ಬ್ರೇಕಿಂಗ್ ನ್ಯೂಸ್
03-03-23 02:48 pm HK News Desk ಕರ್ನಾಟಕ
ದಾವಣಗೆರೆ, ಮಾ.4 : ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮನೆ ಮೇಲೂ ಲೋಕಾಯುಕ್ತ ರೈಡ್ ಆಗಿದೆ. ಅತ್ತ ಗೃಹ ಸಚಿವ ಅಮಿತ್ ಷಾ ಬೆಂಗಳೂರಿಗೆ ಆಗಮಿಸುತ್ತಿರುವ ಹೊತ್ತಲ್ಲೇ ಪಕ್ಷದ ಶಾಸಕನೇ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ.
ಲೋಕಾಯುಕ್ತ ಎಸ್ ಪಿ ಕೌಲಾಪುರೆ ನೇತೃತ್ವದಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳು ದಾವಣಗೆರೆಯ ಮಾಡಾಳು ಎಂಬಲ್ಲಿರುವ ಶಾಸಕರ ಮನೆಯಲ್ಲಿ ಆಸ್ತಿ, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನಿನ್ನೆಯಷ್ಟೇ ಶಾಸಕರ ಪುತ್ರ ಮಾಡಾಳು ಪ್ರಶಾಂತ್ ಕಚೇರಿಯಲ್ಲಿ 40 ಲಕ್ಷ ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತಕ್ಕೆ ಸಿಕ್ಕಿಬಿದ್ದಿದ್ದರು. ಆನಂತರ, ಪ್ರಶಾಂತ್ ಮನೆಗೆ ದಾಳಿ ನಡೆಸಿ 6 ಕೋಟಿ ನಗದು ಸೀಜ್ ಮಾಡಿದ್ದರು. ಇದೀಗ, ಶಾಸಕ ಮಾಡಾಳು ವಿರುಪಾಕ್ಷಪ್ಪ ಮನೆಗೂ ದಾಳಿ ನಡೆಸಿರುವುದು ಚುನಾವಣೆ ಕಾಲದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ತೀವ್ರ ಇರಿಸು ಮುರಿಸು ತಂದಿದೆ.
ಇದೇ ವೇಳೆ, ಶಾಸಕ ಮಾಡಾಳು ವಿರೂಪಾಕ್ಷಪ್ಪ ಬಗ್ಗೆ ಮತ್ತಷ್ಟು ಭ್ರಷ್ಟಾಚಾರ ಆರೋಪಗಳನ್ನು ರಾಮಸೇನೆ ಮುಖಂಡರು ಮಾಡಿದ್ದು ಆ ಕುರಿತ ದಾಖಲೆಗಳನ್ನು ಬಯಲಿಗೆಳೆದಿದ್ದಾರೆ. ನೂರಾರು ಎಕೆರೆ ಆಸ್ತಿ, ಸೈಟ್ ಇದ್ರೂ ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸೈಟ್ ಪಡೆದಿದ್ದಾರೆ. ದಾಖಲೆಯಲ್ಲಿ ತನ್ನಲ್ಲಿ 1.20 ಲಕ್ಷ ರೂ. ಮಾತ್ರ ಇದೆ, ಕಡು ಬಡವ ಎಂದು ತೋರಿಸಿ ಸರ್ಕಾರಿ ನಿವೇಶನ ಖರೀದಿಸಿದ್ದಾರೆ. ದಾವಣಗೆರೆ ನಗರದ ಜೆಎಚ್ ಪಟೇಲ್ ಬಡಾವಣೆಯಲ್ಲಿ ಮಾಡಾಳು ಕುಟುಂಬ ನಿವೇಶನ ಪಡೆದಿದ್ದಾರೆಂದು ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್ ಆರೋಪ ಮಾಡಿದ್ದಾರೆ.
