ಶಿವಮೊಗ್ಗಕ್ಕೆ ರಕ್ಷಾ ಯುನಿವರ್ಸಿಟಿ ಮಂಜೂರು ; ಇಲ್ಲಿ ಕೋರ್ಸ್ ಮಾಡಿದರೆ ನೇರವಾಗಿ ಪೊಲೀಸ್ ಹುದ್ದೆಗೆ ಆಯ್ಕೆ 

28-02-23 03:06 pm       HK News Desk   ಕರ್ನಾಟಕ

ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ ನಮ್ಮ ರಾಜ್ಯಕ್ಕೆ ಸ್ಯಾಂಕ್ಷನ್ ಆಗಿದೆ. ಅದಕ್ಕಾಗಿ ಶಿವಮೊಗ್ಗ ಜಿಲ್ಲೆಯ ನವುಲೆಯಲ್ಲಿ 8 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ ಸುಸಜ್ಜಿತ ಕಟ್ಟಡ, ಮೂಲಸೌಕರ್ಯ ಇರುವಂತಹ ಕ್ಯಾಂಪಸ್ ರಚಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ‌

ಶಿವಮೊಗ್ಗ, ಫೆ.28 : ರಾಷ್ಟ್ರೀಯ ರಕ್ಷಾ ಯೂನಿವರ್ಸಿಟಿ ನಮ್ಮ ರಾಜ್ಯಕ್ಕೆ ಸ್ಯಾಂಕ್ಷನ್ ಆಗಿದೆ. ಅದಕ್ಕಾಗಿ ಶಿವಮೊಗ್ಗ ಜಿಲ್ಲೆಯ ನವುಲೆಯಲ್ಲಿ 8 ಎಕರೆ ಜಾಗ ಗುರುತಿಸಲಾಗಿದೆ. ಅಲ್ಲಿ ಸುಸಜ್ಜಿತ ಕಟ್ಟಡ, ಮೂಲಸೌಕರ್ಯ ಇರುವಂತಹ ಕ್ಯಾಂಪಸ್ ರಚಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ‌

ಈ ಸಲದ ಶೈಕ್ಷಣಿಕ ವರ್ಷದಲ್ಲಿ ಕೇಂದ್ರ ಆರಂಭಕ್ಕೆ ರಾಗಿಗುಡ್ಡದಲ್ಲಿ ಕಟ್ಟಡ ನೀಡಲಾಗಿದೆ. ಮಿಲಿಟರಿ ಮತ್ತು ಆಂತರಿಕ ಭದ್ರತಾ ವ್ಯವಸ್ಥೆಗೆ ಸಂಬಂಧಪಟ್ಟಂತೆ ಬೋಧನೆ ಇಲ್ಲಿ ಆಗುತ್ತದೆ. ಸೈಬರ್ ಸೇರಿದಂತೆ, ವಿವಿಧ ಕೋರ್ಸುಗಳು ಇಲ್ಲಿ ಬರಲಿದೆ. ಪಿಯುಸಿ ಬಳಿಕದ ಕೋರ್ಸ್ ಇದಾಗಿದ್ದು ಶಿವಮೊಗ್ಗದ ವಿದ್ಯಾರ್ಥಿಗಳಿಗೆ ಹೊಸ ದಿಕ್ಕು ತೋರಿಸಲಿದೆ. ಇತ್ತೀಚೆಗೆ ಅಹಮದಾಬಾದ್ ನಲ್ಲಿ ಈ ಯೂನಿವರ್ಸಿಟಿ ಇರುವಲ್ಲಿಗೆ ಭೇಟಿ ಕೊಟ್ಟಿದ್ದೆವು. ಅಹಮದಾಬಾದ್ ಬಿಟ್ಟರೆ, ಶಿವಮೊಗ್ಗದಲ್ಲೇ ಈ ಕೇಂದ್ರ ಆರಂಭವಾಗುತ್ತಿದೆ. 

ಕರ್ನಾಟಕ ಪೊಲೀಸ್ ಗೆ ಪ್ರತಿ ವರ್ಷ 5 ಸಾವಿರ ಜನರನ್ನು ತೆಗೆದುಕೊಳ್ಳುತ್ತೇವೆ. ಹೀಗಾಗಿ ಈ ಯೂನಿವರ್ಸಿಟಿ ನಮಗೆ ಉಪಯೋಗಕ್ಕೆ ಬರುತ್ತದೆ. ಇಲ್ಲಿ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ನೇರವಾಗಿ ಪೊಲೀಸ್ ಡ್ಯೂಟಿಗೆ ಹೋಗಬಹುದಾಗಿದೆ. ಎಕ್ಸಾಂ ಬರೆದು ಪೊಲೀಸ್ ಇಲಾಖೆ ಸೇರಿದವರಿಗೆ 8 ತಿಂಗಳ ಕಾಲ ಟ್ರೈನಿಂಗ್ ನೀಡುತ್ತೇವೆ. ಅದರ ಬದಲಾಗಿ ಈ ಕೋರ್ಸ್ ಪರ್ಯಾಯವಾಗಿದೆ ಎಂದು ಹೇಳಿದರು. 

ಸರ್ಕಾರಿ ನೌಕರರ ಮುಷ್ಕರ ಬಗ್ಗೆ ಕೇಳಿದ ಪ್ರಶ್ನೆಗೆ, ಈ ಬಗ್ಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯೆ ನೀಡಲಿದ್ದಾರೆ. ಕಾನೂನು ಸುವ್ಯವಸ್ಥೆ ನೀಡಲು ಇಲಾಖೆ ಸಜ್ಜಾಗಿದೆ. ಸರ್ಕಾರಿ ನೌಕರರು ಕಾನೂನು ಸುವ್ಯವಸ್ಥೆ ಹಾಳು ಮಾಡುವುದಿಲ್ಲ ಎಂದರು.‌ 

Supreme Court: Latest news, Updates, Photos, Videos and more.

ಪಿ.ಎಸ್.ಐ. ಮರು ನೇಮಕಾತಿ ಕುರಿತ ಪ್ರಶ್ನೆಗೆ, ಕೋರ್ಟ್ ಆರ್ಡರ್ ನಿರೀಕ್ಷೆ ಮಾಡುತ್ತಿದ್ದೇವೆ. ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರವಿದೆ. ಅದು ಬಂದ ಬಳಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ರೌಡಿ ಶೀಟರ್ ಪಟ್ಟಿಯಿಂದ ಅತಿ ಹೆಚ್ಚು ರೌಡಿಗಳನ್ನು ಬಿಟ್ಟಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ನಾವು ಕಾನೂನಾತ್ಮಕವಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವರನ್ನ ರಾಜಕೀಯವಾಗಿ ರೌಡಿ ಪಟ್ಟಿಗೆ ಸೇರಿಸುತ್ತಾರೆ. ಹಾಗಾಗಿ ಅವರ ಬ್ಯಾಕ್ ಗ್ರೌಂಡ್ ನೋಡಿಕೊಂಡು ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.

Raksha University to come up in Shivamogga, allotments to police department made easier.