಿನಿಯರ್, ಮಾಜಿ-ಬೈಕರ್, ಬಹು ಪ್ರಕರಣಗಳಲ್ಲಿ ಸುಳ್ಳು ಆರೋಪಿಯಾಗಿದ್ದೇನೆ. ಭಾರತದಲ್ಲಿ ಲಿಂಗ ಪಕ್ಷಪಾತ ಕಾನೂನುಗಳ ವಿರುದ್ಧ ಹೋರಾಟ ಮಾಡುತ್ತಿರುವುದಾಗಿ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

A Karnataka man has complained to the office of the Prime Minister (PMO) seeking help and protection from his wife, who 'regularly beats him'. The man has also alleged that he was facing threat to life from his wife.Yadunandan Acharya from Bengaluru sent his grievances to the PMO through social media. He also tagged his tweet to the handles of Bengaluru City Police Commissioner Pratap Reddy and Union Minister for Law and Justice Kiren Rijiju.