ಬೆಂಗಳೂರಿನಲ್ಲಿ ಜನರ ಪ್ರಾಣ ತೆಗೆವ ರಸ್ತೆ ಗುಂಡಿ ; ಮಲ್ಲೇಶ್ವರದಲ್ಲಿ ಗುಂಡಿಗೆ ಕಲ್ಲು, ಮಣ್ಣು ಮುಚ್ಚಿದ ವೃದ್ಧ ದಂಪತಿ, ವಿಡಿಯೋ ವೈರಲ್

04-11-22 05:20 pm       Bangalore Correspondent   ಕರ್ನಾಟಕ

ಬೆಂಗಳೂರಿನಲ್ಲಿ ರಸ್ತೆ ಗುಂಡಿ, ಅದರ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವಲ್ಲೇ ಮಲ್ಲೇಶ್ವರದಲ್ಲಿ ರಸ್ತೆ ಗುಂಡಿಯಿಂದಾಗಿ ಸಮಸ್ಯೆ ಅನುಭವಿಸಿದ ವೃದ್ಧ ದಂಪತಿ ತಾವೇ ಚೀಲದಲ್ಲಿ ಮಣ್ಣು ತಂದು ಗುಂಡಿ ಮುಚ್ಚಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಬೆಂಗಳೂರು, ನ.4: ಬೆಂಗಳೂರಿನಲ್ಲಿ ರಸ್ತೆ ಗುಂಡಿ, ಅದರ ಬಗ್ಗೆ ಸರಕಾರ ನಿರ್ಲಕ್ಷ್ಯ ವಹಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. ಇದರ ನಡುವಲ್ಲೇ ಮಲ್ಲೇಶ್ವರದಲ್ಲಿ ರಸ್ತೆ ಗುಂಡಿಯಿಂದಾಗಿ ಸಮಸ್ಯೆ ಅನುಭವಿಸಿದ ವೃದ್ಧ ದಂಪತಿ ತಾವೇ ಚೀಲದಲ್ಲಿ ಮಣ್ಣು ತಂದು ಗುಂಡಿ ಮುಚ್ಚಿದ್ದು, ಇದರ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.

ಮಲ್ಲೇಶ್ವರದಲ್ಲಿ ರಸ್ತೆ ಗುಂಡಿಗೆ ಬಿದ್ದು ಕೂದಲೆಳೆಯಲ್ಲಿ ತಮ್ಮ ಪತಿ ಬಚಾವ್ ಆಗಿದ್ದರು. ಇದರಿಂದ ಸಿಟ್ಟಿಗೆದ್ದ ಪತ್ನಿ ನಾಗಮಣಿ ಎಂಬ ಮಹಿಳೆ ತಾನೇ ಪತಿಯೊಂದಿಗೆ ಸೇರಿ ರಸ್ತೆ ಗುಂಡಿಗೆ ಮಣ್ಣು ಹಾಕಿ ಮುಚ್ಚಿದ್ದಾರೆ. ಅಲ್ಲದೆ, ಅದರ ವಿಡಿಯೋವನ್ನು ತಾವೇ ಫೇಸ್ಬುಕ್ ನಲ್ಲಿ ಹಾಕಿದ್ದು, ಸಾರ್ವಜನಿಕರು ಇನ್ನಾದ್ರೂ ರಸ್ತೆ ಗುಂಡಿ ಮುಚ್ಚಲು ಧ್ವನಿಯೆತ್ತಿ ಎಂದು ಹೇಳಿದ್ದಾರೆ. ಈ ವಿಡಿಯೋ ಭಾರೀ ಸಂಖ್ಯೆಯಲ್ಲಿ ಷೇರ್ ಆಗಿದ್ದು, ಸಾವಿರಾರು ಮಂದಿ ಲೈಕ್ಸ್ ಕೊಟ್ಟಿದ್ದಾರೆ.

ಮಲ್ಲೇಶ್ವರದ ಬಸ್ ನಿಲ್ದಾಣ ಮತ್ತು 18ನೇ ಕ್ರಾಸ್ ನಲ್ಲಿ ರಸ್ತೆ ಗುಂಡಿಯಿಂದಾಗಿ ತೊಂದರೆಯಾಗಿದೆ. ಈಗಷ್ಟೇ ನನ್ನ ಪತಿ ಗುಂಡಿಗೆ ಬಿದ್ದು ಅಪಾಯದಿಂದ ಪಾರಾಗಿ ಬಂದಿದ್ದಾರೆ. ಹಾಗಾಗಿ ಕಲ್ಲು, ಮಣ್ಣು ಮುಚ್ಚಿ ಬಂದಿದ್ದೇನೆ, ಇದರಿಂದ ಗುಂಡಿಗೆ ಬಿದ್ದರೂ ಪ್ರಾಣ ಹೋಗದಂತೆ ತಾತ್ಕಾಲಿಕ ದುರಸ್ತಿ ಮಾಡಿದ್ದೇನೆ. ರಸ್ತೆ ಗುಂಡಿ ಮುಚ್ಚಲು ಸಾರ್ವಜನಿಕರು ಧ್ವನಿಯೆತ್ತುವಂತೆ ನಾಗಮಣಿ ಹೇಳಿದ್ದು ಸರಕಾರಕ್ಕೆ ಚಾಟಿ ಬೀಸಿದಂತಾಗಿದೆ. ಕೆಲವರು ಇದೇ ವಿಡಿಯೋವನ್ನು ಟ್ವಿಟರ್ ನಲ್ಲಿ ಹಾಕಿದ್ದು, ಸಿಎಂ ಬೊಮ್ಮಾಯಿ ಮತ್ತು ಬಿಬಿಎಂಪಿ ಕಮಿಷನರ್ ಗೆ ಟ್ಯಾಗ್ ಮಾಡಿದ್ದಾರೆ. ರಸ್ತೆ ಗುಂಡಿ ಮುಚ್ಚಲು ಇನ್ನೆಷ್ಟು ದಿನ ಬೇಕು. ಎಷ್ಟು ಜನರ ಪ್ರಾಣ ಹೋಗಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

A Bengaluru-based couple went viral on social media after a video of them filling up a pothole made rounds. The couple took the action as the husband had met with a serious accident and escaped death closely, a Twitter page said. The video shows them bringing a sack of soil to the accident spot and filling up the pothole.