ಬ್ರೇಕಿಂಗ್ ನ್ಯೂಸ್
27-02-23 10:58 pm HK News Desk ಕರ್ನಾಟಕ
ಬೆಳಗಾವಿ, ಫೆ.27: ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರ ಖಾತೆಗಳಿಗೆ 13ನೇ ಕಂತಿನ ಹಣವನ್ನು ಜಮೆ ಮಾಡಿದರು. 8 ಕೋಟಿಗೂ ಅಧಿಕ ರೈತರ ಖಾತೆಗಳಿಗೆ ತಲಾ 2 ಸಾವಿರದಂತೆ ಒಟ್ಟಾರೆ ರೂ. 16,800 ಕೋಟಿ ಹಣವನ್ನು ನೇರವಾಗಿ ವರ್ಗಾವಣೆ ಮಾಡುವ ಮೂಲಕ ಹೋಳಿ ಗಿಫ್ಟ್ ನೀಡಿದರು.
ಇದೇ ವೇಳೆ ಜಲ ಜೀವನ್ ಮಿಷನ್ ಯೋಜನೆಯಡಿ ರೂ. 2,240 ಕೋಟಿ ಮೊತ್ತದ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ನಂತರ ಮಾತನಾಡಿದ ಪ್ರಧಾನಿ, ಬೆಳಗಾವಿಯಿಂದ ದೇಶದ ಎಲ್ಲ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. 50 ಸಾವಿರ ಕೋಟಿಗೂ ಹೆಚ್ಚು ಹಣ ಮಹಿಳೆಯರ ಖಾತೆಗೆ ಹಣ ತಲುಪಿದೆ. ದೇಶದಲ್ಲಿ ಅತಿ ಹೆಚ್ಚು ಸಣ್ಣ ರೈತರಿದ್ದು, ಈ ಯೋಜನೆಯಿಂದ ಅವರಿಗೆ ಅನುಕೂಲವಾಗಲಿದೆ. ಯಾವುದೇ ಭ್ರಷ್ಟಾಚಾರವಿಲ್ಲದ ಹಣ ರೈತರ ಕೈ ಸೇರುತ್ತಿದೆ ಮೊಬೈಲ್ ನಲ್ಲಿ ಮೆಸೇಜ್ ಪರಿಶೀಲಿಸಿ ಎಂದರು.
2014ರ ನಂತರ ಕೃಷಿ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ಆಗಿದೆ. ಕೃಷಿಯಲ್ಲಿ ಆಧುನಿಕ ಬದಲಾವಣೆ ತರಲಾಗುತ್ತಿದೆ. ಪ್ರಸ್ತುತ ವರ್ಷ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರಾಕೃತಿಕ ಸಹಜ ಕೃಷಿ ಕಾಯಕ್ಕೆ ಆಧ್ಯತೆ ನೀಡಲಾಗುತ್ತಿದೆ. ಸಿರಿ ಧಾನ್ಯ ಬೆಳೆಗಳ ಬೆಳವಣಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ರೈಲ್ವೆ ಕಾಮಗರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಳಗಾವಿ ರೈಲು ನಿಲ್ದಾಣ ಆಶ್ಚರ್ಯ ಮತ್ತು ಅಭಿಮಾನ ಉಂಟು ಮಾಡುವಷ್ಟು ಅಧುನಿಕರಣಗೊಳಿಸಲಾಗಿದೆ. ಡಬಲ್ ಎಂಜನಿ ಸರ್ಕರದ ಕಾರಣ ಮನೆ ಮನೆಗಳಿಗೆ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಕಾಂಗ್ರೆಸ್ ಕುಟುಂಬದ ರಾಜಕಾರಣ ದೇವರಾಜ್ ಅರಸ್, ವೀರೇಂದ್ರ ಪಾಟೀಲ ಅಪಮಾನ ಮಾಡಿದೆ. ಮಲ್ಲಿಕಾರ್ಜು ಖರ್ಗೆ ಅವರಿಗೆ ಗೌರವಿಸುತ್ತೇನೆ. ಆದರೆ, ಕಾಂಗ್ರೆಸ್ ದಲ್ಲಿ ಅವರಿಗೆ ಸೂಕ್ತ ಗೌರವ ದೊರೆಯುತ್ತಿಲ್ಲ. ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸಲಾಗುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ನಿರಾಸೆಯ ಭಾವದಲ್ಲಿ ನರಳುತ್ತಿದೆ ಎಂದು ಟೀಕಿಸಿದರು. ಬೆಳಗಾವಿ ಜನತೆ ನೀಡಿದ ಅಭೂತಪೂರ್ವ ಸ್ವಾಗತಕ್ಕೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು. ಬೆಳಗಾವಿ ಜನತೆ ತೋರಿದ ಅಗಮ್ಯೆ ಪ್ರೀತಿಯನ್ನು ಕರ್ನಾಟಕದ ಅಭಿವೃದ್ಧಿಯ ಮೂಲಕ ಬಡ್ಡಿಸಹಿತ ಋಣ ತೀರಿಸುವುದಾಗಿ ಭರವಸೆ ನೀಡಿದರು.
