ನಿವೃತ್ತ ಗುಪ್ತಚರ ದಳ ಅಧಿಕಾರಿಯ ಕೊಲೆ ; ನಾನಾ ವದಂತಿಗೆ ಕಾರಣವಾಗಿದ್ದ ಕೊಲೆ ರಹಸ್ಯ ಭೇದಿಸಿದ ಪೊಲೀಸರು, ಪಕ್ಕದ ಮನೆಯ ಜಟಾಪಟಿಯೇ ಕಾರಣ ! 

08-11-22 10:56 pm       HK News Desk   ಕರ್ನಾಟಕ

ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನಿವೃತ್ತರಾಗಿದ್ದ ಅಧಿಕಾರಿಯ ಕೊಲೆ ಪ್ರಕರಣವನ್ನು ಮೈಸೂರು ಪೊಲೀಸರು ಬೇಧಿಸಿದ್ದಾರೆ. ನಾನಾ ಊಹಾಪೋಹಗಳಿಗೆ ಕಾರಣವಾಗಿದ್ದ ನಿವೃತ್ತ ಅಧಿಕಾರಿಯ ಕೊಲೆಗೆ ಪಕ್ಕದ ಮನೆಯವರೊಂದಿಗಿನ ಜಗಳವೇ ಕಾರಣ ಎನ್ನುವ ಮಾಹಿತಿ ಬಯಲಾಗಿದೆ. 

ಮೈಸೂರು, ನ.8 : ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನಿವೃತ್ತರಾಗಿದ್ದ ಅಧಿಕಾರಿಯ ಕೊಲೆ ಪ್ರಕರಣವನ್ನು ಮೈಸೂರು ಪೊಲೀಸರು ಬೇಧಿಸಿದ್ದಾರೆ. ನಾನಾ ಊಹಾಪೋಹಗಳಿಗೆ ಕಾರಣವಾಗಿದ್ದ ನಿವೃತ್ತ ಅಧಿಕಾರಿಯ ಕೊಲೆಗೆ ಪಕ್ಕದ ಮನೆಯವರೊಂದಿಗಿನ ಜಗಳವೇ ಕಾರಣ ಎನ್ನುವ ಮಾಹಿತಿ ಬಯಲಾಗಿದೆ. 

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಮೃತ ನಿವೃತ್ತ ಅಧಿಕಾರಿ ಆರ್.ಎನ್. ಕುಲಕರ್ಣಿ ಹಾಗೂ ಪಕ್ಕದ ಮನೆಯವರ ನಡುವೆ ಮನಸ್ತಾಪ ಇತ್ತು. ಮನೆ ಕಟ್ಟುವ ವಿಚಾರದಲ್ಲಿ ಪಕ್ಕದ ಮನೆಯವರು ನಿಯಮ ಮೀರಿದ್ದರು ಎಂದು ಕುಲಕರ್ಣಿ ಈ ಹಿಂದೆಯೇ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪಕ್ಕದ ಮನೆಯ ಮಾದಪ್ಪನ ಪುತ್ರ ಮನು (30) ಹಾಗೂ ಈತನ ಸ್ನೇಹಿತ ವರುಣ್‌ನನ್ನು ಬಂಧಿಸಲಾಗಿದೆ ಎಂದರು. 

Ex-IB officer's murder: Neighbour's son and his friend arrested; property  dispute behind act, say police | Cities News,The Indian Express

ಪ್ರತಿದಿನ ಕುಲಕರ್ಣಿ ವಾಯುವಿಹಾರಕ್ಕೆ ತೆರಳುತ್ತಿದ್ದರು. ಈ ವಿಷಯ ಹಾಗೂ ಜಾಗವನ್ನು ಮನು ಹಾಗೂ ವರುಣ್ ನೋಡಿಕೊಂಡು ಬಂದಿದ್ದರು. ನಂತರ ಕೊಲೆಗೆ ಯೋಜನೆ ರೂಪಿಸಿದ್ದಾರೆ. ಮನು ತನ್ನ ತಂದೆ ಮಾದಪ್ಪನಿಗೂ ವಿಚಾರ ತಿಳಿಸದೆ ಈ ಹತ್ಯೆಗೆ ಸ್ಕೆಚ್ ರೂಪಿಸಿದ್ದ. ಸಿಸಿಟಿವಿಯನ್ನು ಆಧರಿಸಿದ ದೃಶ್ಯಗಳನ್ನು ತಪಾಸಣೆ ನಡೆಸಿದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ದ್ವಿಚಕ್ರ ವಾಹನದಲ್ಲಿ ವಾರದ ಹಿಂದೆ ಯಾರೆಲ್ಲ ಬಂದಿದ್ದರು ಎಂಬುದನ್ನು ಪರಿಶೀಲಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ಇಬ್ಬರನ್ನು ಅನುಮಾನದಲ್ಲಿ ಕರೆಸಿ ವಿಚಾರಣೆ ನಡೆಸಿದಾಗ ಸತ್ಯವನ್ನು ಬಾಯಿಬಿಟ್ಟಿದ್ದಾರೆ. 

