ಹತ್ಯೆ ಮಾಡಲು ಜನರನ್ನು ಯಾಕೆ ಪ್ರಚೋದಿಸ್ತೀರಿ, ನೀವೇ ಕೋವಿ ಹಿಡಿದು ಬನ್ನಿ ; ಗಾಂಧಿ ಕೊಂದವರಿಂದ ಬೇರೇನು ಮಾಡಲು ಸಾಧ್ಯ ! 

16-02-23 01:20 pm       Bangalore Correspondent   ಕರ್ನಾಟಕ

ನನ್ನ ಹತ್ಯೆ ಮಾಡುವಂತೆ ರಾಜ್ಯದ ಒಬ್ಬ ಸಚಿವ ಬಹಿರಂಗವಾಗಿ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತು ಹೋಗಿದೆ ಎಂದೇ ಲೆಕ್ಕ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಬೆಂಗಳೂರು, ಫೆ.16 : ನನ್ನ ಹತ್ಯೆ ಮಾಡುವಂತೆ ರಾಜ್ಯದ ಒಬ್ಬ ಸಚಿವ ಬಹಿರಂಗವಾಗಿ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತು ಹೋಗಿದೆ ಎಂದೇ ಲೆಕ್ಕ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ. 

ಸಚಿವ ಅಶ್ವತ್ಥ ನಾರಾಯಣ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಖಾರವಾಗಿಯೇ ತಿರುಗೇಟು ನೀಡಿದ್ದು ಸರಣಿ ಟ್ವೀಟ್ ಮಾಡಿದ್ದಾರೆ. ನನ್ನನ್ನು ಹತ್ಯೆ ಮಾಡಲು ನೀವೇ ಕೋವಿ ಹಿಡಿದುಕೊಂಡು ಬನ್ನಿ. ಅಲ್ಲದೆ, ಇಂತಹ ಹೇಳಿಕೆಗೆ ನಾನು ಅಚ್ಚರಿಗೊಂಡಿಲ್ಲ. ಗಾಂಧಿಯನ್ನು ಕೊಂದವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ತಿವಿದಿದ್ದಾರೆ.

ಟಿಪ್ಪುವನ್ನು ಹೊಡೆದುಹಾಕಿದಂತೆ ನನ್ನನ್ನೂ ಹೊಡೆದುಹಾಕಬೇಕು ಎಂದು ಸಚಿವ ಅಶ್ವತ್ಥ್​ ನಾರಾಯಣ್ ಅವರು ಜನರಿಗೆ ಕರೆ ನೀಡಿದ್ದಾರೆ. ಜನರನ್ನು ಯಾಕೆ ಪ್ರಚೋದಿಸುತ್ತೀರಿ ಸಚಿವರೇ? ನೀವೇ ಕೋವಿ ಹಿಡಿದುಕೊಂಡು ಬಂದು ಬಿಡಿ. ನನ್ನ ಹತ್ಯೆಗೆ ಅಶ್ವತ್ಥ್ ನಾರಾಯಣ್ ಅವರು ಕೊಟ್ಟ ಕರೆಯಿಂದ ನನಗೇನು ಆಶ್ಚರ್ಯವಾಗಿಲ್ಲ. ಗಾಂಧೀಜಿಯನ್ನು ಕೊಂದವರನ್ನೇ ಆರಾಧಿಸುತ್ತಿರುವ ಪಕ್ಷದ ನಾಯಕರಿಂದ ಕೊಲೆ ಗಡುಕತನವಲ್ಲದೆ, ಪ್ರೀತಿ, ಕರುಣೆ, ಸ್ನೇಹವನ್ನು ನಿರೀಕ್ಷಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Karnataka CM Bommai promises to fill up one lakh govt posts | Deccan Herald

ರಾಜ್ಯದ ಒಬ್ಬ ಸಚಿವ ಈ ರೀತಿ ಬಹಿರಂಗವಾಗಿ ಹತ್ಯೆಗೆ ಕರೆ ನೀಡಿದ ನಂತರವೂ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದಾದರೆ ಈ ರಾಜ್ಯವನ್ನು ಆಳುವವರು ಜೀವಂತವಾಗಿಲ್ಲ, ಸರ್ಕಾರ ಸತ್ತುಹೋಗಿದೆ ಎಂದೇ ಲೆಕ್ಕ. ಸಚಿವ ಅಶ್ವತ್ಥ್ ನಾರಾಯಣ್ ನೀಡಿರುವ ಹತ್ಯೆ ಕರೆಯ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರತಿಕ್ರಿಯೆ ಏನು ಎನ್ನುವುದನ್ನು ನಾನು ತಿಳಿಯಬಯಸುತ್ತೇನೆ. ಮೌನ ಸಮ್ಮತಿಯ ಲಕ್ಷಣವೇ? ಎಂದಿದ್ದಾರೆ.

Govt needs Rs 10,000 cr to recruit new staff in varsities' | Deccan Herald

ಅಶ್ವತ್ಥ್ ನಾರಾಯಣ್ ಮನುಷ್ಯರೋ ರಾಕ್ಷಸರೋ? 

ಬಾಗಲಕೋಟೆಯಲ್ಲಿ ನಡೆದ ಪಕ್ಷದ ಸಭೆಯಲ್ಲಿ ತಿರುಗೇಟು ನೀಡಿದ್ದ ಸಿದ್ದರಾಮಯ್ಯ ಅವರು, ಅಶ್ವತ್ಥ್ ನಾರಾಯಣ್ ಮನುಷ್ಯರೋ ರಾಕ್ಷಸರೋ ನೀವೇ ತಿಳಿದುಕೊಳ್ಳಿ. ಸಿದ್ದರಾಮಯ್ಯ ಅವರನ್ನು ಟಿಪ್ಪುವಿನಂತೆ ಹೊಡೆದು ಹಾಕಬೇಕು ಎಂದರಂತೆ. ಹೊಡೆದು ಹಾಕೋಕೆ ನೀವು ಬಿಡ್ತೀರಾ? ನಾನು ಟಿಪ್ಪು, ಬಸವಣ್ಣ, ರಾಯಣ್ಣ ಎಲ್ಲರನ್ನೂ ಗೌರವಿಸ್ತೇನೆ. ನಾನು ಮನುಷ್ಯತ್ವ ಇರೋನು. ಹಿಂದುಗಳನ್ನು ಪ್ರೀತಿಸ್ತೀನಿ, ಮುಸ್ಲಿಂ, ಕ್ರೈಸ್ತ, ವಾಲ್ಮೀಕಿ ಎಲ್ಲರನ್ನೂ ಪ್ರೀತಿಸ್ತೀನಿ ಎಂದು ಟಾಂಗ್ ಕೊಟ್ಟಿದ್ದರು. 

ಸಚಿವ ಅಶ್ವತ್ಥ ನಾರಾಯಣ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅವರ ಈ ರೀತಿಯ ಕೀಳು ಅಭಿರುಚಿಯ ಮತ್ತು ಪ್ರಚೋದನಕಾರಿ ಹೇಳಿಕೆ ಬಗ್ಗೆ ಬೆಂಗಳೂರಿನ ಹೈಗ್ರೌಂಡ್ ಠಾಣೆಯಲ್ಲಿ ಕಾಂಗ್ರೆಸ್ ನಾಯಕರು ದೂರು ನೀಡಿದ್ದಾರೆ.

Former Karnataka chief minister and senior Congress leader Siddaramaiah on Thursday said he is ‘not surprised’ by state education minister C N Ashwathnarayan's ‘appeal to kill’ him at a public gathering in the state’s Mandya district. The Congress leader was referring to Ashwathnarayan's public address at a rally where he allegedly made a comparison between Siddaramaiah and 17th-century Mysuru ruler Tipu Sultan.