ಕಾಂಗ್ರೆಸ್‌ನಿಂದ ಖರ್ಗೆಗೆ ಅಪಮಾನ, ಬೆಳಗಾವಿಯಲ್ಲಿ ಮೋದಿ ಗಂಭೀರ ಆರೋಪ;
ಮಲ್ಲಿಕಾರ್ಜುನ್ ಖರ್ಗೆಗೆ ಕಾಂಗ್ರೆಸ್ ಅಪಮಾನ ಮಾಡುತ್ತಿದೆ ಅಂತ ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ರು. ಈ ಹಿಂದೆ ಎಸ್ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ಗೆ ಕಾಂಗ್ರೆಸ್ ಪರಿವಾರ ಅವಮಾನ ಮಾಡಿತ್ತು. ಇದೀಗ ಮಲ್ಲಿಕಾರ್ಜುನ್ ಖರ್ಗೆಯವರಿಗೂ ಕಾಂಗ್ರೆಸ್ ಅಪಮಾನ ಮಾಡಿದೆ ಅಂತ ಆರೋಪಿಸಿದ್ರು. ಇದೇ ಭೂಮಿಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ನಾನು ಗೌರವಿಸುತ್ತೇನೆ. ನನಗೆ ಕೆಲ ದಿನಗಳ ಹಿಂದೆ ಖರ್ಗೆ ಪರಿಸ್ಥಿತಿ ನೋಡಿ ದುಃಖವಾಯಿತು. ಅಧಿವೇಶನದ ವೇಳೆ ಬಿಸಿಲು ಇತ್ತು. ಆದರೆ ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೆರಳು ನೀಡಿರಲಿಲ್ಲ. ಅದು ಬೇರೆಯವರಿಗೆ ನೀಡಲಾಗಿತ್ತು ಅಂತ ಆರೋಪಿಸಿದ್ರು.
ಖರ್ಗೆಯವರಿಗೆ ಹೆಸರಿಗೆ ಮಾತ್ರ ಅಧಿಕಾರ ;
ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೆಸರಿಗೆ ಮಾತ್ರ ಅಧಿಕಾರವಿದೆ. ಆದರೆ ಅದರ ರಿಮೋಟ್ ಕಾಂಗ್ರೆಸ್ ಪರಿವಾರದ ಕೈನಲ್ಲಿದೆ. ಇದನ್ನು ಮುಕ್ತ ಮಾಡಬೇಕಾಗಿರುವುದು ನಮ್ಮ ಗುರಿ ಅಂತ ಮೋದಿ ಹೇಳಿದ್ರು. ನಾನು ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಾನು ಅಪಾರ ಗೌರವ ಕೊಡ್ತೇನೆ. ಆದರೆ ಛತ್ತೀದ್ ಘಡದಲ್ಲಿ ನಡೆದ ಮಹಾ ಅಧಿವೇಷನದಲ್ಲಿ ಅಪಮಾನ ಮಾಡಲಾಗಿದೆ. ಬಿಸಿಲಿನಲ್ಲಿ ಕುಳಿತ ಛತ್ರಿಯ ಸೌಭಾಗ್ಯ ಖರ್ಗೆಗೆ ಸಿಗಲಿಲ್ಲ, ಪಕ್ಕದಲ್ಲಿ ಕುಳಿತಿದ್ದವರಿಗೆ ಛತ್ರಿಯ ಭಾಗ್ಯ ಸಿಕ್ಕಿತು ಅಂತ ವ್ಯಂಗ್ಯವಾಡಿದ್ರು.
ಮೋದಿ ಸಾಯಲಿ ಅಂತ ಕಾಂಗ್ರೆಸ್ ಅಶಿಸುತ್ತಿದೆ ;
ಕಾಂಗ್ರೆಸ್ ಮೋದಿ ಜೀವಂತ ಇರೋವರೆಗೂ ಕಾಂಗ್ರೆಸ್ ಮೇಲೆ ಏಳಲ್ಲ ಅಂತ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಕೆಲವರು ಮೋದಿ ಸಾಯಲಿ ಅಂತಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು. ನನಗೆ ಹಳ್ಳ ತೋಡುವುದರಲ್ಲಿ ಕೆಲವರು ಬ್ಯುಸಿಯಾಗಿದ್ದಾರೆ. ಕೆಲವರು ನಿಮ್ಮ ಹಳ್ಳ ತೆಗೆಯುತ್ತಿದ್ದಾರೆ ಅಂತಿದ್ದಾರೆ. ಆದರೆ ದೇಶ ಹೇಳುತ್ತಿದೆ ನಿಮ್ಮ ಕಮಲ ಅರಳುತ್ತದೆ. ಸತ್ಯದ ಹಾದಿಯಲ್ಲಿ ಕೆಲಸ ಮಾಡಿದಾಗ ಯಾವುದೇ ತೊಂದರೆಯಾಗುವುದಿಲ್ಲ ಅಂತ ಮೋದಿ ಹೇಳಿದ್ರು. ಇನ್ನು ನನಗೆ ಕೊಟ್ಟಿರು ವಪ್ರೀತಿ ವಿಶ್ವಾಸವನ್ನು ಬಡ್ಡಿ ಸಮೇತ ಅಭಿವೃದ್ಧಿ ಮಾಡಿ ಹಿಂದಿರುಗಿಸುತ್ತೇನೆ ಅಂತ ಮೋದಿ ಇದೇ ಸಂದರ್ಭದಲ್ಲಿ ವಾಗ್ದಾನ ಮಾಡಿದ್ರು.