Death of retired IB official in Mysuru deemed murder: Cops suspect property  row - The South First

ವಾಯು ವಿಹಾರಕ್ಕೆ ಬಂದಿದ್ದ ನಿವೃತ್ತ ಐಬಿ ಅಧಿಕಾರಿ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದರು. ಮೈಸೂರಿನ ಶಾರದಾದೇವಿನಗರದ ನಿವಾಸಿ ಆರ್.ಎನ್. ಕುಲಕರ್ಣಿ(82) ಅವರು ಕಾರು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ವಿವಿ ಪುರಂ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಅಪಘಾತದ ಬಗ್ಗೆ ಸಾಕಷ್ಟು ಅನುಮಾನ ಮೂಡಿತ್ತು. ಮೃತರ ಕುಟುಂಬದವರು ಇದೊಂದು ಕೊಲೆ ಎಂದು ದೂರು ನೀಡಿದ್ದರು. ಜೊತೆಗೆ ಪಕ್ಕದ ಮನೆಯವರಿಂದ ನನಗೆ ಜೀವಾಪಾಯ ಇದೆ ಎಂದು ಕುಲಕರ್ಣಿ ಈ ಹಿಂದೆ ಹೇಳಿಕೊಂಡಿದ್ದರು. ತನಿಖೆ ಚುಕುಗೊಳಿಸಿದ್ದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಲೆಗೆ ಕೆಡವಿದ್ದಾರೆ. ಮೂಲತಃ ಹಾವೇರಿ ಜಿಲ್ಲೆ ಸವಣೂರಿನ ಕುಲಕರ್ಣಿ ಅವರು 1963ರಲ್ಲಿ ಕೇಂದ್ರ ಸರ್ಕಾರದ ಇಂಟೆಲಿಜೆನ್ಸ್ ಬ್ಯೂರೋ ಸೇರ್ಪಡೆಗೊಂಡು ನಾನಾ ಹುದ್ದೆ ಹಾಗೂ ಸ್ಥಳಗಳಲ್ಲಿ ಮೂರೂವರೆ ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.

Retired IB officer's murder: Mysuru police sets up special probe team -  Mangalorean.com

ಸುಳಿವು ನೀಡಿದ್ದ ಸಿಸಿಟಿವಿ ಕ್ಯಾಮೆರಾ 

ಅಕ್ಟೋಬರ್ 4ರ ಸಂಜೆ ಕುಲಕರ್ಣಿ ಎಂದಿನಂತೆ ವಾಯುವಿಹಾರಕ್ಕೆ ಕಾರಿನಲ್ಲಿ ಮಾನಸಗಂಗೋತ್ರಿ ಕ್ಯಾಂಪಸ್‌ಗೆ ತೆರಳಿದ್ದರು. ಆ ವೇಳೆ ಕುಲಕರ್ಣಿ ಅವರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ವಿಷಯ ತಿಳಿದ ಅವರ ಕಾರು ಚಾಲಕ ಸ್ಥಳಕ್ಕೆ ದೌಡಾಯಿಸಿ ಅವರನ್ನು ತಕ್ಷಣ ಕಾಮಾಕ್ಷಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಲಕರ್ಣಿ ಮೃತಪಟ್ಟಿದ್ದರು. ಕ್ಯಾಂಪಸ್‌ನಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ನೋಂದಣಿ ಸಂಖ್ಯೆ ಇಲ್ಲದ ಕಾರು ಡಿಕ್ಕಿ ಹೊಡೆದು ಪರಾರಿ ಆಗಿರುವುದು ಕಂಡುಬಂದಿತ್ತು. ಇದೇ ಸುಳಿವನ್ನು ಬೆನ್ನತ್ತಿ ತನಿಖೆ ನಡೆಸಿದಾಗ ಕೃತ್ಯ ಬಯಲಾಗಿದೆ.

Karnataka police have cracked the murder case of an 82-year-old retired Intelligence Bureau (IB) officer in Mysuru with the arrest of two persons. The police said the murder took place over a property dispute.Mysuru City Police Commissioner Chandragupta said on Tuesday that the arrested persons have been identified as Manu (30) and his friend Arun Gowda. Manu was into construction business.