ಈ ಬಗ್ಗೆ ಶಾಸಕ ಮಾಡಾಳು ವಿರುಪಾಕ್ಷಪ್ಪ, ಪುತ್ರ ಮಾಡಾಳು ಮಲ್ಲಿಕಾರ್ಜುನ್, ಸೊಸೆ ಸುಧಾರಾಣಿ, ಸಂಬಂಧಿ ಪ್ರವೀಣ್ ಕುಮಾರ್ ಮೇಲೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದ್ದು ಸ್ವಜನ ಪಕ್ಷಪಾತ, ಭ್ರಷ್ಟಾಚಾರ ನಡೆಸಿರುವ ಮಾಡಾಳು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದಲ್ಲದೆ, ಬೆಂಗಳೂರು, ದಾವಣಗೆರೆ ಹಾಗೂ ಚನ್ನಗಿರಿಯಲ್ಲಿ ಅಪಾರ ಪ್ರಮಾಣದಲ್ಲಿ ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಬೆಂಗಳೂರಿನಲ್ಲಿ ಡಾಲರ್ಸ್ ಕಾಲೋನಿ, ಸಂಜಯನಗರ, ವಿಜಯ ನಗರದಲ್ಲಿ ಎರಡೆರೆಡು ಮನೆ, ಶಿವಮೊಗ್ಗದಲ್ಲಿ ಒಂದು ಮನೆ, ಚನ್ನಗಿರಿಯಲ್ಲಿ 112 ಎಕರೆ ಅಡಿಕೆ ತೋಟ, 17 ಕಾಂಪ್ಲೆಕ್ಸ್, 7 ಬಂಗಲೆ, ದಾವಣಗೆರೆಯ ಬಿನ್ನಿ ರಸ್ತೆಯಲ್ಲಿ 4 ಅಂತಸ್ತಿನ ಬಿಲ್ಡಿಂಗ್, ಜಿಎಮ್ ಐಟಿ ಹಿಂಭಾಗ 50 ಸಾವಿರ ಅಡಿ ನಿವೇಶನ, ಕುಂದವಾಡದ ಸರ್ವೇ ನಂಬರ್-255/1 ರಲ್ಲಿ 4.5 ಎಕರೆ ಜಮೀನು, ಚಿಕ್ಕತೊಗಲೇರಿ ಬಳಿ 47 ಎಕರೆ ಜಮೀನು, ಹರಪನಹಳ್ಳಿಯ ಮಾದೇಹಳ್ಳಿ ಬಳಿ 47 ಎಕರೆ ಅಡಿಕೆ ತೋಟವನ್ನು ಅಕ್ರಮವಾಗಿ ಮಾಡಿಕೊಂಡಿದ್ದಾರೆ. ಇದೆಲ್ಲ ಅಕ್ರಮ ಆಸ್ತಿ ಎಂದು ಮಣಿ ಸರ್ಕಾರ್ ಆರೋಪಿಸಿದ್ದಾರೆ.
ಭ್ರಷ್ಟಾಚಾರದ ಬಗ್ಗೆ ಬೆಂಗಳೂರು ವಿಶೇಷ ಲೋಕಾಯುಕ್ತ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಮಾಡಾಳ ವಿರುಪಾಕ್ಷಪ್ಪ ಸೇರಿ, ಮಕ್ಕಳು ಹಾಗೂ ಸೊಸೆಯಂದಿರ ಮೇಲೂ ದೂರು ನೀಡಲಾಗಿದೆ. ಪುತ್ರ ಮಾಡಾಳು ಪ್ರಶಾಂತ್ ಹಿಂದೆ ರೂರಲ್ ಇನ್ ಪ್ರಾಸ್ಟ್ರಕ್ಟರ್ ಲಿ. ಅಧಿಕಾರಿಯಾಗಿದ್ದಗಲೂ ಅಕ್ರಮ ಎಸಗಿದ್ದಾರೆ. ಆಗ 55 ಕೋಟಿ ರೂ. ಆಸ್ತಿ ಅಕ್ರಮ ಎಸಗಿ 2017 ರಲ್ಲಿ ಸಸ್ಪೆಂಡ್ ಕೂಡ ಆಗಿದ್ದರು. ಇವೆಲ್ಲ ಅಕ್ರಮದಲ್ಲಿ ತಂದೆ ಶಾಸಕ ವಿರೂಪಾಕ್ಷಪ್ಪ ಕೈವಾಡ ಇದೆ. ಹೀಗಾಗಿ ಮಾಡಾಳು ವಿರುಪಾಕ್ಷಪ್ಪ ಸೇರಿ ಇಬ್ಬರು ಮಕ್ಕಳನ್ನು ಬಂಧಿಸಿ ತನಿಖೆಗೆ ಒಳಪಡಿಸುವಂತೆ ಮಣಿ ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.
Ahead of Karnataka polls, Lokayukta raids house of BJP MLA's son, recovers 6 crore cash, Sri Ram Sena reveals shocking details.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm