ಯಡಿಯೂರಪ್ಪ ಸಂಚರಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಅಚಾತುರ್ಯ ; ಕಾಪ್ಟರ್ ಮೇಲೆ ಹಾರಿದ ಪ್ಲಾಸ್ಟಿಕ್ ಚೀಲಗಳು, ಪೊಲೀಸರು ಕಕ್ಕಾಬಿಕ್ಕಿ 

06-03-23 04:47 pm       HK News Desk   ಕರ್ನಾಟಕ

ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪವಾದ ಘಟನೆ ಜೇವರ್ಗಿ ಪಟ್ಟಣದ ಹೆಲಿಪ್ಯಾಡ್​​ನಲ್ಲಿ ನಡೆದಿದೆ. 

ಕಲಬುರಗಿ, ಮಾ.6: ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ಭದ್ರತಾ ಲೋಪವಾದ ಘಟನೆ ಜೇವರ್ಗಿ ಪಟ್ಟಣದ ಹೆಲಿಪ್ಯಾಡ್​​ನಲ್ಲಿ ನಡೆದಿದೆ. 

ವಿಜಯ ಸಂಕಲ್ಪ ರಥಯಾತ್ರೆಯಲ್ಲಿ ಪಾಲ್ಗೊಳ್ಳಲು ಯಡಿಯೂರಪ್ಪ ಜೇವರ್ಗಿ ಆಗಮಿಸಿದ್ದಾರೆ. ಹೆಲಿಕಾಪ್ಟರ್​ ಮೂಲಕ ಬಂದ ಯಡಿಯೂರಪ್ಪ ತಾತ್ಕಾಲಿಕವಾಗಿ ನಿರ್ಮಿಸಲಾಗಿರುವ ಹೆಲಿಪ್ಯಾಡ್​​ನಲ್ಲಿ ಕಾಪ್ಟರ್​ ಲ್ಯಾಂಡ್​​ ಆಗುವ ವೇಳೆ ಪ್ಲಾಸ್ಟಿಕ್ ಚೀಲಗಳು ಹಾರಿಬಂದಿವೆ. ತಕ್ಷಣ ಎಚ್ಚೆತ್ತ ಪೈಲೆಟ್‌ ಹೆಲಿಕಾಪ್ಟರ್​ನ್ನು ಲ್ಯಾಂಡ್​ ಮಾಡದೆ ಬೇರೆಡೆ ತೆಗೆದುಕೊಂಡು ಹೋಗಿದ್ದಾರೆ. ಇದರಿಂದ ಕ್ಷಣಕಾಲ ಆತಂಕ ಸೃಷ್ಟಿಯಾಗಿತ್ತು. 

ಹೆಲಿಪ್ಯಾಡ್ ಸುತ್ತ ಜಮೀನಿನನಲ್ಲಿ ಹಾಕಿದ್ದ ಪ್ಲಾಸ್ಟಿಕ್ ಚೀಲಗಳನ್ನು ತೆಗೆದು ಸ್ವಚ್ಛಗೊಳಿಸಿರಲಿಲ್ಲ. ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್  ತಿರುಗುವ ಗಾಳಿಗೆ ಪ್ಲಾಸ್ಟಿಕ್ ಚೀಲಗಳು ಹಾರಿ ಬಂದಿವೆ. ಕೂಡಲೇ ಎಚ್ಚತ್ತ ಪೈಲಟ್ ಹೆಲಿಕಾಪ್ಟರನ್ನು ಟೇಕ್​ ಆಫ್​​ ಮಾಡಿದ್ದಾರೆ. ನಂತರ ಒಂದೆರಡು ಸುತ್ತು ಹೆಲಿಕಾಪ್ಟರ್​ನ್ನು ಆಕಾಶದಲ್ಲಿ ಹಾರಾಟ ನಡೆಸಿದ್ದಾರೆ. ಈ ವೇಳೆ ಪೊಲೀಸರು ಪ್ಲಾಸ್ಟಿಕ್ ಚೀಲಗಳನ್ನು ತೆರವುಗೊಳಿಸಿದ್ದಾರೆ. ಬಳಿಕ ಪೈಲಟ್ ಕಾಪ್ಟರ್ ಲ್ಯಾಂಡ್​ ಮಾಡಿದ್ದಾರೆ. ಹೆಲಿಕ್ಯಾಪ್ಟರ್ ಮೇಲೆ ಪ್ಲಾಸ್ಟಿಕ್ ಚೀಲಗಳು ತೂರಿ ಬಂದಿದ್ದರಿಂದ ಅಧಿಕಾರಿಗಳು ಮತ್ತು ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ​​

ಪಿಡಬ್ಲ್ಯುಡಿ ಇಲಾಖೆಯ ಅಧಿಕಾರಿಗಳ ಎಡವಟ್ಟಿನಿಂದ ಸಮಸ್ಯೆ ಉಂಟಾಗಿತ್ತು. ತಾತ್ಕಾಲಿಕ ಹೆಲಿಪ್ಯಾಡ್ ಎಂದ ಮೇಲೆ ಅಲ್ಲಿನ ಸ್ವಚ್ಛತೆಗೂ ಆದ್ಯತೆ ನೀಡಬೇಕಿತ್ತು. ಆನಂತರ, ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಕಾಪ್ಟರ್ ಪೈಲಟ್, ಪ್ಲಾಸ್ಟಿಕ್ ಚೀಲಗಳು ಹಾರುತ್ತಿದ್ದರೆ ಆ ಜಾಗದಲ್ಲಿ ಕಾಪ್ಟರ್ ಇಳಿಸಬಾರದು ಎಂದೇ ನಮಗೆ ಸೂಚನೆಗಳಿವೆ. ಪೈಲಟ್ ಕಲಿಯುವಾಗಲೇ ಈ ನಿಯಮ ಹೇಳುತ್ತಾರೆ. ಇಲ್ಲಿ ಪ್ಲಾಸ್ಟಿಕ್ ಚೀಲ ಹಾರಿ ಪ್ರೊಪೆಲ್ಲರ್ ಮೇಲೆ ಕುಳಿತರೆ ಅಚಾತುರ್ಯ ಆಗುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

#WATCH | Kalaburagi | A helicopter, carrying former Karnataka CM and senior leader BS Yediyurappa, faced difficulty in landing after the helipad ground filled with plastic sheets and waste around. pic.twitter.com/BJTAMT1lpr

— ANI (@ANI) March 6, 2023

A helicopter carrying former Karnataka chief minister and senior BJP leader BS Yediyurappa faced difficulty in landing due to plastic sheets and waste on the helipad ground on Monday in Kalaburagi.