ಬ್ರೇಕಿಂಗ್ ನ್ಯೂಸ್
16-02-23 11:09 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.16: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದ ಸಚಿವ ಅಶ್ವತ್ಥ ನಾರಾಯಣ ಕುರಿತಾಗಿ ಗುರುವಾರ ಸದನದಲ್ಲಿ ಕಾಂಗ್ರೆಸ್ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದ್ದಾರೆ. ಇದರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಾಳ್ಮೆ ಕಳಕೊಂಡು ಗದ್ದಲ ಎಬ್ಬಿಸುವ ಕಾಂಗ್ರೆಸ್ ನಾಯಕರನ್ನು ಸದನದಿಂದ ಹೊರಕ್ಕೆ ಹಾಕುವುದಾಗಿ ಅಬ್ಬರಿಸಿದ ಪ್ರಸಂಗವೂ ನಡೆಯಿತು.
ಸದನದಲ್ಲಿ ಮಾಜಿ ಸಚಿವ ಯುಟಿ ಖಾದರ್, ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ, ಅಶ್ವತ್ಥ ನಾರಾಯಣ ಹೇಳಿಕೆಯನ್ನು ಪ್ರಸ್ತಾಪಿಸಿ ಕಟು ಮಾತುಗಳಲ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇಷ್ಟಾಗುತ್ತಿದ್ದಂತೆ ಇತರೇ ಕಾಂಗ್ರೆಸ್ ಸದಸ್ಯರು, ಅಶ್ವತ್ಥ ನಾರಾಯಣ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಯುಟಿ ಖಾದರ್ ಮಾತನಾಡಿ, ಈ ರೀತಿಯ ಮಾತುಗಳು ಕರಾವಳಿ ಸೇರಿದಂತೆ ಎಲ್ಲ ಕಡೆಯೂ ಕೇಳಿಬರುತ್ತಲೇ ಇದೆ. ಉಳ್ಳಾಲ, ತುಮಕೂರಿನಲ್ಲಿ ಇಂಥ ದ್ವೇಷದ ಮಾತುಗಳು ಕೇಳಿಬಂದರೂ, ನೀವು ಖಂಡಿಸುವ ಕೆಲಸ ಮಾಡಿಲ್ಲ. ನಿಮ್ಮವರ ಈ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ಕೊಡುವುದೇ ಬೇಡ ಎಂದು ಸುಮ್ಮನಿದ್ದೆವು. ಆದರೆ ಈಗ ಮಾಜಿ ಮುಖ್ಯಮಂತ್ರಿಯನ್ನು ಕೊಲ್ಲಬೇಕು ಎಂದು ಹೇಳಿರುವುದು ಎಷ್ಟು ಸರಿ. ಇದು ನಿಮ್ಮ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ತಿರುಗೇಟು ನೀಡಿದರು.
ಈಶ್ವರ್ ಖಂಡ್ರೆ ಗದ್ದಲ ಎಬ್ಬಿಸುವದನ್ನು ಸಹಿಸದ ಕಾಗೇರಿ, ನಿಮ್ಮನ್ನು ಮಾರ್ಷಲ್ ಗಳ ಮೂಲಕ ಹೊರಗೆ ಹಾಕಿಸುತ್ತೇನೆ. ನನ್ನಿಂದ ಆ ಕೆಲಸ ಮಾಡಿಸಲು ಅವಕಾಶ ಕೊಡಬೇಡಿ ಎಂದು ಜೋರು ದನಿಯಲ್ಲಿ ಅಬ್ಬರಿಸಿದರು. ಬಳಿಕ ಸ್ವತಃ ಸಚಿವ ಅಶ್ವತ್ಥ ನಾರಾಯಣ ಅವರೇ ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಸಿದ್ದರಾಮಯ್ಯ ಗುರಿಯಾಗಿಸಿ ಹೇಳಿದ್ದಲ್ಲ. ಕಾಂಗ್ರೆಸನ್ನು ಸೋಲಿಸಿ ಎನ್ನುವ ವಿಚಾರದಲ್ಲಿ ಹೇಳಿದ್ದು ಎಂದರು. ಅಶ್ವತ್ಥ ನಾರಾಯಣ ಹೇಳಿಕೆಯ ಬಗ್ಗೆ ರಾಜ್ಯದೆಲ್ಲೆಡೆ ಆಕ್ರೋಶ ಕೇಳಿಬಂದಿದ್ದು, ಕಾಂಗ್ರೆಸ್, ಜೆಡಿಎಸ್ ನಾಯಕರು ಹರಿಹಾಯ್ದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ, ಸಿದ್ದರಾಮಯ್ಯ ರಾಜಕೀಯ ವಿರೋಧಿ ಅಷ್ಟೇ. ಹಾಗಂತ ಅವರೇನು ನಮ್ಮ ಶತ್ರುವಲ್ಲ. ಅಶ್ವತ್ಥ ನಾರಾಯಣ ಯಾವ ಅರ್ಥದಿಂದ ಹಾಗೆ ಹೇಳಿದ್ದೋ ಗೊತ್ತಿಲ್ಲ. ಆ ರೀತಿಯ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ ಎಂದು ಹೇಳಿದರು. ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಪ್ರತಿಕ್ರಿಯಿಸಿ, ಆತ ಅಸ್ವಸ್ಥ ನಾರಾಯಣ. ಮಾನಸಿಕ ಅಸ್ವಸ್ಥನಾಗಿದ್ದು ಹಾಗೆ ಹೇಳಿಕೆ ನೀಡುತ್ತಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಬೇಕು ಎಂದಿದ್ದಾರೆ.
The Legislative Assembly witnessed pandemonium on Thursday when Opposition Congress members sought action against Higher Education Minister C.N. Ashwath Narayan’s alleged controversial appeal to “finish off”’ the former Chief Minister Siddaramaiah. While Mr. Siddaramaiah, in a series of tweets, accused Dr. Ashwath Narayan of trying to “instigate” people to kill him and urged Chief Minister Basavaraj Bommai to immediately sack the Minister, the latter claimed that his words were being misinterpreted and he was willing to “express regret” in case the Congress leader was hurt.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm