ಬಿಜೆಪಿ ಬಿಡಲು ಬಿಸಿ ಪಾಟೀಲ ಕಿರುಕುಳ ಕಾರಣ ; ಯುಬಿ ಬಣಕಾರ ಸ್ಪಷ್ಟನೆ, ಕಾಂಗ್ರೆಸ್ ನತ್ತ ಚಿತ್ತ ಹರಿಸಿದ ಲಿಂಗಾಯತ ನಾಯಕ 

09-11-22 10:55 pm       Bangalore Correspondent   ಕರ್ನಾಟಕ

ಹಿರೇಕೆರೂರು ಮಾಜಿ ಶಾಸಕ ಯು.ಬಿ. ಬಣಕಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು ರಾಜೀನಾಮೆ ಕುರಿತು ಬೆಂಗಳೂರಲ್ಲಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಯಡಿಯೂರಪ್ಪನವರು ನಮ್ಮಿಬ್ಬರು ನಾಯಕರನ್ನು ಪಕ್ಷದ ಎರಡು ಕಣ್ಣುಗಳು ಅಂದ್ರು. ಆದರೆ, ನಾವಿಬ್ರೂ ಒಟ್ಟಿಗೆ ಹೋಗಲು ಆಗಲಿಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರು, ನ.9 : ಹಿರೇಕೆರೂರು ಮಾಜಿ ಶಾಸಕ ಯು.ಬಿ. ಬಣಕಾರ ಬಿಜೆಪಿಗೆ ರಾಜೀನಾಮೆ ನೀಡಿದ್ದು ರಾಜೀನಾಮೆ ಕುರಿತು ಬೆಂಗಳೂರಲ್ಲಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಯಡಿಯೂರಪ್ಪನವರು ನಮ್ಮಿಬ್ಬರು ನಾಯಕರನ್ನು ಪಕ್ಷದ ಎರಡು ಕಣ್ಣುಗಳು ಅಂದ್ರು. ಆದರೆ, ನಾವಿಬ್ರೂ ಒಟ್ಟಿಗೆ ಹೋಗಲು ಆಗಲಿಲ್ಲ ಎಂದು ಹೇಳಿದ್ದಾರೆ. 

ಅಲ್ಲದೆ, ಬಿಜೆಪಿ ಸಂಸದೀಯ ಮಂಡಳಿ ನಾಯಕ ಯಡಿಯೂರಪ್ಪನವರ ಮೇಲೆ ನನಗೆ ಬೇಸರವಿಲ್ಲ. ಅವರು ಮುಖ್ಯಮಂತ್ರಿ ಆಗಬೇಕಿತ್ತು. ಅದಕ್ಕೆ ನಾನು ಅಂದು ಏನೂ ಹೇಳಲಿಲ್ಲ ಎಂದೂ ಯು.ಬಿ. ಬಣಕಾರ ತಿಳಿಸಿದ್ದಾರೆ. ಹಿರೇಕೆರೂರು ಕ್ಷೇತ್ರದಲ್ಲಿ ನಾವು ಇಬ್ಬರು ನಾಯಕರು ಇದ್ದೆವು. ಆದರೆ, ಇಬ್ಬರೂ ಒಟ್ಟಿಗೆ ಹೋಗಲು ಆಗಲಿಲ್ಲ ಎಂದು ಮಾಜಿ ಶಾಸಕ ಹೇಳಿದ್ದಾರೆ. 

ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆ ಅಂತಾನೇ ಗೊತ್ತಿಲ್ಲ: ಬಿ.ಸಿ. ಪಾಟೀಲ್ ವಿರುದ್ಧ  ರೈತರು ಕಿಡಿಕಿಡಿ | TV9 Kannada

ಅಲ್ಲದೆ, ಸಚಿವ ಬಿ.ಸಿ‌. ಪಾಟೀಲ್‌ರಿಂದ ನನಗೆ ಕಿರುಕುಳ ಇತ್ತು. ಹಾಗಾಗಿ ನಾನು ಪಕ್ಷ ಬಿಡುವ ನಿರ್ಧಾರ ಮಾಡಿದ್ದೇನೆ. ಆದರೆ, ನನಗೆ ಯಡಿಯೂರಪ್ಪನವರ ಮೇಲೆ ಬೇಸರ ಇಲ್ಲ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಬೇಕಿತ್ತು. ಈ ಹಿನ್ನೆಲೆ ನಾನು ಅಂದು ಏನು ಹೇಳಿರಲಿಲ್ಲ ಎಂದೂ ಯು.ಬಿ ಬಣಕಾರ ಅವರು ಹೇಳಿದ್ದಾರೆ.

Will be CM till BJP high command has confidence in me, says BS Yediyurappa

ಹಾಗೂ, ನಾನು ಕಾರ್ಯಕರ್ತರ ಜೊತೆ ಚರ್ಚೆ ಮಾಡಿದ್ದೇನೆ. ಕಾರ್ಯಕರ್ತರ ಮಾತು ಕೇಳಿಯೇ ನಿರ್ಧಾರ ಮಾಡಿದ್ದೇನೆ. ಇನ್ನು, ಕಾರ್ಯಕರ್ತರ ಮಾತಿನ ಪ್ರಕಾರ ನಾನು 6 ತಿಂಗಳ ಹಿಂದೆಯೇ ರಾಜೀನಾಮೆ ನೀಡಬೇಕಿತ್ತು ಎಂದೂ ಹಿರೇಕೆರೂರು ಮಾಜಿ ಶಾಸಕರು ಹೇಳಿದ್ದಾರೆ. ಬಣಕಾರ ಅವರು ಹಿರೇಕೆರೂರ ಕ್ಷೇತ್ರದಲ್ಲಿಯೇ ಕಾಂಗ್ರೆಸ್ ನಿಂದ ಕಣಕ್ಕಿಳಿಯಲಿದ್ದಾರೆ ಎನ್ನುವ ವದಂತಿ ಹರಡಿದೆ.

Ex MLA U B Banakar resigns from BJP, says BC torture reason to quit party.