ಬ್ರೇಕಿಂಗ್ ನ್ಯೂಸ್
14-11-22 06:28 pm Bangalore Correspondent ಕರ್ನಾಟಕ
ಬೆಂಗಳೂರು ನ 14: ಪ್ರತಿ ಲೀಟರ್ ನಂದಿನಿ ಹಾಲಿನ ದರದಲ್ಲಿ 3 ರೂಪಾಯಿ ಏರಿಸಲು ಕೆಎಂಎಫ್ ನಿರ್ಧರಿಸಿದೆ. ಹಾಗೂ ಮೊಸರಿನ ಬೆಲೆಯೂ ಕೂಡ 3 ರೂಪಾಯಿ ಏರಿಕೆ ಮಾಡಲಾಗಿದೆ.
ಕರ್ನಾಟಕ ಹಾಲು ಒಕ್ಕೂಟವು ನಡೆಸಿದ ಸಭೆಯಲ್ಲಿ ನಂದಿನಿ ಹಾಲಿನ ದರ ಏರಿಕೆಗೆ ಸಂಬಂಧಿಸಿದಂತೆ ಅಂತಿಮ ನಿರ್ಣಯ ಕೈಗೊಳ್ಳಲಾಗಿದೆ. ಹೈನುಗಾರಿಕೆಗೆ ಹೆಚ್ಚಿನ ಒತ್ತು ನೀಡುವುದು ಹಾಗೂ ರೈತರ ಆರ್ಥಿಕ ಅಭಿವೃದ್ಧಿಗಾಗಿ ಪ್ರತಿ ಲೀಟರ್ ಹಾಲು ಹಾಗೂ ಮೊಸರಿನ ಮೇಲೆ 3 ರೂಪಾಯಿ ಹೆಚ್ಚಳ ಮಾಡುವುದಕ್ಕೆ ಕೆಎಂಎಫ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಸಮೃದ್ಧಿ ಹಾಲಿನ ದರ ಪ್ರತಿ ಲೀಟರ್‌ಗೆ 48 ರೂಪಾಯಿ ಇಂದ 51 ರೂಪಾಯಿಗೆ ಹೆಚ್ಚಳವಾಗಿದೆ. ಟೋನ್ಡ್ ಹಾಲಿನ ದರ 37ರೂಪಾಯಿ ಇಂದ 40 ರೂಪಾಯಿಗೆ ಏರಿಸಲಾಗಿದೆ. ಸ್ಪೆಷಲ್ ಹಾಲಿನ ದರ 43 ರೂಪಾಯಿ ಇಂದ 46 ರೂಪಾಯಿಗೆ ಏರಿಸಲಾಗಿದೆ. ಇನ್ನು ಮೊಸರಿನ ಬೆಲೆಯನ್ನು 45 ರೂಪಾಯಿ ಇಂದ 48 ರೂಪಾಯಿಗೆ ಏರಿಸಲಾಗಿದೆ. ಈ ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.ನಂದಿನಿ ಟೋನ್ಡ್ ಹಾಲಿನ ದರ ಪ್ರಸ್ತುತ 37 ರೂಪಾಯಿ ಇದ್ದು ಪರಿಷ್ಕೃತ ದರ 40 ರೂಪಾಯಿ ಮಾಡಲಾಗಿದೆ.
ಹೋಮೋಜಿನೈಸ್ಡ್ ಟೋನ್ಡ್ ಹಾಲಿನ ದರ ಪ್ರಸ್ತುತ 38 ರೂಪಾಯಿ ಇದ್ದು ಪರಿಷ್ಕೃತ ದರ 41 ರೂಪಾಯಿ ಮಾಡಲಾಗಿದೆ.
ಹೋಮೋಜಿನೈಸ್ಡ್ ಹಸುವಿನ ಹಾಲಿನ ದರ ಪ್ರಸ್ತುತ 42 ರೂಪಾಯಿ ಇದ್ದು ಪರಿಷ್ಕೃತ ದರ 45 ರೂಪಾಯಿ ಮಾಡಲಾಗಿದೆ.
ಸ್ಪೆಷಲ್ ಹಾಲಿನ ದರ ಪ್ರಸ್ತುತ 43 ರೂಪಾಯಿ ಇದ್ದು ಪರಿಷ್ಕೃತ ದರ 46 ರೂಪಾಯಿ ಮಾಡಲಾಗಿದೆ.
ಶುಭಂ ಹಾಲಿನ ದರ ಪ್ರಸ್ತುತ 43 ರೂಪಾಯಿ ಇದ್ದು ಪರಿಷ್ಕೃತ ದರ 46 ರೂಪಾಯಿ ಮಾಡಲಾಗಿದೆ.
ಹೋಮೋಜಿನೈಸ್ಡ್ ಸ್ಟ್ಯಾಂಡಡೈಸ್ಡ್ ಹಾಲಿನ ದರ ಪ್ರಸ್ತುತ 44 ರೂಪಾಯಿ ಇದ್ದು ಪರಿಷ್ಕೃತ ದರ 47 ರೂಪಾಯಿ ಮಾಡಲಾಗಿದೆ.
ಸಮೃದ್ಧಿ ಹಾಲಿನ ದರ ಪ್ರಸ್ತುತ 48 ರೂಪಾಯಿ ಇದ್ದು ಪರಿಷ್ಕೃತ ದರ 51 ರೂಪಾಯಿ ಮಾಡಲಾಗಿದೆ.
ಸಂತೃಪ್ತಿ ಹಾಲಿನ ದರ ಪ್ರಸ್ತುತ 50 ರೂಪಾಯಿ ಇದ್ದು ಪರಿಷ್ಕೃತ ದರ 53 ರೂಪಾಯಿ ಮಾಡಲಾಗಿದೆ.
ಡಬಲ್ಡ್ ಟೋನ್ಡ್ ಹಾಲಿನ ದರ ಪ್ರಸ್ತುತ 36 ರೂಪಾಯಿ ಇದ್ದು ಪರಿಷ್ಕೃತ ದರ 39 ರೂಪಾಯಿ ಮಾಡಲಾಗಿದೆ.
ಮೊಸರು ಪ್ರತಿ ಕೆ.ಜಿಯ ಪ್ರಸ್ತುತ 45 ರೂಪಾಯಿ ಇದ್ದು ಪರಿಷ್ಕೃತ ದರ 48 ರೂಪಾಯಿ ಮಾಡಲಾಗಿದೆ.
The Karnataka Milk Federation (KMF) has increased the price of Nandini milk and curd by Rs 3 per litre, with effect from midnight of Monday.The milk price, per litre, has been raised to Rs 40 from Rs 37, while curd will now cost Rs 48, against Rs 45 earlier.The special milk price, per litre, has gone up to Rs 46 from Rs 43, while Shubham milk will cost Rs 46, and Samrudhi milk will cost Rs 51.
14-07-25 01:43 pm
HK News Desk
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
Shivamogga Jail News, Mobile phone: ಶಿವಮೊಗ್ಗ...
12-07-25 10:47 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 07:56 pm
Mangalore Correspondent
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
Mangalore DK Transport, DK Group Alwyn Joel N...
13-07-25 07:00 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm