ತುಮಕೂರು; ಸಿಮೆಂಟ್ ಪೈಪ್‌ನಲ್ಲಿ ಹುಲಿಯ ಮೃತ ದೇಹ ಪತ್ತೆ

14-02-23 04:30 pm       HK News Desk   ಕರ್ನಾಟಕ

ಅನುಮಾನಾಸ್ಪದ ರೀತಿಯಲ್ಲಿ ಹುಲಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಹುಲಿಯ ಸುಳಿವು ಇರಲಿಲ್ಲ.

ತುಮಕೂರು,  ಫೆ.14 : ಅನುಮಾನಾಸ್ಪದ ರೀತಿಯಲ್ಲಿ ಹುಲಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಮೀಸಲು ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಹುಲಿ ಸಾವನ್ನಪ್ಪಿರುವುದು ಪತ್ತೆಯಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಹುಲಿಯ ಸುಳಿವು ಇರಲಿಲ್ಲ. ಇದೀಗ ಹುಲಿಯ ಮೃತ ದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿದೆ.

ಇಂದು ಮುಂಜಾನೆ ಚಿಕ್ಕಹೆಗಡೇಹಳ್ಳಿ ಗ್ರಾಮದ ವಾಸಿಯೊಬ್ಬರು ಬಹಿರ್ದೆಸೆಗೆ ಹೋಗಿದ್ದ ಸಂದರ್ಭದಲ್ಲಿ ಹುಲಿ ಸಾವನಪ್ಪಿರುವುದು ಗೊತ್ತಾಗಿದೆ. ಕೂಡಲೇ ಸ್ಥಳೀಯರು ಗುಬ್ಬಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹುಲಿಯನ್ನು ಪರಿಶೀಲಿಸಿದ್ದಾರೆ. ಹುಲಿಯ ಮೈ ಮೇಲೆ ಯಾವುದೇ ಗಾಯ ಅಥವಾ ಹೊಡೆತ ಬಿದ್ದಿರುವ ಗುರುತುಗಳು ಪತ್ತೆಯಾಗಿಲ್ಲ. ಹೀಗಾಗಿ ಹುಲಿ ಸಾವಿನ ರಹಸ್ಯ ಭೇದಿಸಲು ತನಿಖೆ ಮುಂದುವರೆಸಿದ್ದಾರೆ.

ಭದ್ರಾ ಅಭಯಾರಣ್ಯದಿಂದ ವೈದ್ಯ ತಂಡ ಆಗಮಿಸುತ್ತಿದ್ದು, ಹುಲಿ ದೇಹದ ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ. ಇನ್ನು, ಚೇಳೂರು ಪೊಲೀಸರು ಹಾಗೂ ಶಿರಾ ಡಿವೈಎಸ್‌ಪಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.‌

The incident in which a tiger died in a suspicious manner took place in Anksandra reserve forest area of ​​Gubbi taluk of Tumkur district. This is the first time that a tiger has been found dead in Tumkur district, till now there was no trace of a tiger in the district. Now the discovery of the dead body of the tiger has given rise to many doubts.