ಪಾಕಿಸ್ತಾನ ಗೆಲುವನ್ನು ಸಂಭ್ರಮಿಸಿದ ಕಿಡಿಗೇಡಿಗಳು ; ಬಾಳೆಹೊನ್ನೂರಿನಲ್ಲಿ ನಾಲ್ವರು ಪೊಲೀಸರ ವಶಕ್ಕೆ 

11-11-22 02:19 pm       HK News Desk   ಕರ್ನಾಟಕ

ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಗೆಲವು ಕಂಡಿದ್ದನ್ನು ಕೆಲವು ಕಿಡಿಗೇಡಿಗಳು ಸೇರಿ ಸಂಭ್ರಮಿಸಿದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ಚಿಕ್ಕಮಗಳೂರು, ನ.11 : ಟಿ ಟ್ವೆಂಟಿ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಗೆಲವು ಕಂಡಿದ್ದನ್ನು ಕೆಲವು ಕಿಡಿಗೇಡಿಗಳು ಸೇರಿ ಸಂಭ್ರಮಿಸಿದ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. 

ಬಾಳೆಹೊನ್ನೂರಿನ ಕಾಫಿ ಎಸ್ಟೇಟ್‌ನಲ್ಲಿ ಕಾರ್ಮಿಕರು ಪಾಕ್ ಪರ ಜಿಂದಾಬಾದ್ ಎಂದು ಕೂಗಿದ್ದಾರೆ. ಅಸ್ಸಾಂ ಮೂಲದ ಕಾರ್ಮಿಕರಾದ ಅಜರ್ ಅಲಿ, ಆಹಿಲ್ ಉದ್ದಿನ್ ಸೇರಿದಂತೆ ಮತ್ತಿಬ್ಬರು ಅಪ್ರಾಪ್ತ ಯುವಕರು ಸೇರಿ ಘೋಷಣೆ ಕೂಗಿದ್ದಾರೆ. ಕಾರ್ಮಿಕರ ಅತಿರೇಕದ ವರ್ತನೆ ಬಗ್ಗೆ ಸ್ಥಳೀಯರು ಕೂಡಲೇ ಎಸ್ಟೇಟ್ ಮಾಲೀಕರ ಗಮನಕ್ಕೆ ತಂದಿದ್ದರು. 

ಆಬಳಿಕ ಕಾಫಿ ಎಸ್ಟೇಟ್ ಮ್ಯಾನೇಜರ್ ನಾರಾಯಣ ಮೂರ್ತಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಸ್ಸಾಂ ಕಾರ್ಮಿಕರ ಸೋಗಿನಲ್ಲಿ ಬಾಂಗ್ಲಾದೇಶದ ನಿವಾಸಿಗಳು ಅಕ್ರಮವಾಗಿ ಬಂದು ನೆಲೆಸಿರುವ ಅನುಮಾನಗಳಿದ್ದು ಈ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಬಾಳೆಹೊನ್ನೂರು ಪೊಲೀಸರು ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. 

ಬುಧವಾರ ಸಂಜೆ ಪಾಕಿಸ್ತಾನ - ನ್ಯೂಜಿಲೆಂಡ್ ಮಧ್ಯೆ ಸೆಮಿ ಫೈನಲ್ ಪಂದ್ಯ ನಡೆದಿದ್ದು ಪಾಕಿಸ್ತಾನ ಗೆಲುವು ಕಂಡಿತ್ತು. ಪಾಕ್ ಗೆಲುವಿನ ಬೆನ್ನಲ್ಲೇ ಕಿಡಿಗೇಡಿ ಕಾರ್ಮಿಕರ ಗುಂಪು ಪಾಕಿಸ್ತಾನ ಪರ ಜೈಕಾರ ಹಾಕಿದೆ.

Here is how Twitter reacted to Pakistan's seven-wicket victory over New Zealand in the T20 World Cup semi-final. Pakistan's victory strengthened the India vs Pakistan T20 World Cup final anticipation. If India beat England in the second semi-final at the Adelaide Oval on Thursday then it will be a repeat of the inaugural edition final.