ಇಂದು ಮಾಡಾಳ್ ಜಾಮೀನು ಅರ್ಜಿ ವಿಚಾರಣೆ ; ಇಬ್ಬರು ತನಿಖಾಧಿಕಾರಿಗಳ ಬದಲಾವಣೆ,  ಶಾಸಕ "ಮಿಸ್ಸಿಂಗ್  ಹುಡುಕಿಕೊಡಿ" , ಕಾಂಗ್ರೆಸ್ ನಿಂದ ಪೋಸ್ಟರ್ ಅಭಿಯಾನ 

07-03-23 11:48 am       Bangalore Correspondent   ಕರ್ನಾಟಕ

ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್​​​​​ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಜೈಲುಪಾಲಾಗಿರುವಾಗಲೇ ಇಂದು ಅವರ ಜಾಮೀನು ಭವಿಷ್ಯ ಹೈಕೋರ್ಟ್ ನಲ್ಲಿ ನಿರ್ಧಾರವಾಗಲಿದೆ.

ಬೆಂಗಳೂರು, ಮಾ.7 : ದಾವಣಗೆರೆ ಜಿಲ್ಲೆಯ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್​​​​​ ವಿರೂಪಾಕ್ಷಪ್ಪ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದು ಜೈಲುಪಾಲಾಗಿರುವಾಗಲೇ ಇಂದು ಅವರ ಜಾಮೀನು ಭವಿಷ್ಯ ಹೈಕೋರ್ಟ್ ನಲ್ಲಿ ನಿರ್ಧಾರವಾಗಲಿದೆ. ಅವರ ನಿವಾಸ ಮತ್ತು ಕಚೇರಿಯಲ್ಲಿ ಸಿಕ್ಕಿದ 8 ಕೋಟಿಗೂ ಅಧಿಕ ಲೆಕ್ಕ ಸಿಗದ ಹಣದ ಹಿನ್ನೆಲೆಯಲ್ಲಿ ಶಾಸಕ ಮತ್ತು ಅವರ ಪುತ್ರನ ವಿರುದ್ಧ ಕೇಸು ದಾಖಲಾಗಿದೆ.

ನಿರೀಕ್ಷಣಾ ಜಾಮೀನಿಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ನಾಪತ್ತೆಯಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹುಡುಕಾಟ ಮುಂದುವರಿದಿದ್ದು, ಅಜ್ಞಾತ ಸ್ಥಳದಲ್ಲಿಯೇ ಕುಳಿತು ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪುತ್ರ ಪ್ರಶಾಂತ್​​​​​ ಟ್ರ್ಯಾಪ್​​ ಕೇಸ್​ನಲ್ಲಿ ಅಪ್ಪನಿಗೆ ಅರೆಸ್ಟ್ ಸಂಕಷ್ಟ ಎದುರಾಗಿದ್ದು, ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. 

Karnataka High Court Upholds Single Judge Order Against State's Decision  Permitting Only Muslim Priest To Perform Rituals At Datta Peeta

ಇಂದು ಜಾಮೀನು ಅರ್ಜಿ ಭವಿಷ್ಯಹೈಕೋರ್ಟ್​ನಲ್ಲಿ ಎರಡು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಲಾಗುತ್ತದೆ. ನಿರೀಕ್ಷಣಾ ಜಾಮೀನು ಹಾಗು FIR ರದ್ದು ಕೋರಿ ವಿರೂಪಾಕ್ಷಪ್ಪ ಅರ್ಜಿ ಸಲ್ಲಿಸಿದ್ದಾರೆ. ಮಾಡಾಳ್ ಪುತ್ರನ ಕೇಸ್ ಲೋಕಾಯುಕ್ತಕ್ಕೆ ಪ್ರತಿಷ್ಠಿತ ಕಣವಾಗಿದೆ.

Karnataka BJP MLA steps down as KSDL chairman after Rs 6 crore seized at  home - India Today

ಪ್ರಕರಣದ A-1 ಆರೋಪಿ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಆಗಿದ್ದಾರೆ. ವಿರೂಪಾಕ್ಷಪ್ಪ ಪರ ಸುಪ್ರೀಂಕೋರ್ಟ್ ವಕೀಲ ಸಂದೀಪ್ ಪಾಟೀಲ್ ವಾದ ಮಾಡಲಿದ್ದಾರೆ. ಲೋಕಾಯುಕ್ತ ಪರ SPP ಬಿ.ಬಿ‌ ಪಾಟೀಲ್ ಪ್ರತಿವಾದ ನಡೆಸಲಿದ್ದಾರೆ. ಈಗಾಗಲೇ ವಿರೂಪಾಕ್ಷಪ್ಪಗೆ CRPC -41(A)ರಡಿ ಲೋಕಾ ನೋಟಿಸ್  ನೀಡಿದೆ. ವಿರೂಪಾಕ್ಷಪ್ಪಗೆ ಬೇಲ್​​ ನೀಡದಂತೆ ಪ್ರಬಲ ವಾದಕ್ಕೆ ಲೋಕಾ ತಯಾರಿ ನಡೆಸಿದೆ. ಮಾಡಾಳ್ ಪರ ವಕೀಲರು ತುರ್ತು ವಿಚಾರಣೆ ನಡೆಸಲು ಅರ್ಜಿ ಸಲ್ಲಿಸಿದ್ದಾರೆ.  ಮಾಡಾಳ್ ವಿರೂಪಾಕ್ಷಪ್ಪಗೆ  8.12 ಕೋಟಿ ಅಕ್ರಮ ಹಣ ಮುಳುವಾಗಲಿದೆ.

ತನಿಖಾಧಿಕಾರಿಗಳ ಬದಲಾವಣೆ:

ಮಾಡಾಳ್​​​ ಪುತ್ರ ಪ್ರಶಾಂತ್​ ಟ್ರ್ಯಾಪ್​​ ಪ್ರಕರಣದಲ್ಲಿ ತನಿಖಾಧಿಕಾರಿಗಳ ಬದಲಾವಣೆಯಾಗಿದೆ. ಟ್ರ್ಯಾಪ್​​ ತನಿಖಾಧಿಕಾರಿಗಳಿಬ್ಬರ ಬದಲಾವಣೆ ಮಾಡಲಾಗಿದೆ. ಡಿವೈಎಸ್ಪಿ ಪ್ರಮೋದ್​ ಕುಮಾರ್​​, ಇನ್ಸ್​ಪೆಕ್ಟರ್​ ಕುಮಾರಸ್ವಾಮಿ ಚೇಂಜ್​​ ಆಗಿದ್ದು, ನೂತನ ತನಿಖಾಧಿಕಾರಿಯಾಗಿ ಡಿವೈಎಸ್ಪಿ ಆಂಥೋಣಿ ಜಾನ್​​​​, ಇನ್ಸ್​ಪೆಕ್ಟರ್​​​​ ಬಾಲಾಜಿಬಾಬು ತನಿಖಾಧಿಕಾರಿಗಳಾಗಿ ನೇಮಕವಾಗಿದ್ದಾರೆ. ತನಿಖಾಧಿಕಾರಿಗಳ ಬದಲಾವಣೆ ಭಾರೀ ಕುತೂಹಲ ಕೆರಳಿಸಿದೆ.

ಪೋಸ್ಟರ್‌ ಅಂಟಿಸಿ ಕಾಂಗ್ರೆಸ್‌ ಅಭಿಯಾನ; 

ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ವಿರುದ್ಧ ಕಾಂಗ್ರೆಸ್‌ ಕಾರ್ಯಕರ್ತರು ಪೋಸ್ಟರ್‌ ಅಭಿಯಾನ ನಡೆಸಿದ್ದಾರೆ.

ಯಶವಂತಪುರ ಬಸ್ ನಿಲ್ದಾಣದ ಗೋಡೆಗಳಿಗೆ ʼಮಾಡಾಳ್‌ ವಿರೂಪಾಕ್ಷಪ್ಪ ಕಾಣೆಯಾಗಿದ್ದಾರೆʼ ಎಂಬ ಪೋಸ್ಟರ್‌ಗಳನ್ನು ಅಂಟಿಸಿ ವ್ಯಂಗ್ಯ ಮಾಡಿದ್ದಾರೆ. ಎ1 ಆರೋಪಿ ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ. ಬಿಜೆಪಿ 40% ಸರ್ಕಾರ ಎಂದು ಕುಟುಕಿದ್ದಾರೆ. ರಾಜ್ಯದ ಹಲವೆಡೆ ಕಾಂಗ್ರೆಸ್‌ ಕಾರ್ಯಕರ್ತರು ಪೋಸ್ಟರ್‌ ಅಂಟಿಸಿ ವಿರೂಪಾಕ್ಷಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಎ1 ಆರೋಪಿ ಮಿಸ್ಸಿಂಗ್. ಕಂಡಲ್ಲಿ 100 ನಂಬರ್‌ಗೆ ಕರೆ ಮಾಡಿ. ಲೋಕಾಯುಕ್ತ ತನಿಖೆಗೆ ಸಹಾಯ ಮಾಡಿ. ವಯಸ್ಸು, ಎತ್ತರ, ಸ್ಥಳ ಬಗ್ಗೆ ಪೋಸ್ಟರ್‌ನಲ್ಲಿ ನಮೂದಿಸಿ ವ್ಯಂಗ್ಯ ಮಾಡಿದೆ. ಮಾಡಾಳ್‌ ವಿರೂಪಾಕ್ಷಪ್ಪ ಮೈಸೂರು ಸ್ಯಾಂಡಲ್ ಸೋಪ್ ಹಗರಣಲ್ಲಿ ಭಾಗಿಯಾಗಿದ್ದಾರೆಂದು ಕಾಂಗ್ರೆಸ್‌ ಆರೋಪಿಸಿದೆ.

The members of the Indian Youth Congress (IYC) allegedly put the 'Missing' posters of the BJP MLA Madal Virupakshappa who has been absconding for the last 4 days, after the Lok Ayuthaya seized crores of unaccounted cash in properties of the MLA and his son. The posters were seen at many locations in Davanagere district and in the MLA's Channagiri constituency.