ಭ್ರಷ್ಟಾಚಾರ ಪ್ರಕರಣ ; ಬಿಜೆಪಿ ಶಾಸಕ ನೆಹರು ಓಲೇಕಾರ್, ಇಬ್ಬರು ಮಕ್ಕಳಿಗೆ ಜೈಲು ಶಿಕ್ಷೆ 

14-02-23 06:08 pm       Bangalore Correspondent   ಕರ್ನಾಟಕ

ಭ್ರಷ್ಟಾಚಾರ ಪ್ರಕರಣದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೇಕಾರ್‌ ಮತ್ತು ಅವರ ಇಬ್ಬರು ಮಕ್ಕಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಬೆಂಗಳೂರು, ಫೆ.14 : ಭ್ರಷ್ಟಾಚಾರ ಪ್ರಕರಣದಲ್ಲಿ ಹಾವೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೇಕಾರ್‌ ಮತ್ತು ಅವರ ಇಬ್ಬರು ಮಕ್ಕಳಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ತನ್ನ ಮಕ್ಕಳಿಗೇ ಸರಕಾರದ ಟೆಂಡರ್‌, ಗುತ್ತಿಗೆಗಳನ್ನು ನೀಡುತ್ತಿದ್ದ ಆರೋಪದ ಮೇರೆಗೆ ನೆಹರು ಓಲೇಕಾರ್‌ ಮತ್ತು ಅವರ ಮಕ್ಕಳಾದ ದೇವರಾಜ್ ಓಲೇಕಾರ್‌ ಹಾಗೂ ಮಂಜುನಾಥ್ ಓಲೇಕಾರ್‌ ಸೇರಿದಂತೆ ಒಂಬತ್ತು ಮಂದಿಗೆ ಕೋರ್ಟ್‌ ಶಿಕ್ಷೆ ವಿಧಿಸಿದೆ. ಮೂರು ವರ್ಷಗಳಿಗಿಂತ ಕಡಿಮೆ ಶಿಕ್ಷೆ ಇರುವ ಕಾರಣ ಕೋರ್ಟ್‌ ನೆಹರೂ ಓಲೇಕಾರ್‌ ಅವರಿಗೆ ಸ್ಥಳದಲ್ಲೇ ಜಾಮೀನು ನೀಡಿದೆ. 

Haveri MLA Nehru Olekar jailed for 2 years, daughters who did crores of  golmal are also punished! IG News | IG News

ಹಾವೇರಿಯ ಶಶಿಧರ ಮಹದೇವಪ್ಪ ಹಳ್ಳಿಕೇರಿ ಎಂಬವರು ಈ ಬಗ್ಗೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ.ಜಯಂತ್‌ ಕುಮಾರ್ ತೀರ್ಪು ಪ್ರಕಟಿಸಿದ್ದಾರೆ. ನೆಹರು ಓಲೇಕಾರ್‌ ಹಾವೇರಿ ಕ್ಷೇತ್ರದಿಂದ ಶಾಸಕರಾಗಿದ್ದು ಶಾಸಕರ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಶಾಸಕರ ಅನುದಾನದಲ್ಲಿ 1 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು ಹಣವನ್ನು ಕಬಳಿಸುವ ಉದ್ದೇಶದಿಂದ ತನ್ನ ಮಕ್ಕಳಿಗೆ ಟೆಂಡರ್ ಆಗುವಂತೆ ಮಾಡಿದ್ದರು.

ನೆಹರು ಓಲೇಕಾರ್‌ ಅವರು ಹಾವೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಶಾಸಕರ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಶಾಸಕರ ಅನುದಾನದಲ್ಲಿ 1 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿ ಕೈಗೊಂಡ ಇವರು ಈ ಹಣವನ್ನು ಕಬಳಿಸುವ ಉದ್ದೇಶವನ್ನು ಹೊಂದಿರುವುದನ್ನು ಕೋರ್ಟ್‌ ಗಮನಿಸಿತ್ತು. ನೆಹರು ಓಲೇಕಾರ್‌ ಅವರು 2010 ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದು ತಮ್ಮ ಕ್ಷೇತ್ರದಲ್ಲಿ 50 ಲಕ್ಷ ರೂ.ಗಳ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು. 

ಇದರಲ್ಲಿ ಹತ್ತು ಅಭಿವೃದ್ಧಿ ಕಾಮಗಾರಿಗಳನ್ನು ಮಾಡುವುದಾಗಿ ಪಟ್ಟಿ ಮಾಡಿದ್ದರು. ಇವುಗಳಲ್ಲಿ ನಾಲ್ಕು ಕಾಮಗಾರಿಗಳನ್ನು ತಮ್ಮ ಹಿರಿಯ ಮಗನಿಗೆ ನೀಡಿದ್ದರು. ಟೆಂಡರ್‌ ನೀಡುವ ಸಮಯದಲ್ಲಿಯೂ ಶಾಸಕರು ತಮ್ಮ ಪ್ರಭಾವ ಬಳಸಿ ತಮ್ಮ ಮಗನಿಗೆ ನೀಡಿದ್ದರು ಎಂದು ದೂರಲಾಗಿತ್ತು. ಲೋಕೋಪಯೋಗಿ ಗುತ್ತಿಗೆಗಳನ್ನು ಕೂಡ ಓಲೇಕಾರ್‌ ಶಾಸಕರ ಕುಟುಂಬದವರೇ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.

A special court on Monday convicted Nehru C. Olekar, BJP MLA from Haveri, his two sons, and five then officials of Haveri city municipal council in a corruption case of 2012 and sentenced them to two years simple imprisonment. B. Jayantha Kumar, judge of the special court set up to exclusively deal with criminal cases related to MPs/MLAs in Karnataka, passed the order, while convicting the MLA under Section 13(1)(d) and 13(2) of the Prevention of Corruption Act, 1988 for abusing power and other provisions of the Indian Penal Code.