ಬೆಳಗಾವಿ ಬಗ್ಗೆ ಮೋದಿ ಹೊಗಳಿಕೆ ಮಾತು;
ಬೆಳಗಾವಿ ನವೀಕೃತ ರೈಲ್ವೆ ನಿಲ್ದಾಣ ನೋಡಿದ್ರೆ ಅಭಿಮಾನ ಉಂಟಾಗುತ್ತೆ ಎಂದ ಮೋದಿ, ಭಾರತದ ವಿವಿಧೆಡೆ ಇದೇ ಮಾದರಿಯಲ್ಲಿ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯಾಗ್ತಿದೆ. ಹೊಸ ರೈಲ್ವೆ ಲೈನ್ ಗಳಿಗೂ ಚಾಲನೆ ಸಿಗ್ತಿದೆ ಎಂದರು. ಇನ್ನು ಬೆಳಗಾವಿ ಪ್ರವಾಸೋದ್ಯಮದ ದೃಷ್ಟಿಯಲ್ಲಿಯೂ ಮಹತ್ವ ಪಡೆಯಲಿದೆ. ಡಬಲ್ ಎಂಜಿನ್ ಸರ್ಕಾರ ಹೇಗೆ ಕೆಲಸ ಮಾಡುತ್ತೆ ಅನ್ನೋದಕ್ಕೆ ಜಲಜೀವನ್ ಮಿಷನ್ ಸಾಕ್ಷಿ. ಈ ಯೋಜನೆಯ ಅಡಿಯಲ್ಲಿ ಮನೆ ಮನೆಗೂ ನಳದ ಜೋಡಣೆಯಾಗಿದೆ. ಇನ್ನು ಮುಂದೆ ನೀರಿಗಾಗಿ ಪರದಾಟ ತಪ್ಪುತ್ತೆ ಅಂತ ವಿಶ್ವಾಸ ವ್ಯಕ್ತಪಡಿಸಿದ್ರು.
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ, ಜನಸಾಗರ;
ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಯಲ್ಲಿ ರೋಡ್ ಶೋ ನಡೆಸಿದರು. ಚೆನ್ನಮ್ಮ ವೃತ್ತದಿಂದ ಮಾಲಿನಿ ಸಿಟಿಯವರೆಗೂ ಸುಮಾರು 10.7 ಕಿ.ಮೀ. ದೂರದವರೆಗೂ ಪೊಲೀಸ್ ಬಿಗಿ ಭದ್ರತೆಯಲ್ಲಿ ಮೋದಿ ರೋಡ್ ಶೋ ನಲ್ಲಿ ಪಾಲ್ಗೊಂಡರು.
ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ನೆರೆದಿತ್ತು. ಹರ ಹರ ಮೋದಿ ಎಂಬ ಘೋಷಣೆ ಕೂಗಿ ಕಾರಿನ ಮೇಲೆ ಹೂ ಮಳೆ ಸುರಿದರು. ಕಟ್ಟಡಗಳ ಮೇಲೇರಿದ ಜನರು, ಬಿಜೆಪಿ ಭಾವುಟ ಪ್ರದರ್ಶಿಸುತ್ತಾ, ಮೋದಿ ಪರ ಜೈಕಾರ ಹಾಕಿ ಹರ್ಷೋದ್ಗಾರ ಮಾಡಿದರು.
Prime Minister Narendra Modi on Monday released the 13th installment of the Prime Minister Kisan Samman Nidhi Scheme (PM-KISAN) worth Rs 16,800 crore for over eight crore eligible farmers at an event held at Belagavi, Karnataka. With this, the total amount transferred to the beneficiaries is expected to cross Rs 2.30 lakh crore. “All farmers of India have been connected with Belagavi here today, crores of farmers have been credited with over Rs 16,000 crore from here. This installment is a greeting of Holi,” PM Modi declared.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm