ದೈವಾರಾಧನೆ ಮೂಢನಂಬಿಕೆ, ದೈವ ನರ್ತಕರಿಗೆ ಮಾಸಾಶನ ಕೊಡಬಾರದಿತ್ತು.. ರಿಷಬ್ ಸತ್ಯ ಹೇಳುತ್ತಿದ್ದರೆ ಹೊಡೆದು ಸಾಯಿಸ್ತಿದ್ದರು!

05-11-22 07:47 pm       HK News Desk   ಕರ್ನಾಟಕ

ಭೂತಾರಾಧನೆ ಸಮಯದಲ್ಲಿ ದೇವರು ಮೈಯಲ್ಲಿ ಬರೋದು ಸತ್ಯ ಅಲ್ಲವೇ ಅಲ್ಲ. ಕಾಂತಾರ ಸಿನಿಮಾದಲ್ಲಿ ತೋರಿಸಿದ್ದು ಸತ್ಯ ಅಲ್ಲ. ದೈವ ನರ್ತಕರಿಗೆ ಸರ್ಕಾರ ಎರಡು ಸಾವಿರ ರೂಪಾಯಿ ಮಾಸಾಶನ ಕೊಡಬಾರದಿತ್ತು ಎಂದು ವಿಚಾರವಾದಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರು, ನ.5: ಭೂತಾರಾಧನೆ ಸಮಯದಲ್ಲಿ ದೇವರು ಮೈಯಲ್ಲಿ ಬರೋದು ಸತ್ಯ ಅಲ್ಲವೇ ಅಲ್ಲ. ಕಾಂತಾರ ಸಿನಿಮಾದಲ್ಲಿ ತೋರಿಸಿದ್ದು ಸತ್ಯ ಅಲ್ಲ. ದೈವ ನರ್ತಕರಿಗೆ ಸರ್ಕಾರ ಎರಡು ಸಾವಿರ ರೂಪಾಯಿ ಮಾಸಾಶನ ಕೊಡಬಾರದಿತ್ತು ಎಂದು ವಿಚಾರವಾದಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್‌ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ದೈವ ನರ್ತಕರ ಜೀವನಕ್ಕೆ ಬೇರೆ ದಾರಿ ತೋರಿಸಬೇಕು. ಅದರ ಬದಲಾಗಿ ಸರ್ಕಾರ ದೈವಾರಾಧನೆ ಹೆಸರಲ್ಲಿ ಮೂಢನಂಬಿಕೆಗೆ ಪ್ರಾಮುಖ್ಯತೆ ನೀಡಿದಂತಾಗಿದೆ. ದೈವ ನರ್ತಕರು ʻಓʼ ಅಂತ ಚೀರಾಡುವುದು, ಕುಣಿಯುವುದು ದೇವರು ಮೈಮೇಲೆ ಬರುವುದರಿಂದ ಅಲ್ಲ. ಅದಕ್ಕೆ ಬೇರೆ ಕಾರಣವಿದೆ ಎಂದು ತಿಳಿಸಿದ್ದಾರೆ.

ʻಕಾಂತಾರʼ ಚಿತ್ರದ ಕುರಿತು ಮಾತನಾಡಿ, ರಿಷಬ್ ಶೆಟ್ಟಿ ಪಕ್ಕಾ ವಿಚಾರವಾದಿ‌, ವೈಚಾರಿಕ ವ್ಯಕ್ತಿ. ಆದರೆ ತನ್ನ ವಿಚಾರವನ್ನು ನೇರವಾಗಿ ಹೇಳಿ ಹೊಡೆಸಿಕೊಳ್ಳಲು ಆತ ತಯಾರಿಲ್ಲ. ಹೀಗಾಗಿ ಈ ಮಾರ್ಗ ಅನುಸರಿಸಿದ್ದಾನೆ. ಆತ ತನ್ನ ವಿಚಾರವನ್ನು ನೇರವಾಗಿ ಹೇಳಿದ್ರೆ ಈ ಮೂರ್ಖ ಜನರು ಆತನನ್ನು ಹಿಡಿದು ಹೊಡೆಯುತ್ತಾರೆ, ಪರದೆಗೆ ಬೆಂಕಿ ಹಚ್ಚುತ್ತಾರೆ. ಕೆಲವು ಜನರ ತಲೆ ಅಷ್ಟರಮಟ್ಟಿಗೆ ಕೆಟ್ಟಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸತ್ಯವನ್ನು ನೇರವಾಗಿ ಹೇಳಿದರೆ ಆತನನ್ನು ಕೊಂದು ಹಾಕುತ್ತಾರೆ, ಇದು ಆತನಿಗೆ ಬೇಕಿಲ್ಲ. ಆತ ಇನ್ನೂ ಬದುಕಬೇಕು ಅಂತ ಬಹಳಷ್ಟು ಬುದ್ಧಿವಂತಿಕೆಯಿಂದ ಸಿನಿಮಾ ಮಾಡಿದ್ದಾನೆ. ಕಾಂತಾರ ಸಿನಿಮಾ ನೋಡಲು ಬಹಳಷ್ಟು ಬುದ್ಧಿವಂತಿಕೆ ಬೇಕು ಎಂದು ಮಾತನಾಡಿದ್ದಾರೆ.

Daiva Aradhane is a false belief, govt should have not given pension for Daiva Narthakas says social activist Lalitha Naik saprks controversy.