ಬ್ರೇಕಿಂಗ್ ನ್ಯೂಸ್
20-11-22 05:56 pm HK News Desk ಕರ್ನಾಟಕ
ಮೈಸೂರು, ನ.20 : ಮಂಗಳೂರಿನ ಆಟೋ ಬಾಂಬ್ ಸ್ಫೋಟದ ಶಂಕಿತ ಆರೋಪಿ ಮೈಸೂರಿನಲ್ಲಿ ಎರಡು ತಿಂಗಳಿನಿಂದ ಬಾಡಿಗೆ ಕೊಠಡಿ ಪಡೆದು ವಾಸವಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಮೈಸೂರಿನ ಲೋಕನಾಯಕ ನಗರ 10ನೇ ಕ್ರಾಸ್ ನಲ್ಲಿ ಮೇಟಗಳ್ಳಿಯಲ್ಲಿರುವ ಮೋಹನ್ ಕುಮಾರ್ ಎಂಬವರಿಗೆ ಸೇರಿದ ಸಿಂಗಲ್ ರೂಮ್‌ನಲ್ಲಿ ಶಂಕಿತ ವಾಸವಿದ್ದ. ಪೊಲೀಸರು ಗಾಯಗೊಂಡ ವ್ಯಕ್ತಿಯ ಚಿತ್ರವನ್ನು ಮಾಲೀಕ ಮೋಹನ್ ಕುಮಾರ್ ಅವರಿಗೆ ತೋರಿಸಿ, ವ್ಯಕ್ತಿಯ ಬಗ್ಗೆ ಮಾಹಿತಿ ದೃಢಪಡಿಸಿದ್ದಾರೆ.
ತಿಂಗಳಿಗೆ 1,800 ಬಾಡಿಗೆ ಪಾವತಿಸುತ್ತಿದ್ದ ವ್ಯಕ್ತಿ, ಈ ಕುರಿತ ಅಗ್ರಿಮೆಂಟ್ ಪ್ರತಿಯಲ್ಲಿ ಪ್ರೇಮ್‌ರಾಜ್ S/o ಮಾರುತಿ ಮತ್ತು ಹುಬ್ಬಳ್ಳಿಯ ವಿಳಾಸವನ್ನು ನೀಡಿದ್ದ. ಆದರೆ ಈತನಿಗೂ ಈ ವಿಳಾಸಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಕಂಡುಬಂದಿದೆ. ಆತ ನಕಲಿ ದಾಖಲೆ ನೀಡಿದ್ದಾನೆ ಎಂಬ ವಿಚಾರವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಈತನ ಕೊಠಡಿಯಲ್ಲಿ ಪರಿಶೀಲಿಸಿದಾಗ, ಸ್ಫೋಟಕ ವಸ್ತುಗಳು, ಸರ್ಕ್ಯೂಟ್ ಬೋರ್ಡ್‌ಗಳು, ಸಲ್ಫ್ಯೂರಿಕ್ ಆಸಿಡ್, ಇತರ ಕೆಲವು ರಾಸಾಯನಿಕಗಳು, ಸಣ್ಣ ಬೋಲ್ಟ್‌ಗಳು, ಬ್ಯಾಟರಿಗಳು, ಮೊಬೈಲ್ ಡಿಸ್ಪ್ಲೇಗಳು, ಮರದ ಪುಡಿ, ಅಲ್ಯೂಮಿನಿಯಂ ಫಾಯಿಲ್, ಮಲ್ಟಿಮೀಟರ್, ವೈರ್‌ಗಳು, ಮಿಕ್ಸರ್ ಜಾರ್‌ಗಳು, ಪ್ರೆಶರ್ ಕುಕ್ಕರ್ ಸೀಟಿಗಳು ಪತ್ತೆಯಾಗಿವೆ. ಅಲ್ಲದೆ ಒಂದು ಮೊಬೈಲ್, ಎರಡು ನಕಲಿ ಆಧಾರ್ ಕಾರ್ಡ್, ಒಂದು ನಕಲಿ ಪ್ಯಾನ್ ಕಾರ್ಡ್, ಒಂದು ಡೆಬಿಟ್ ಕಾರ್ಡ್, ಬಳಕೆಯಾಗದ ಸಿಮ್ ಮತ್ತು ನೋಟ್ ಬುಕ್, ಸರ್ಕ್ಯೂಟ್ ಡ್ರಾಯಿಂಗ್‌ಗಳು ಪತ್ತೆಯಾಗಿವೆ. ಪೊಲೀಸರು, ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದು ಬಾಡಿಗೆ ಮನೆಯಲ್ಲಿದ್ದುಕೊಂಡು ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದ. ಸ್ಫೋಟ ಘಟನೆ ನಡೆದ ಶನಿವಾರ ಬೆಳಗ್ಗೆಯೂ ಮೈಸೂರಿನಲ್ಲಿಯೇ ಇದ್ದ. ಮೈಸೂರಿನ ಕೆ.ಆರ್.ಮೊಹಲ್ಲಾದಲ್ಲಿ ಮೊಬೈಲ್ ರಿಪೇರಿ ಟ್ರೈನಿಂಗ್ ಪಡೆಯುತ್ತಿದ್ದ. ಹೀಗಾಗಿ ಮೊಬೈಲ್ ಟ್ರೈನಿಂಗ್ ಸೆಂಟರ್ ನಲ್ಲಿ ಶಂಕಿತ ವ್ಯಕ್ತಿಯ ಜೊತೆಗಿದ್ದವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮನೆ ಬಾಡಿಗೆ ನೀಡಿದವರು ಪೇಚಿಗೆ ಸಿಲುಕಿದ್ದು ಅವರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಆಟೋದಲ್ಲಿ ನಿಗೂಢ ಸ್ಫೋಟ ; ಸ್ಥಳದಲ್ಲಿ ಹಳೆಯ ಕುಕ್ಕರ್ ಪತ್ತೆ, ಸ್ಫೋಟಕದ ಬಗ್ಗೆ ಶಂಕೆ
ಕುಕ್ಕರ್ ಬ್ಲಾಸ್ಟ್ ಬಗ್ಗೆ ಪೊಲೀಸ್ ಹೈಎಲರ್ಟ್ ; ಸ್ಫೋಟದ ಹಿಂದೆ ಪ್ರಬಲ ಸಂಚು ಸಾಧ್ಯತೆ, ಸ್ಫೋಟಕದ ಬಗ್ಗೆ ಪರಿಶೀಲನೆ
ಆಟೋ ಸ್ಫೋಟ ಆಕಸ್ಮಿಕ ಘಟನೆಯಲ್ಲ, ಭಯೋತ್ಪಾದಕ ಕೃತ್ಯ ; ಡಿಜಿಪಿ ಪ್ರವೀಣ್ ಸೂದ್ ಟ್ವೀಟ್
Autorickshaw blast at Naguri in Mangalore, accused terrorist prepared bomb cooker at house in Mysuru. The autorickshaw blast in coastal Karnataka's Mangaluru Saturday was not accidental but an "act of terror with the intention to cause serious damage", the state police chief said today. Karnataka top cop Praveen Sood added that the police is probing the incident along with central agencies.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 01:32 pm
Mangalore Correspondent
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm