ಬ್ರೇಕಿಂಗ್ ನ್ಯೂಸ್
28-02-23 12:32 pm HK News Desk ಕರ್ನಾಟಕ
ಶಿರಸಿ, ಫೆ 28: ತಾಲ್ಲೂಕಿನ ಬನವಾಸಿಗೆ ಮಂಗಳವಾರ ಕದಂಬೋತ್ಸವ ಉದ್ಘಾಟನೆಗೆ ಆಗಮಿಸಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಣಕಿಸುವಂತೆ ಪಟ್ಟಣದ ಹಲವೆಡೆ ಪೇ ಸಿ.ಎಂ. ಪೋಸ್ಟರ್ ಸೋಮವಾರ ರಾತ್ರಿ ಅಂಟಿಸಲಾಗಿದೆ.
ರಾಜ್ಯದ ಹಲವೆಡೆ ನಡೆಯುತ್ತಿದ್ದ ಪೇ ಸಿಎಂ ಪೋಸ್ಟರ್ ಅಭಿಯಾನ ಈಗ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಕ್ಷೇತ್ರಕ್ಕೂ ಕಾಲಿಟ್ಟಿದೆ.
ಸಿ.ಎಂ ಬರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಹಾಗೂ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪೋಸ್ಟರ್ ಅನ್ನು ಹಾಕಿ ಆಹಾರದ 'ಕಿಟ್ ಸ್ಕ್ಯಾಮ್‌ಗೆ ಪೇ ಸಿಎಂ ಮಾಡಿ' ಹಾಗೂ 'ಡೀಲ್ ನಿಮ್ದು, ಕಮಿಷನ್ ನಮ್ದು' ಎಂದು ಬರೆದು ಬನವಾಸಿಯ ರಸ್ತೆಗಳಲ್ಲಿ ಪೋಸ್ಟರ್ ಅಂಟಿಸಲಾಗಿದೆ. ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ ಮುಂದುವರೆದಿದೆ.
ಕಂದಬೋತ್ಸವ ಹಾಗೂ ವಿವಿಧ ಕಾರ್ಯಕ್ರಮಕ್ಕಾಗಿ ಮಂಗಳವಾರ ಸಂಜೆ ಶಿರಸಿ ಮತ್ತು ಸಿದ್ದಾಪುರಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಬಿಜೆಪಿ ವಿರುದ್ಧ ಪೋಸ್ಟರ್ ಅಭಿಯಾನ ಮುಂದುವರೆಸಲಾಗಿದೆ. ಪೇ ಸಿಎಂ ಜತೆಗೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಿರುದ್ಧ ಪೋಸ್ಟರ್ ಗಳನ್ನ ಅಂಟಿಸಲಾಗಿದೆ.
ಸಿಎಂ ಸಂಚರಿಸುವ ಮಾರ್ಗದಲ್ಲಿ ಪೋಸ್ಟರ್ ;
ಸಿಎಂ ಸಂಚರಿಸುವ ಬನವಾಸಿಯ ರಸ್ತೆಯುದ್ದಕ್ಕೂ ಪೇ ಸಿಎಂ ಪೋಸ್ಟರ್ ಗಳನ್ನ ಅಳವಡಿಕೆ ಮಾಡಲಾಗಿದೆ. ರಸ್ತೆ ಬದಿಯಲ್ಲಿನ ಮರ ಹಾಗೂ ಕಟ್ಟಡಗಳಿಗೆ ಪೋಸ್ಟರ್‌ಗಳನ್ನ ಅಳವಡಿಕೆ ಮಾಡಲಾಗಿದೆ.
ಆಹಾರ ಕಿಟ್ ಅವ್ಯವಹಾರಕ್ಕೆ ಕಿಡಿ ;
ಕಾರ್ಮಿಕ ಇಲಾಖೆಯಲ್ಲಿನ ಆಹಾರದ ಕಿಟ್ ಸ್ಕ್ಯಾಮ್‌ಗೆ ಪೇ ಮಾಡಿ ಡೀಲ್ ನಿಮ್ದು ಕಮಿಷನ್ ನಮ್ದು ಎಂದು ಬರೆದಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಪೋಟೋ ಸಹಿತದ ಪೋಸ್ಟರ್ ಅಳವಡಿಕೆಯಾಗಿದೆ. ಇದು ಸ್ಥಳೀಯ ಬಿಜೆಪಿಗರಿಗೆ ಮುಜುಗರ ತಂದಿದೆ.
ದಿನವೂ ಮುಖ್ಯಮಂತ್ರಿಗಳು ಬರಲಿ ಎಂದ ಜನರು;
ಸಿಎಂ ಆಗಮನ ಹಿನ್ನೆಲೆ ರಸ್ತೆ ಸಮಸ್ಯೆ ಸರಿಪಡಿಸಿರುವುದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಸ್ಥಳೀಯ ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿಗಳು ದಿನವೂ ಜಿಲ್ಲೆಗೆ ಬರುವವರಾಲಿ. ಆಗಲಾದರೂ ರಸ್ತೆಗಳು ಹೊಂಡಗುಂಡಿ ಮುಕ್ತವಾಗಲಿದೆ ಎಂದು ಪೋಸ್ಟ್ ಹಾಕಿದ್ದಾರೆ.
Pay CM sticker campaign in Sirsi ahead of CM Bommai arriving to inaugurate Kadambotsava.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm