ಮಾಡಾಳು ವಿರೂಪಾಕ್ಷರನ್ನು ನಾವು ಬೆಂಬಲಿಸಲ್ಲ, ಅವರನ್ನು ಬಂಧಿಸುತ್ತಾರೆ ; ಯಡಿಯೂರಪ್ಪ 

06-03-23 05:19 pm       HK News Desk   ಕರ್ನಾಟಕ

ಭ್ರಷ್ಟಾಚಾರ ಯಾರೇ ಮಾಡಿದ್ರು ಅದು ಅಕ್ಷಮ್ಯ ಅಪರಾಧ. ಮಾಡಾಳು ವಿರೂಪಾಕ್ಷ ಮಾಡಿರುವ ಕೃತ್ಯಕ್ಕೆ ನಮ್ಮದು ಯಾರ ಬೆಂಬಲವಿಲ್ಲ. ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂದು ಅಥವಾ ನಾಳೆ ಅವರ ಬಂಧನವಾಗುತ್ತದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

ಕಲಬುರಗಿ, ಮಾ.6 : ಭ್ರಷ್ಟಾಚಾರ ಯಾರೇ ಮಾಡಿದ್ರು ಅದು ಅಕ್ಷಮ್ಯ ಅಪರಾಧ. ಮಾಡಾಳು ವಿರೂಪಾಕ್ಷ ಮಾಡಿರುವ ಕೃತ್ಯಕ್ಕೆ ನಮ್ಮದು ಯಾರ ಬೆಂಬಲವಿಲ್ಲ. ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಇಂದು ಅಥವಾ ನಾಳೆ ಅವರ ಬಂಧನವಾಗುತ್ತದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಯಡಿಯೂರಪ್ಪ ಹೇಳಿಕೆ ನೀಡಿದ್ದು ಮಾಡಾಳು ವಿರೂಪಾಕ್ಷಪ್ಪ ಮತ್ತು ಪುತ್ರನ ಮೇಲೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗಿತ್ತು. ಪ್ರಕರಣ ಮುಚ್ಚಿ ಹಾಕೋ ಕೆಲಸವನ್ನು ನಮ್ಮ ಪಕ್ಷ ಮಾಡಿಲ್ಲ. ಭ್ರಷ್ಟಾಚಾರ ಮಾಡಿದವರನ್ನು ರಕ್ಷಿಸುವ ಪ್ರಶ್ನೇಯೇ ಇಲ್ಲ. ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಾರೆ ಎಂದು ಹೇಳಿದ್ದಾರೆ. 

Karnataka: With son arrested, absconding MLA embarrasses BJP ahead of  elections - The Federal

ಸುಮಲತಾ ಬಿಜೆಪಿ ಸೇರುತ್ತಾರೆಯೇ ಎಂಬ ಪ್ರಶ್ನೆಗೆ, ಅವರು ಈ ಬಗ್ಗೆ ಸ್ಪಷ್ಟ ನಿಲುವು ಹೇಳಿಲ್ಲ ಎಂದರು. ಸೋಮಣ್ಣ ಪಕ್ಷ ಬಿಡುತ್ತಾರೆಯೇ ಎಂಬ ಪ್ರಶ್ನೆಗೆ, ಆ ರೀತಿಯ ಪ್ರಶ್ನೆ ಉದ್ಭವ ಆಗಲ್ಲ. ಅವರು ಪಕ್ಷದಲ್ಲಿಯೇ ಇರುತ್ತಾರೆ ಎಂದರು. 

ನಾರಾಯಣ ಗೌಡ ಪಕ್ಷ ಬಿಡುತ್ತಾರೆಂಬ ವದಂತಿ ಬಗ್ಗೆ, ಅವರನ್ನು ಕಳೆದ ಉಪ ಚುನಾವಣೆಯಲ್ಲಿ ಕಷ್ಟಪಟ್ಟು ಗೆಲ್ಲಿಸಿದ್ದೇವೆ. ಗೆಲ್ಲೋಕೆ ಆಗದೇ ಇರೋ ಕಡೆ ಗೆಲ್ಲಿಸಿದ್ದೇವೆ. ಯಾರೆಲ್ಲಾ ಏನು ಮಾಡ್ತಾರೋ ನೋಡೋಣ ಎಂದು ಖಾರವಾಗಿ ನುಡಿದರು. 

Nothing wrong in being CM aspirant: Siddaramaiah | Deccan Herald

ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಗೆ, ಸಿದ್ದರಾಮಯ್ಯ ಮನಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಮೋದಿ ಅವರಿಗೆ ಸರಿಸಮನಾದ ನಾಯಕರಾರು ಇಲ್ಲಾ. ಯಡಿಯೂರಪ್ಪ ನವರಿಗೆ ಬಿಜೆಪಿ ನೀಡಿದ ಗೌರವ, ಸ್ಥಾನಮಾನ ಬೇರೆ ಯಾರಿಗೂ ನೀಡಿಲ್ಲಾ. ನಾನೇ ಸ್ವತಃ ಚುನಾವಣೆಗೆ ಸ್ಪರ್ಧೆ ಮಾಡಲ್ಲ ಅಂತಷ್ಟೇ ಹೇಳಿದ್ದೇನೆ ಎಂದರು.

Party does not support Madal Virupakshappa in Lokayukta case, he should be arrested says Yediyurappa. IN AN embarrassment to the BJP ahead of the Assembly elections, the Lokayukta police reportedly recovered unaccounted cash adding up to Rs 2.02 crore from the office of a party MLA and chairman of a state PSU, and Rs 6.10 crore from the residence of the MLA’s son.