ಹಿಂದು ಎನ್ನುವುದು ಅಶ್ಲೀಲತೆ ಸೂಚಿಸುವ ಪದ, ಪರ್ಶಿಯನ್ ಮೂಲದ್ದು, ಭಾರತದ್ದಲ್ಲ ; ಸತೀಶ್ ಜಾರಕಿಹೊಳಿ ಹೇಳಿಕೆ

07-11-22 10:14 pm       HK News Desk   ಕರ್ನಾಟಕ

ಹಿಂದು ಎನ್ನುವುದು ಅಶ್ಲೀಲತೆ ಸೂಚಿಸುವ ಪದವಾಗಿದ್ದು ಭಾರತೀಯ ಪದವಲ್ಲ. ಪರ್ಶಿಯನ್ ಮೂಲದ ಪದ. ಕೆಲವು ಗ್ರಂಥಗಳನ್ನು ಮುಂದಿಟ್ಟು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿ, ನ.7: ಹಿಂದು ಎನ್ನುವುದು ಅಶ್ಲೀಲತೆ ಸೂಚಿಸುವ ಪದವಾಗಿದ್ದು ಭಾರತೀಯ ಪದವಲ್ಲ. ಪರ್ಶಿಯನ್ ಮೂಲದ ಪದ. ಕೆಲವು ಗ್ರಂಥಗಳನ್ನು ಮುಂದಿಟ್ಟು ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಾನವ ಬಂಧುತ್ವ ವೇದಿಕೆ ವತಿಯಿಂದ ನಿಪ್ಪಾಣಿ ಪಟ್ಟಣದಲ್ಲಿ ಆಯೋಜಿಸಿದ್ದ ಮನೆ ಮನೆಗೆ ಬುದ್ಧ, ಅಂಬೇಡ್ಕರ್, ಬಸವ ಎನ್ನುವ ಕಾರ್ಯಕ್ರಮದಲ್ಲಿ ಜಾರಕಿಹೊಳಿ ಈ ಮಾತುಗಳನ್ನಾಡಿದ್ದಾರೆ. ಕೆಲವರು ಸಮಯ ಕಳೆಯುವುದಕ್ಕಾಗಿ ಬರೆದಿದ್ದ ಪುಸ್ತಕಗಳನ್ನೇ ಮಹಾನ್ ಗ್ರಂಥ ಎನ್ನುವಂತೆ ತೋರಿಸಲಾಗುತ್ತಿದೆ. ಈಗ ಅವೇ ಗ್ರಂಥಗಳು ನಮ್ಮನ್ನು ಆಳುತ್ತಿವೆ. ಮುಂದಕ್ಕೆ ಅವನ್ನೇ ಮುಂದಿಟ್ಟು ದೇವರು, ಧರ್ಮ, ಜಾತಿ ಎನ್ನುವ ಹೆಸರಲ್ಲಿ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನಮಗೆ ತಪ್ಪು ಇತಿಹಾಸವನ್ನು ಹೇಳಿ ಕೊಡಲಾಗುತ್ತಿದೆ. ಶಿವಾಜಿ, ತುಕಾರಾಮ, ಸಂಭಾಜಿ, ಬಸವರ ಬಗ್ಗೆ ಇತಿಹಾಸವನ್ನು ತಿರುಚಿ ಹೇಳಲಾಗುತ್ತಿದೆ. ಶಿವಾಜಿ ಕಾಲದಲ್ಲಿ ಹಿಂದು- ಮುಸ್ಲಿಂ ದ್ವೇಷ ಇರಲಿಲ್ಲ. ಅವರು ಎಲ್ಲರನ್ನೂ ಸಮಾನವಾಗಿ ಕಂಡವರು. ಆದರೆ ಈಗ ಹಿಂದು- ಮುಸ್ಲಿಂ- ದಲಿತ ಎನ್ನುವ ಕಾರಣಕ್ಕೆ ವಿಭಜಿಸಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಟ ಮಾಡಿಸುತ್ತಿದ್ದಾರೆ. ಜಗತ್ತಿನಲ್ಲಿ ಶಿವಾಜಿ ಅವರದ್ದು ಒಂದೇ ಒಂದು ಪೇಂಟಿಂಗ್ ಇರುವುದು. ಅದು ಕುಲಕರ್ಣಿಯೋ, ದೇಶಪಾಂಡೆಯೋ ರಚಿಸಿದ್ದಲ್ಲ. ಮಹಮ್ಮದ್ ಮದಾರಿ ಎನ್ನುವ ಮುಸ್ಲಿಂ ಕಲಾವಿದ ರಚಿಸಿದ್ದು.

ಇಂಥ ಒಂದು ಸಭೆಯ ಮೂಲಕ ಪರಿವರ್ತನೆ ಸಾಧ್ಯವಿಲ್ಲ. ರಾಜ್ಯಾದ್ಯಂತ ಇಂತಹ ಸರಣಿ ಸಭೆಗಳನ್ನು ನಡೆಸಬೇಕಾಗಿದೆ. ಇದು ಟ್ರೈಲರ್ ಅಷ್ಟೇ, ಪಿಕ್ಚರ್ ಅಭಿ ಬಾಕೀ ಹೈ ಎಂದು ಸೂಚ್ಯವಾಗಿ ಹೇಳಿದರು ಸತೀಶ್. ಕಾರ್ಯಕ್ರಮದಲ್ಲಿ ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಬಸವಭವನದ ಬಸವ ಚೇತನ ದೇವರು ಆಶೀರ್ವಚನ ನೀಡಿದರು.

Karnataka Congress working president Satish Jarkiholi stirred up a controversy with his comments that the word 'Hindu' was Persian and its meaning is "very dirty".  This left the Congress embarrassed, forcing the high command to step in and describe the former minister's comments as "deeply unfortunate". "Where did the word 'Hindu' come from? Is it ours? It's Persian, which covers places such as Iran, Iraq, Kazakhstan and Uzbekistan.