ರಾಜ್ಯ ಸರ್ಕಾರದಿಂದಲೇ ಪ್ರಿಯಾಂಕ ಖರ್ಗೆ ಕೊಲೆಗೆ ಸಂಚು ; ಗಂಭೀರ ಆರೋಪ ಮಾಡಿದ ಕಾಂಗ್ರೆಸ್ ನಾಯಕರು  

12-11-22 07:03 pm       HK News Desk   ಕರ್ನಾಟಕ

ರಾಜ್ಯ ಸರ್ಕಾರದ ವಿರುದ್ಧ ನಿರಂತರ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಶಾಸಕ ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ ಅವರನ್ನು ರಾಜ್ಯ ಸರ್ಕಾರವೇ ಕೊಲೆ ಮಾಡಲು ಸಂಚು ರೂಪಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. 

ಕಲಬುರಗಿ, ನ.12 : ರಾಜ್ಯ ಸರ್ಕಾರದ ವಿರುದ್ಧ ನಿರಂತರ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಶಾಸಕ ಹಾಗೂ ಕೆಪಿಸಿಸಿ ಸಂವಹನ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ ಅವರನ್ನು ರಾಜ್ಯ ಸರ್ಕಾರವೇ ಕೊಲೆ ಮಾಡಲು ಸಂಚು ರೂಪಿಸಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್‌ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. 

ಬಿಜೆಪಿ ಕಾರ್ಯಕರ್ತನೊಬ್ಬನ ಮೂಲಕ ಪ್ರಿಯಾಂಕ್‌ ಖರ್ಗೆ ಕೊಲೆ ಮಾಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಪ್ರಿಯಾಂಕ್ ಖರ್ಗೆ ಅವರನ್ನು ನಾವು ಎಕೆ-47 ಬಂದೂಕಿನಿಂದ ಶೂಟ್ ಮಾಡಿ ಕೊಲ್ಲುತ್ತೇವೆ ಎಂದು ಮಣಿಕಂಠ ರಾಠೋಡ್‌ ಎಂಬ ಸ್ಥಳೀಯ ಬಿಜೆಪಿ ಮುಖಂಡನ ಹೇಳಿಕೆಯೇ ಇದಕ್ಕೆ ಸಾಕ್ಷಿ ಎಂದು ಶರಣಪ್ರಕಾಶ್‌ ಪಾಟೀಲ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

manikanta rathod, ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಥೋಡ 1 ವರ್ಷಗಳ ಕಾಲ ಗಡಿಪಾರು! -  kalaburagi bjp leader manikanta rathod exile for 1 year - Vijaya Karnataka

ಈ ಹಿಂದೆ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಪ್ರಿಯಾಂಕ್‌ ಖರ್ಗೆ ಅವರಿಗೆ ಸೂಕ್ತ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ, ಪ್ರಿಯಾಂಕ್‌ ಖರ್ಗೆ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ವಾಪಸ್‌ ಪಡೆಯಲಾಗಿದೆ. ಪಿಎಸ್‌ಐ ಅಕ್ರಮವನ್ನು ಬಯಲಿಗೆಳೆದ ಕಾರಣಕ್ಕಾಗಿ ಸರ್ಕಾರ, ಪ್ರಿಯಾಂಕ್‌ ಖರ್ಗೆ ಅವರ ಭದ್ರತೆಯನ್ನು ಮರಳಿ ಪಡೆದಿದೆ. ಈಗ ನೋಡಿದರೆ ಪ್ರಿಯಾಂಕ್‌ ಖರ್ಗೆ ಅವರನ್ನು ಗುಂಡು ಹಾರಿಸಿ ಕೊಲೆ ಮಾಡುವುದಾಗಿ ಬಿಜೆಪಿ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದು ಶರಣಪ್ರಕಾಶ್‌ ಪಾಟೀಲ್‌ ಕಿಡಿಕಾರಿದರು.

ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ. ರಾಜ್ಯ ಸರ್ಕಾರದ ಅವ್ಯವಹಾರ, ಅಕ್ರಮದ ಕುರಿತು ಪ್ರಿಯಾಂಕ್ ಧ್ವನಿ ಎತ್ತುತ್ತಿದ್ದಾರೆ‌. ಹೀಗಾಗಿ ಸರ್ಕಾರ ಅವರ ಧ್ವನಿ ಅಡಗಿಸಲು ಯೋಜನೆ ಹಾಕಿದೆ ಎಂದು ಶರಣಪ್ರಕಾಶ್‌ ಪಾಟೀಲ್‌ ಆರೋಪಿಸಿದರು. 

ಚಿತ್ತಾಪುರ ಶಾಸಕ ಪ್ರಿಯಾಂಕ್‌ ಖರ್ಗೆ ಅವರನ್ನು ಶೂಟ್‌ ಮಾಡಲು ನಾವು ಸಿದ್ಧವಿರುವುದಾಗಿ, ಕಳೆದ ನ.11ರಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್‌ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ಕೋಲಾಹಲ ಸೃಷ್ಟಿಸಿದ್ದು, ಪ್ರಿಯಾಂಕ್‌ ಖರ್ಗೆ ಅವರನ್ನು ಕೊಲ್ಲಲು ಸರ್ಕಾರವೇ ಸುಪಾರಿ ಕೊಟ್ಟಿದೆ ಎಂದು ಕಾಂಗ್ರೆಸ್‌ ಗಂಭೀರ ಆರೋಪ ಮಾಡಿದೆ. 

ಕಲಬುರಗಿಯ ಕಾಂಗ್ರೆಸ್‌ ಕಾರ್ಯಕರ್ತರು ಮನಸ್ಸು ಮಾಡಿದರೆ, ಬಿಜೆಪಿ ನಾಯಕರು ರಸ್ತೆ ಮೇಲೆ ಓಡಾಡಲು ಸಾಧ್ಯವಾಗುವುದಿಲ್ಲ ಎಂದು ಪ್ರಿಯಾಂಕ್‌ ಖರ್ಗೆ ಗುಡುಗಿದ್ದರು. ಖರ್ಗೆ ಅವರ ಈ ಹೇಳಿಕೆಗೆ ತಿರುಗೇಟು ನೀಡಿದ್ದ ಬಿಜೆಪಿ ನಾಯಕ ಮಣಿಕಂಠ ರಾಠೋಡ್‌, ಪ್ರಿಯಾಂಕ್‌ ಖರ್ಗೆ ಅವರು ಹಾಕುವ ಗೊಡ್ಡು ಬೆದರಿಕೆಗಳಿಗೆ ಹೆದರುವ ಆಸಾಮಿಯಲ್ಲ. ನಿಮಗೆ ಧೈರ್ಯವಿದ್ದರೆ ನನ್ನನ್ನು ತಿರುಗಾಡದಂತೆ ಮಾಡಿ ನೋಡಿ, ಅಂತಹ ಸಂದರ್ಭ ಬಂದರೆ ಒಬ್ಬನೇ ಶೂಟ್ ಮಾಡಿ ಹಾಕಿಯೇನು ಎಂದು ಮರುತ್ತರ ನೀಡಿದ್ದರು.

BJP leader Manikant Rathod has made a controversial statement that we are ready to shoot Chittapur MLA Priyank Kharge. Addressing a press conference at the city's Press House on Friday, he replied to Priyank's statement that BJP leaders will not let them roam if we and our workers make up their minds.Just as military soldiers stand at the borders to save India, we also stand like the military for the sake of the society and the poor. Do you want to shoot with an AK-47? Or shooting from a cannon? You shoot and we sayoku is ready. We are also ready to shoot you, he said.