ಬ್ರೇಕಿಂಗ್ ನ್ಯೂಸ್
22-02-23 10:23 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.22: ಮಾಜಿ ಯೋಧನೊಬ್ಬನಿಗೆ ಸರಕಾರಿ ಜಾಗ ತೆಗೆಸಿಕೊಡುತ್ತೇನೆಂದು ಹೇಳಿ, 60-70 ಲಕ್ಷ ರೂಪಾಯಿ ಹಣ ಪಡೆದು ವಂಚನೆ ಎಸಗಿರುವ ಮಂಗಳೂರಿನ ಅಬ್ದುಲ್ ರಜಾಕ್ ಎಂಬಾತನ ಬಗ್ಗೆ ಶಾಸಕ ಯುಟಿ ಖಾದರ್ ವಿಧಾನಸಭೆಯಲ್ಲಿ ಗಮನ ಸೆಳೆದಿದ್ದಾರೆ.
ಮಾಜಿ ಯೋಧ ವಿಕ್ರಂ ದತ್ತ ಎಂಬವರಿಗೆ ಸರಕಾರದ ಮಾನದಂಡದಡಿ ಕಡಿಮೆ ಬೆಲೆಗೆ ಸರಕಾರಿ ಜಾಗ ಸಿಗುತ್ತದೆ. ಅದೇ ನೀತಿಯಡಿ ಬಿಜೆಪಿ ನಾಯಕರ ದಲ್ಲಾಳಿಯಾಗಿ ಕೆಲಸ ಮಾಡುವ ಅಬ್ದುಲ್ ರಜಾಕ್ ಎಂಬಾತ ಯೋಧನ ಬಳಿಯಿಂದ 60-70 ಲಕ್ಷ ರೂ. ಹಣ ಪಡೆದು ವಂಚನೆ ನಡೆಸಿದ್ದಾನೆ. ಅಲ್ಲದೆ, ಯೋಧನಿಗೆ ಜಾಗದ ನಕಲಿ ಆದೇಶ ಪತ್ರಗಳನ್ನೂ ಕೊಡಿಸಿದ್ದಾನೆ. ಸರಕಾರದ ಜಂಟಿ ಕಾರ್ಯದರ್ಶಿ ಕೆ. ರವೀಂದ್ರನಾಥ ನಾಯ್ಕ ಸಹಿ ಮತ್ತು ಸೀಲ್ ಹಾಕಿ ನೀಡಿರುವ ಆದೇಶ ಪತ್ರಗಳನ್ನು ನೀಡಿದ್ದ. ಆದರೆ ವಿಕ್ರಮದತ್ತ ಅವರು ತನಗೆ ಸಿಕ್ಕ ಜಾಗದ ದಾಖಲೆ ಪಡೆದು ತೆರಳಿದಾಗ ಆ ಜಾಗವೇ ಇರಲಿಲ್ಲ ಎಂದು ಯುಟಿ ಖಾದರ್ ವಿಧಾನಸಭೆಯಲ್ಲಿ ಸ್ಪೀಕರ್ ಕಾಗೇರಿ ಅವರ ಗಮನಕ್ಕೆ ತಂದಿದ್ದಾರೆ.

ರಾಜ್ಯದಲ್ಲಿ ಭ್ರಷ್ಟಾಚಾರ ಹೇಗೆ ನಡೀತಿದೆ ಎನ್ನುವುದಕ್ಕಿದು ಉದಾಹರಣೆ. ಅಷ್ಟೇ ಅಲ್ಲದೆ, ಈ ಅಬ್ದುಲ್ ರಜಾಕ್ ಎನ್ನುವ ವ್ಯಕ್ತಿ ಪ್ರಧಾನಿ ಮೋದಿ ಜೊತೆಗೆ ಫೋಟೋ ತೆಗೆಸಿಕೊಂಡಿದ್ದು, ಪ್ರಭಾವಿ ನಾಯಕರ ಆಪ್ತನಾಗಿ ಗುರುತಿಸಿಕೊಂಡಿದ್ದಾನೆ ಎಂದು ಸ್ಪೀಕರ್ ಗಮನ ಸೆಳೆದಾಗ, ಈ ಬಗ್ಗೆ ಪೊಲೀಸ್ ದೂರು ದಾಖಲಾಗಿದೆಯೇ ಎಂದು ಕೇಳಿದರು. ತನಗೆ ಹಣ ಮರಳಿ ಕೊಡು ಎಂದು ಯೋಧ ಕೇಳಿದ್ದಾರೆ. ಆದರೆ ಅಬ್ದುಲ್ ರಜಾಕ್ ತಾನೊಬ್ಬ ಪ್ರಭಾವಿ ವ್ಯಕ್ತಿಯೆಂದು ಹೇಳಿಕೊಂಡು ಹಣ ಕೊಡದೆ ವಂಚಿಸಿದ್ದಾನೆ. ಆತ ಪ್ರಭಾವಿ ಆಗಿರುವುದರಿಂದ ದೂರು ಕೊಟ್ಟರೂ ಏನೂ ಫಲಕಾರಿಯಾಗಲ್ಲ ಎಂದು ಯೋಧ ವಿಕ್ರಂ ದತ್ತ ನಮ್ಮ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾನೂನು ಸಚಿವ ಮಾಧುಸ್ವಾಮಿ, ಕಂದಾಯ ಸಚಿವ ಅಶೋಕ್ ಮತ್ತು ನಾನು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಅಬ್ದುಲ್ ರಜಾಕ್ ಎನ್ನುವಾತ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಪಿಎ ಎಂದು ಹೇಳಿಕೊಂಡು ಬಹಳಷ್ಟು ಅಕ್ರಮ ಎಸಗಿದ್ದಾನೆ ಅನ್ನುವ ಆರೋಪಗಳಿವೆ. ಅಲ್ಲದೆ, ಸಂಸದ ನಳಿನ್ ಕುಮಾರ್ ಅವರ ಖಾಸಾ ಆಪ್ತರ ಬಳಗದಲ್ಲಿ ಗುರುತಿಸಿಕೊಂಡಿದ್ದಾನೆ. ಅಬ್ದುಲ್ ರಜಾಕ್ ವಿರುದ್ಧ ಚೆಕ್ ಬೌನ್ಸ್ ಸೇರಿದಂತೆ ಬಹಳಷ್ಟು ಅಕ್ರಮದ ಆರೋಪಗಳಿದ್ದು, ಪ್ರಕರಣ ದಾಖಲಾಗಿದೆ.
#Nalinkateel close aide cheats army personnel of getting govt land and cheats around 60 to 70 lakhs, MLA #UTkhader slams Kateel proving with documents in #cabinet today. Credit News First pic.twitter.com/QYTYpd6ehq
— Headline Karnataka (@hknewsonline) February 22, 2023
Nalin kateel close aide cheats army personnel of getting govt land and cheats around 60 to 70 lakhs, khader slams Kateel proving with documents in cabinet today.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
23-09-26 10:47 pm
HK News Desk
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
ಬೀದರ್ ಶಾಹೀನ್ ವಿದ್ಯಾಸಂಸ್ಥೆಯಲ್ಲಿ ಆರೋಗ್ಯ ನಿರ್ಲಕ್...
22-09-26 08:32 pm
ಆಳ್ವಾಸ್ ಮೆಡಿಕಲ್ ಕಾಲೇಜು ಲೋಕಾರ್ಪಣೆ ; ಡೀಮ್ಡ್ ವಿವ...
21-09-26 10:36 pm
23-09-26 09:28 pm
HK News Staffer
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm
ಶಾರ್ಜಾದಲ್ಲಿ ಆಲ್ವಿನ್ ಪ್ರಕಾಶ್ ಕುಂದರ್ ಬರ್ಬರ ಹತ್ಯ...
23-09-26 09:22 pm
sudarshan jain, murder, manglore: ಮೂಡುಬಿದ್ರೆ...
23-09-26 08:12 pm
ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನ...
23-09-26 05:12 pm