ಬ್ರೇಕಿಂಗ್ ನ್ಯೂಸ್
13-11-22 05:18 pm Bangalore Correspondent ಕರ್ನಾಟಕ
ಬೆಂಗಳೂರು, ನ.13: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆ ಚುನಾವಣೆಗೆ ಎಲ್ಲಿ ಸ್ಪರ್ಧೆ ಮಾಡುತ್ತಾರೆ ಅನ್ನುವ ಗೊಂದಲ ಇತ್ತು. ಗೆಲ್ಲುವ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎನ್ನುವುದೇ ಬಿಜೆಪಿ ಟೀಕೆಯಾಗಿತ್ತು. ಅತ್ತ ಬಾದಾಮಿ ಇಲ್ಲ, ಇತ್ತ ಮೈಸೂರಲ್ಲೂ ಸ್ಪರ್ಧೆ ಮಾಡಲ್ಲ. ಇನ್ನೆಲ್ಲಿ ಸ್ಪರ್ಧಿಸುತ್ತಾರೆಂದು ಬಿಜೆಪಿ ನಾಯಕರು ಪ್ರತಿ ಬಾರಿ ಟೀಕಿಸುತ್ತಿದ್ದರು. ಇಂಥ ಹೊತ್ತಲ್ಲೇ ಹಳೆ ಹುಲಿ ರಮೇಶ್ ಕುಮಾರ್ ತನ್ನ ಪರಮಾಪ್ತನ ಪರವಾಗಿ ದಾಳ ಬೀಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿಯೇ ನಿಲ್ಲಿಸಿ ಗೆಲ್ಲಿಸಲು ಪ್ಲಾನ್ ಹಾಕಿದ್ದಾರೆ. ಇದಕ್ಕಾಗಿ ಭಾನುವಾರ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆಸಿ ಶಕ್ತಿಪ್ರದರ್ಶನವನ್ನೂ ಮಾಡಿದ್ದಾರೆ.
ಪಕ್ಷದ ಕಾರ್ಯಕರ್ತರು ಮತ್ತು ತನ್ನ ಬೆಂಬಲಿಗರ ಸಾರ್ವಜನಿಕ ಸಭೆ ನಡೆಸಿದ ಸಿದ್ದರಾಮಯ್ಯ, ಕೋಲಾರದಲ್ಲಿ ಸ್ಪರ್ಧಿಸಲು ಒಲವು ವ್ಯಕ್ತಪಡಿಸಿದ್ದಾರೆ. ಎಲ್ಲಿ ಸ್ಪರ್ಧೆಯೆಂದು ಗೊಂದಲಕ್ಕೆ ಬಿದ್ದಿದ್ದ ಸಿದ್ದರಾಮಯ್ಯ ಪರವಾಗಿ ಇವೆಲ್ಲ ತಂತ್ರ ಹೆಣೆದಿದ್ದೇ ರಮೇಶ್ ಕುಮಾರ್. ಸಿದ್ದರಾಮಯ್ಯ ಅವರನ್ನು ಕೋಲಾರದಲ್ಲಿ ಸ್ಪರ್ಧಿಸುವಂತೆ ಮಾಡಿ ಎದುರಾಳಿಗಳಿಗೆ ಏಟು ಕೊಡುವ ತಂತ್ರಗಾರಿಕೆಯೂ ರಮೇಶ್ ಕುಮಾರ್ ಲೆಕ್ಕಾಚಾರದಲ್ಲಿದೆ. ಮುಖ್ಯವಾಗಿ ಕೋಲಾರ ಭಾಗದಲ್ಲಿ ಬಹುಕಾಲದಿಂದ ರಾಜಕೀಯ ಮಾಡಿಕೊಂಡು ಬಂದಿರುವ ಕೆಎಚ್ ಮುನಿಯಪ್ಪ ಜೊತೆಗೆ ಹಾವು ಮುಂಗುಸಿಯಂತಿರುವ ರಮೇಶ್ ಕುಮಾರ್, ತನ್ನ ಪರಮಾಪ್ತ ಸಿದ್ದರಾಮಯ್ಯ ಅವರನ್ನೇ ಕರೆಸಿಕೊಂಡು ಅವರೆದುರು ತೊಡೆ ತಟ್ಟಿದ್ದಾರೆ.
