ಬ್ರೇಕಿಂಗ್ ನ್ಯೂಸ್
19-02-23 12:21 pm HK News Desk ಕರ್ನಾಟಕ
ಕಲಬುರಗಿ, ಫೆ.19: ಕಳೆದ ಬಾರಿ ಶಿವರಾತ್ರಿಯಂದೇ ಗಲಭೆಗೆ ಕಾರಣವಾಗಿದ್ದ ಅಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ ಈ ಸಲ ಶಾಂತಿಯುತ ಶಿವಲಿಂಗ ಪೂಜೆ ನಡೆಸಲಾಗಿದೆ. ಹಿಂದು - ಮುಸ್ಲಿಮರು ಒಂದೇ ದಿನ ಪೂಜೆ ಮತ್ತು ನಮಾಜ್ ನಡೆಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ.
ದರ್ಗಾದ ಒಳಗಿನ ವಿವಾದಿತ ಶಿವಲಿಂಗಕ್ಕೆ ಹಿಂದೂಗಳು ಪೂಜೆ ಸಲ್ಲಿಸಿದರೆ, ಮುಸ್ಲಿಂ ಸಮುದಾಯದವರು ನಮಾಜ್ ನಡೆಸಿದ್ದಾರೆ. ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಲಿಂಗಕ್ಕೆ ಶಿವರಾತ್ರಿಯಂದು ಪೂಜೆ ಸಲ್ಲಿಸಬೇಕು ಎಂದು ಹಿಂದೂ ಮುಖಂಡರು ಅನುಮತಿ ಕೇಳಿದ್ದಕ್ಕೆ ಹೈಕೋರ್ಟ್ ಅವಕಾಶ ಕಲ್ಪಿಸಿತ್ತು. ಶಿವರಾತ್ರಿಯ ಒಂದು ದಿನ ದರ್ಗಾದ ಒಳಗೆ ಬಂದು ಹಿಂದುಗಳು ಸೀಮಿತ ಸಂಖ್ಯೆಯಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಹೀಗಾಗಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದರೂ ಜಿಲ್ಲಾಡಳಿತ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದರಿಂದ ಲಿಂಗಪೂಜೆ ಶಾಂತಿಯುತವಾಗಿ ಪೂರ್ಣಗೊಂಡಿದೆ.
ಕೋರ್ಟ್ ಆದೇಶದಂತೆ ದರ್ಗಾದಲ್ಲಿ ಬೆಳಗಿನ ವೇಳೆ 14 ಮುಸ್ಲಿಂ ಮುಖಂಡರು ತಮ್ಮ ರೀತಿಯಲ್ಲಿ ಆರಾಧನೆ, ಪ್ರಾರ್ಥನೆ ಮಾಡಿದರೆ, ಮಧ್ಯಾಹ್ನ 15 ಹಿಂದು ಮುಖಂಡರು ರಾಘವ ಚೈತನ್ಯ ಲಿಂಗಕ್ಕೆ ಪೂಜೆ ಮಾಡಿದ್ದಾರೆ. ಬಿಗು ಬಂದೋಬಸ್ತ್ ನಡುವಲ್ಲೇ ಶಾಂತಿಯುತವಾಗಿ ಪೂಜೆ ನಡೆಸಿ ಹೊರಬಂದಿದ್ದಾರೆ. ಕಡಗಂಚಿಯ ವೀರಭದ್ರ ಶಿವಾಚಾರ್ಯರು, ಶ್ರೀರಾಮ ಸೇನೆಯ ಸಿದ್ಧಲಿಂಗ ಸ್ವಾಮೀಜಿ, ಮುರಹರಿ ಮಹಾರಾಜ, ಶಾಸಕ ಸುಭಾಷ್ ಗುತ್ತೇದಾರ, ಬಸವರಾಜ ಮತ್ತಿಮೂಡ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹಿಂದುಗಳ ನಿಯೋಗದಲ್ಲಿದ್ದರು.
ಕಳೆದ ವರ್ಷ ಇದೇ ರೀತಿ ಹಿಂದುಗಳು ಪೂಜೆಗೈದು ಹೊರ ಬರುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಆಳಂದ ಪಟ್ಟಣದಲ್ಲಿ ಶುಕ್ರವಾರ ಮಧ್ಯರಾತ್ರಿಯಿಂದಲೇ 144 ಕಲಂ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಇದರಿಂದ ಪಟ್ಟಣದಲ್ಲಿ ಹೆಚ್ಚು ಜನ ಕೂಡಲು ಅವಕಾಶ ಇರಲಿಲ್ಲ. ಭದ್ರತೆಗಾಗಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.
Aland town in Kalaburagi district of Karnataka was completely shut down on February 18 as representatives of both the Muslim and Hindu communities were allowed to perform Urus and Maha Shivaratri rituals at the historic Ladle Mashak dargah. The Karnataka Waqf Tribunal and later Kalaburagi bench of the Karnataka High Court issued orders allowing 15 members of the Muslim community to perform Urus rituals between 8 a.m. and 12 noon, and 15 members of the Hindu community, including Siddalinga swamy of Karuneshwara mutt in Jewargi, to offer pooja to the Raghava Chaitanya Shivalinga inside the dargah between 2 p.m. and 6 p.m.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm