ಬ್ರೇಕಿಂಗ್ ನ್ಯೂಸ್
15-02-23 07:47 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.15: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ನೀಡಿರುವ ಆರೋಪದ ಮೇಲೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸತೀಶ್ ರೆಡ್ಡಿ ಹತ್ಯೆಗೆ ಕುಖ್ಯಾತ ರೌಡಿ ಗ್ಯಾಂಗ್ ಸ್ಕೆಚ್ ಹಾಕಿದ್ದ ಸ್ಫೋಟಕ ವಿಷಯ ಬಹಿರಂಗಗೊಂಡಿದೆ. ನಗರದ ವಿಲ್ಸನ್ ಗಾರ್ಡನ್ ನಾಗನ ತಂಡ ಶಾಸಕನ ಹತ್ಯೆಗೆ 2 ಕೋಟಿಗೆ ಸುಪಾರಿ ಪಡೆದಿದ್ದು ಶಾಸಕರ ಚಲನವಲನಗಳ ಬಗ್ಗೆ ನಿಗಾವಹಿಸಿದ್ದರು. ಆದರೆ ದಾಳಿಗೂ ಮುಂಚೆ ರೌಡಿಶೀಟರ್ ನಾಗನ ತಂಡದಿಂದಲೇ ವಿಷಯ ಬಹಿರಂಗಗೊಂಡಿದೆ.
ನಾಗನ ತಂಡದಲ್ಲಿದ್ದ ಚಿತ್ರದುರ್ಗದ ಮೂಲದ ಆಕಾಶ್ ಕೊಲೆಯ ಸುಳಿವು ಬಿಟ್ಟು ಕೊಟ್ಟಿದ್ದಾನೆ. ಸತೀಶ್ ರೆಡ್ಡಿ ಬೆಂಬಲಿಗ ಚಂದ್ರು ಕರೆ ಮಾಡಿದ್ದಾಗ ಆಕಾಶ್ ಕೊಲೆಯ ಸಂಚು ಬಾಯ್ಬಿಟ್ಟಿದ್ದಾನೆ. ನಂತರ ಎಚ್ಚೆತ್ತ ಶಾಸಕರು ಪೊಲೀಸರಿಗೆ ದೂರು ನೀಡಿದ್ದಾರೆ.
ತಮ್ಮ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ರೌಡಿ ನಾಗನ ತಂಡ ಎಸ್ಕೇಪ್ ಆಗಿದೆ. ರೌಡಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಹಿಂದೆ ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ನಿವಾಸದ ಅಂಗಳದಲ್ಲಿ ನಿಲ್ಲಿಸಿದ್ದ ಎರಡು ಐಷಾರಾಮಿ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು. ಫಾರ್ಚೂನರ್ ಕಾರು ಹಾಗೂ ಮಹೀಂದ್ರಾ ಥಾರ್ ಜೀಪ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು. ಈ ಘಟನೆ ರಾಜ್ಯ ರಾಜಕೀಯದಲ್ಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೇ ದಿನಗಳಲ್ಲಿ ಆರೋಪಿಗಳ ಬಂಧನ ಆಗಿತ್ತು. ನಾಲ್ವರು ದುಷ್ಕರ್ಮಿಗಳು ಪೆಟ್ರೋಲ್ ಕ್ಯಾನ್ ತಂದು ಎರಡು ಐಷಾರಾಮಿ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಹತ್ಯೆ ಸುಪಾರಿ ಬಗ್ಗೆ ವಿಧಾನಸೌಧದಲ್ಲಿ ಸತೀಶ್ ರೆಡ್ಡಿ ಮಾತನಾಡಿ, ನನಗೆ ಮಂಗಳವಾರ ಸಂಜೆ ಪೊಲೀಸರು ಈ ಬಗ್ಗೆ ತಿಳಿಸಿದರು. ಈಗ ಚುನಾವಣೆ ಇದೆ, ರಾಜಕೀಯ ಕಾರಣಗಳೂ ಇರಬಹುದು. ಈ ವಿವಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ತಿಳಿಸಿದ್ದೇನೆ. ಬೆದರಿಕೆ ಹಿನ್ನೆಲೆಯಲ್ಲಿ ಭದ್ರತೆಯನ್ನು ಪಡೆದುಕೊಳ್ಳಲು ಸಿಎಂ ಸೂಚಿಸಿದರು. ಆದರೆ ನನಗೆ ಭದ್ರತೆ ಬೇಡ ಅಂದಿದ್ದೇನೆ. ಇದರ ಹಿಂದೆ ರಾಜಕೀಯ ಉದ್ದೇಶ ಇದೆ . ನಾನು ಭಯ ಪಡುವುದಿಲ್ಲ. ಸುಪಾರಿ ಹಿಂದೆ ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶವೂ ಇರಬಹುದು. ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ತಾರೆ. ಆರೋಪಿಗಳು ನನ್ನ ಚಲನವಲನ ಮೇಲೆ ಗಮನ ಇಟ್ಟಿದ್ದರಂತೆ. ಅವರು ಎಲ್ಲೆಲ್ಲಿ ಓಡಾಡಿದ್ದಾರೆ, ಏನೇನು ಮಾಡಿದ್ದಾರೆ ಅಂತ ಪೊಲೀಸರು ಮಾಹಿತಿ ಪಡ್ಕೊಂಡಿದ್ದಾರೆ ಎಂದು ತಿಳಿಸಿದರು.
Plot to Murder bangalore MLA Satish Reddy, killers master plan leaked, two arrested. Wilson garden Rowdy shetter was given two crores to murder MLA.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
23-09-26 09:28 pm
HK News Staffer
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm
sudarshan jain, murder, manglore: ಮೂಡುಬಿದ್ರೆ...
23-09-26 08:12 pm
ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನ...
23-09-26 05:12 pm