ಕೋಲಾರದಲ್ಲಿ ಎಸ್ಸಿ- ಎಸ್ಟಿ ಮತ್ತು ಕುರುಬ ಮತದಾರರು ಹೆಚ್ಚಿರುವುದು ಮತ್ತು ಆ ಭಾಗದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಆಸುಪಾಸಿನ ಚಿಕ್ಕಬಳ್ಳಾಪುರ, ದೊಡ್ಡ ಬಳ್ಳಾಪುರ ಕ್ಷೇತ್ರಗಳ ಮೇಲೂ ಪ್ರಭಾವ ಬೀರುತ್ತಾರೆ ಎಂಬ ಲೆಕ್ಕಾಚಾರ ರಮೇಶ್ ಕುಮಾರ್ ಅವರದ್ದು. ಅತ್ತ ಚಿಕ್ಕಬಳ್ಳಾಪುರ ಭಾಗದಲ್ಲಿ ಆರೋಗ್ಯ ಸಚಿವ ಸುಧಾಕರ್ ಪ್ರಭಾವಿಯಾಗಿ ಬೆಳೆದಿರುವುದು ಮತ್ತು ಅವರಿಗೆ ಮೂಗುದಾರ ಹಾಕಲು ಸಿದ್ದರಾಮಯ್ಯ ಅವರಿಂದ ಮಾತ್ರ ಸಾಧ್ಯ ಎನ್ನುವ ತಂತ್ರಗಾರಿಕೆಯೂ ಇದರ ಹಿಂದಿದೆ. ಇದಲ್ಲದೆ, ಕೋಲಾರ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಿದರೆ ಯಾವ ರೀತಿ ಗೆಲುವು ಸಾಧ್ಯ ಎನ್ನುವ ಬಗ್ಗೆಯೂ ಖಾಸಗಿ ತಂಡಗಳಿಂದ ಸಮೀಕ್ಷೆ ನಡೆಸಲಾಗಿದೆ. ಇವೆಲ್ಲ ತಾಳ-ಮೇಳ ತೂಗಿಕೊಂಡೇ ರಮೇಶ್ ಕುಮಾರ್ ತಂತ್ರ ಹೆಣೆದಿದ್ದಾರೆ.
ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಬಿಜೆಪಿಗೆ ಬಂದಿರುವ ವರ್ತೂರು ಪ್ರಕಾಶ್ ಮತ್ತು ಸುಧಾಕರ್ ಮೇಲೆ ಭಾರೀ ಒತ್ತಡ ಬೀಳಲಿದೆ. ಇವರಿಬ್ಬರೂ ಒಂದು ಕಾಲದಲ್ಲಿ ಸಿದ್ದರಾಮಯ್ಯ ಎಡ- ಬಲದಲ್ಲಿದ್ದವರು. ಈಗ ಸಿದ್ದರಾಮಯ್ಯ ಅವರ ಬದ್ಧ ಎದುರಾಳಿ ಎನ್ನುವ ಪಕ್ಷದಲ್ಲಿದ್ದಾರೆ. ಸಿದ್ದು ಸ್ಪರ್ಧೆಯಿಂದ ಕುರುಬ ಮತ್ತು ಎಸ್ಸಿ-ಎಸ್ಟಿ ಮತಗಳು ಧ್ರುವೀಕರಣಗೊಂಡರೆ, ಇವರಿಬ್ಬರಿಗೂ ಕಷ್ಟವಾಗಲಿದೆ. ಆಮೂಲಕ ಸಿದ್ದು ಕೋಲಾರ ಸ್ಪರ್ಧೆಯಿಂದ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಪ್ಲಾನ್ ಇದೆ ಎನ್ನಲಾಗುತ್ತಿದೆ. ಜೊತೆಗೆ, ರಮೇಶ್ ಕುಮಾರ್ ತನ್ನ ಗೆಲುವನ್ನೂ ಸಿದ್ದರಾಮಯ್ಯ ಜೊತೆಗೆ ಖಾತರಿ ಪಡಿಸಿಕೊಳ್ಳುತ್ತಾರೆ.
ಆದರೆ, ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ನಾಯಕರು ಕಳೆದ ಬಾರಿ ಸಿದ್ದರಾಮಯ್ಯ ಮರ್ಯಾದೆ ಉಳಿಸಿದ್ದ ಬಾದಾಮಿ ಕ್ಷೇತ್ರವನ್ನು ಬಿಟ್ಟು ಹೋಗುತ್ತಿದ್ದಾರೆ ಅನ್ನೋದನ್ನೇ ಪ್ರಮುಖವಾಗಿ ದಾಳ ಮಾಡಿಕೊಂಡಿದ್ದಾರೆ. ಕೋಲಾರ ಭಾಗದಲ್ಲಿ ಬಿಜೆಪಿಗೆ ಹೆಚ್ಚು ನೆಲೆ ಇಲ್ಲ ಎನ್ನುವುದೇ ಸಿದ್ದರಾಮಯ್ಯ ಅಲ್ಲಿ ಸ್ಪರ್ಧೆಗೆ ಮುಂದಾಗಿರುವುದಕ್ಕೆ ಪ್ರಬಲ ಕಾರಣ ಎನ್ನುವುದನ್ನು ಅರಿತಿರುವ ಬಿಜೆಪಿ ನಾಯಕರು ಚುನಾವಣೆಗೆ ಆರು ತಿಂಗಳು ಇರುವುದರಿಂದ ಪ್ರತಿತಂತ್ರ ಹೆಣೆಯೋದು ಪಕ್ಕಾ. ಕಳೆದ ಬಾರಿ ಕೋಲಾರದಲ್ಲಿ ಬಿಜೆಪಿಯಿಂದ ಮುನಿಸ್ವಾಮಿ ಸಂಸದರಾಗಿರುವುದು ಮತ್ತು ಮೀಸಲು ಕ್ಷೇತ್ರದಿಂದ ಬಹುಕಾಲದಿಂದ ಗೆದ್ದುಕೊಂಡು ಬಂದಿದ್ದ ಕೆಎಚ್ ಮುನಿಯಪ್ಪರನ್ನು ಸೋಲಿಸಿರುವುದು, ವರ್ತೂರು ಪ್ರಕಾಶ್ ಮತ್ತು ಸುಧಾಕರ್ ನಂಥ ಗಟ್ಟಿಗರು ಬಿಜೆಪಿಯಲ್ಲಿರೋದು ಬಿಜೆಪಿ ಪ್ಲಸ್ ಪಾಯಿಂಟ್. ಆದರೆ ರಾಜ್ಯದ ಇತರ ಕಡೆ ಇರುವಂತೆ ತಳಮಟ್ಟದಲ್ಲಿ ಬಿಜೆಪಿಗೆ ಕೋಲಾರದಲ್ಲಿ ಗಟ್ಟಿ ಅಡಿಪಾಯ ಇಲ್ಲ. ಹೀಗಾಗಿ ವಿಧಾನಸಭೆ ಚುನಾವಣೆಯಲ್ಲಿ ಈ ಭಾಗದಲ್ಲಿ ಹಿಂದಿನಿಂದಲೂ ಜೆಡಿಎಸ್ ಅಥವಾ ಕಾಂಗ್ರೆಸ್ ನಾಯಕರಷ್ಟೇ ಗೆದ್ದುಕೊಂಡು ಬಂದಿದ್ದಾರೆ. ಈ ಬಾರಿ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಸಿದ್ದರಾಮಯ್ಯ ಅವರಿಗೆ ಸೀಟು ಬಿಟ್ಟು ಕೊಡುತ್ತಾರೆ ಎನ್ನಲಾಗುತ್ತಿದ್ದು, ಸಿದ್ದರಾಮಯ್ಯ ಇಲ್ಲಿ ಸ್ಪರ್ಧಿಸುವುದು ಸೇಫ್ ಝೋನ್ ಅನ್ನುವ ಲೆಕ್ಕಾಚಾರ ಅವರ ಬೆಂಬಲಿಗರದ್ದಿದೆ.
ಕೈಕೊಟ್ಟ ಜಿಟಿಡಿ, ಕೈಕೊಡ್ತು ಮೈಸೂರು !
ಈವರೆಗೂ ಮೈಸೂರಿನ ಚಾಮುಂಡೇಶ್ವರಿ ಅಥವಾ ವರುಣಾ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಾರೆ ಎನ್ನುವ ವದಂತಿಗಳಿದ್ದವು. ಆದರೆ ಮೈಸೂರು ಭಾಗದ ಪ್ರಭಾವಿ ನಾಯಕ ಜಿಟಿ ದೇವೇಗೌಡ ಅವರನ್ನು ಜೆಡಿಎಸ್ ನಾಯಕರು ತಮ್ಮ ಪಕ್ಷದಲ್ಲಿಯೇ ಉಳಿಸಿಕೊಂಡಿದ್ದು ಸಿದ್ದರಾಮಯ್ಯ ಪ್ಲಾನ್ ಕೈಕೊಡುವಂತೆ ಮಾಡಿತ್ತು. ಮೈಸೂರು ಭಾಗದಲ್ಲಿ ತಮ್ಮದೇ ಆದ ವರ್ಚಸ್ಸು ಮತ್ತು ಪ್ರಭಾವ ಹೊಂದಿರುವ ಜಿಟಿ ದೇವೇಗೌಡ ಕಾಂಗ್ರೆಸ್ ಬರುತ್ತಿದ್ದರೆ, ಸಿದ್ದರಾಮಯ್ಯ ಅವರನ್ನು ಸೋಲಿಸಲು ಸಾಧ್ಯವಿಲ್ಲ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋಲುವುದಕ್ಕೂ ಇದೇ ಜಿಟಿಡಿ ಕಾರಣ ಆಗಿದ್ದರು. ಒಂದು ವರ್ಷದಿಂದಲೂ ಜೆಡಿಎಸ್ ಬಗ್ಗೆ ಮುನಿಸಿಕೊಂಡಿದ್ದ ಜಿಟಿಡಿ ಕಾಂಗ್ರೆಸ್ ಸೇರುತ್ತಾರೆಂದೇ ಹೇಳಲಾಗಿತ್ತು. ಆದರೆ ಅವರನ್ನು ಮೊನ್ನೆಯಷ್ಟೇ ಭೇಟಿ ಮಾಡಿದ್ದ ಮಾಜಿ ಪ್ರಧಾನಿ ದೇವೇಗೌಡ, ಮನವೊಲಿಸಿ ಪಕ್ಷದಲ್ಲಿಯೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಿಟಿಡಿ ಅಲ್ಲಿಯೇ ಉಳಿದುಕೊಂಡಿದ್ದು ಸಿದ್ದರಾಮಯ್ಯ ತನ್ನ ಸ್ವಕ್ಷೇತ್ರದ ಚಿಂತನೆ ಬದಿಗಿಡುವಂತೆ ಮಾಡಿತ್ತು.
Former Karnataka Chief Minister Siddaramaiah on Sunday said he would consider contesting the upcoming assembly elections from Kolar district as the people across the district have been urging him to do so. “The Congress must return to power and all the people should, therefore, support the party,” Siddaramaiah who is on a visit to the district as a part of preparations for the state's assembly election, said.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm