ಬ್ರೇಕಿಂಗ್ ನ್ಯೂಸ್
20-11-22 01:05 pm HK News Desk ಕರ್ನಾಟಕ
ತುಮಕೂರು, ನ.20 : ಮಂಗಳೂರಿನ ಆಟೋ ಸ್ಫೋಟ ಪ್ರಕರಣ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ವ್ಯಕ್ತಿಯಲ್ಲಿ ಪತ್ತೆಯಾದ ಆಧಾರ್ ಕಾರ್ಡ್ ನಕಲಿ ಅನ್ನುವುದು ಗೊತ್ತಾಗಿದೆ. ಈ ಆಧಾರ್ ಕಾರ್ಡ್ ತುಮಕೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿಯದ್ದು ಅನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಹುಬ್ಬಳಿ ಮೂಲದ ಪ್ರೇಮರಾಜ್ ಹುಟಗಿ ಎಂಬುವವರು ತುಮಕೂರಿನಲ್ಲಿ ರೈಲ್ವೆ ಸಿಬ್ಬಂದಿಯಾಗಿದ್ದು ರೈಲ್ವೆ ಟ್ರ್ಯಾಕ್ ಮೆನ್ ಆಗಿ ಕೆಲಸ ಮಾಡ್ತಿದ್ದಾರೆ. ಪ್ರೇಮರಾಜ್ ಹುಟಗಿ, ಸದ್ಯ ತುಮಕೂರಿನ ಹಿರೇಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಕಳೆದ ಎರಡು ವರ್ಷದಲ್ಲಿ ಎರಡು ಬಾರಿ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಒಮ್ಮೆ ಧಾರವಾಡದಿಂದ ಬೆಳಗಾವಿಗೆ ಬಸ್ನಲ್ಲಿ ಹೋಗುವಾಗ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಬಳಿಕ ಮತ್ತೊಂದು ಆಧಾರ್ ಕಾರ್ಡ್ ಪಡೆದಿದ್ದರು. ಕಳೆದ ಆರು ತಿಂಗಳ ಹಿಂದೆ ಹುಬ್ಬಳ್ಳಿಯಿಂದ ಬಸ್ನಲ್ಲಿ ಬರುವಾಗ ಮತ್ತೊಮ್ಮೆ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಇದೀಗ ಇದೇ ವ್ಯಕ್ತಿಯ ಹೆಸರಲ್ಲಿದ್ದ ಆಧಾರ್ ಕಾರ್ಡ್ ಸ್ಫೋಟಗೊಂಡ ಆಟೋದಲ್ಲಿ ಸಿಕ್ಕಿದ್ದು ಭಾರೀ ಅನುಮಾನಕ್ಕೆ ಕಾರಣವಾಗಿದೆ.






ಈ ಕುರಿತು ಪ್ರೇಮರಾಜ್ ಹುಟಗಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು ನಿನ್ನೆ ರಾತ್ರಿ ವಿಷಯ ಗೊತ್ತಾದ ಕೂಡಲೇ ತುಮಕೂರು ಎಸ್ಪಿ ಅವರನ್ನ ಸಂಪರ್ಕಿಸಲು ಪೊಲೀಸರು ಸೂಚಿಸಿದ್ದರು. ಅದರಂತೆ ತುಮಕೂರು ಎಸ್ಪಿ ರಾಹುಲ್ ಕುಮಾರ್ ಅವರನ್ನ ಸಂಪರ್ಕಿಸಿದ್ದು, ನನಗೂ ಸ್ಫೋಟ ಘಟನೆಗೂ ಯಾವುದೇ ಸಂಬಂಧ ಇಲ್ಲ. ನನ್ನ ಹೆಸರಲ್ಲಿ ಈ ರೀತಿಯಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದೇನೆ. ನಿನ್ನೆಯೇ ನಮ್ಮ ಮನೆಗೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದರು ಎಂದು ಹೇಳಿದ್ದಾರೆ.
ಆಟೋದಲ್ಲಿ ನಿಗೂಢ ಸ್ಫೋಟ ; ಸ್ಥಳದಲ್ಲಿ ಹಳೆಯ ಕುಕ್ಕರ್ ಪತ್ತೆ, ಸ್ಫೋಟಕದ ಬಗ್ಗೆ ಶಂಕೆ
ಕುಕ್ಕರ್ ಬ್ಲಾಸ್ಟ್ ಬಗ್ಗೆ ಪೊಲೀಸ್ ಹೈಎಲರ್ಟ್ ; ಸ್ಫೋಟದ ಹಿಂದೆ ಪ್ರಬಲ ಸಂಚು ಸಾಧ್ಯತೆ, ಸ್ಫೋಟಕದ ಬಗ್ಗೆ ಪರಿಶೀಲನೆ
ಆಟೋ ಸ್ಫೋಟ ಆಕಸ್ಮಿಕ ಘಟನೆಯಲ್ಲ, ಭಯೋತ್ಪಾದಕ ಕೃತ್ಯ ; ಡಿಜಿಪಿ ಪ್ರವೀಣ್ ಸೂದ್ ಟ್ವೀಟ್
Autorickshaw blast at Naguri in Mangalore, accused terrorists carry fake Aadhar card. Identifies himself as a Hindu man though he was a Muslim. The autorickshaw blast in coastal Karnataka's Mangaluru Saturday was not accidental but an "act of terror with the intention to cause serious damage", the state police chief said today. Karnataka top cop Praveen Sood added that the police is probing the incident along with central agencies.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 10:23 pm
Mangaluru Staffer
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
15-08-26 01:28 pm
HK News Staffer
ಕೋಟೆಕಾರಿನಲ್ಲಿ ಕಟ್ಟಡದಿಂದ ಬಿದ್ದು ಗಾಯಗೊಂಡ ವಲಸೆ ಕ...
14-08-26 09:09 pm
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am
Vasanth Bernard, Fraud, Priyadarshini Society...
13-08-26 04:29 pm