ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ಹೈವೇ ಮಾರ್ಚ್ 11ರಂದು ಉದ್ಘಾಟನೆ ;  ಪ್ರಧಾನಿ ಮೋದಿಯಿಂದ ಲೋಕಾರ್ಪಣೆ

25-02-23 02:19 pm       Bangalore Correspondent   ಕರ್ನಾಟಕ

ಬೆಂಗಳೂರು ಹಾಗೂ ಮೈಸೂರು ನಗರಗಳ ಜನತೆ ಕಾತರದಿಂದ ಕಾಯುತ್ತಿದ್ದ, ಉಭಯ ನಗರಗಳ ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿ ಮಾರ್ಚ್‌ 11ರಂದು ಲೋಕಾರ್ಪಣೆಯಾಗಲಿದೆ.

ಬೆಂಗಳೂರು, ಫೆ.25: ಬೆಂಗಳೂರು ಹಾಗೂ ಮೈಸೂರು ನಗರಗಳ ಜನತೆ ಕಾತರದಿಂದ ಕಾಯುತ್ತಿದ್ದ, ಉಭಯ ನಗರಗಳ ನಡುವಿನ ದಶಪಥ ರಾಷ್ಟ್ರೀಯ ಹೆದ್ದಾರಿ ಮಾರ್ಚ್‌ 11ರಂದು ಲೋಕಾರ್ಪಣೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಧೃಡಪಡಿಸಿದ್ದಾರೆ.

ಇದರ ಜೊತೆಗೆ ಪ್ರಧಾನಿ ಮೋದಿ ಮೈಸೂರಿನಿಂದ ಕುಶಾಲನಗರದವರೆಗಿನ ಉದ್ದೇಶಿತ ಚತುಷ್ಪಥ ಎಕ್ಸ್‌ಪ್ರೆಸ್ ರಸ್ತೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಶುಕ್ರವಾರ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

mysore mp pratap simha press meet | 'ಅಶ್ವಥ್ ನಾರಾಯಣ್ ಅವರನ್ನು ವೈಯಕ್ತಿಕವಾಗಿ  ಟಾರ್ಗೆಟ್ ಮಾಡಲಾಗುತ್ತಿದೆ' Karnataka News in Kannada

ಪ್ರಧಾನಿ ಮೋದಿಯವರ ಅಧಿಕಾರಾವಧಿಯಲ್ಲಿ ಈ ಯೋಜನೆ ಪೂರ್ಣಗೊಂಡಿರುವುದರಿಂದ, ಅವರೇ ಇದನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವುದು ಸೂಕ್ತ" ಎಂದು ಸಿಂಹ ಹೇಳಿದರು. ನೀವು ರಾಜ್ಯ ರಾಜಕೀಯಕ್ಕೆ ಪ್ರವೇಶಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್ ಸಿಂಹ,  2029 ರವರೆಗೆ ಮೋದಿ ನಾಯಕತ್ವದಲ್ಲಿ ಸಂಸದರಾಗಿ ಮುಂದುವರಿಯಲು ಬಯಸುತ್ತೇನೆ ಎಂದು ಹೇಳಿದರು.

ನಾನು ಇಲ್ಲಿಗೆ ಬಂದಿರುವುದು ದೀರ್ಘಾವಧಿಯ ರಾಜಕೀಯ ಮಾಡಲು ಅಲ್ಲ ಆದರೆ ನನ್ನ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಮತ್ತು 15 ವರ್ಷಗಳ ಅವಧಿಯಲ್ಲಿ ಇತರ ಕ್ಷೇತ್ರಗಳಿಗೆ ಮಾದರಿಯಾಗಲು ಎಂದಿದ್ದಾರೆ.

Prime Minister Narendra Modi will inaugurate the Bengaluru-Modi will inaugurate the Bengaluru-Mysuru Expressway on March 11, Mysuru-Kodagu MP Pratap Simha said on Friday. "The groundbreaking ceremony for the four-lane Mysuru-Madikeri Road will also be held on the occasion," the MP said, adding that the Indavalu-Budanur underpass works are being taken up on a war footing and will be completed at the earliest.