ಬ್ರೇಕಿಂಗ್ ನ್ಯೂಸ್
07-03-23 12:37 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.6 : ಬೇಸಿಗೆ ಇನ್ನೂ ಪ್ರಖರವಾಗುವ ಮುನ್ನವೇ ರಾಜ್ಯ ಹಾಗೂ ರಾಜ್ಯಧಾನಿಯಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಬಿಸಿಗಾಳಿಯ ಅಲೆಗಳು ಕಂಡುಬಂದಿವೆ.
ಹೀಗಾಗಿ ಆರೋಗ್ಯದ ಬಗ್ಗೆ ಎಲ್ಲರೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಸೂಚನೆ ನೀಡಿದೆ.
ಅಧಿಕ ಉಷ್ಣಾಂಶದಿಂದ ನಾನಾ ರೀತಿಯ ಅನಾರೋಗ್ಯ ಪರಿಸ್ಥಿತಿಗಳು ಸಂಭವಿಸುವ ಸಾಧ್ಯತೆ ಇದೆ. ಅದರಲ್ಲೂ ವೃದ್ಧರು, ಮಕ್ಕಳು, ದುರ್ಬಲ ಆರೋಗ್ಯವುಳ್ಳವರು ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಹಲವು ಸಲಹೆಗಳನ್ನು ನೀಡಿ ಸುತ್ತೋಲೆ ಹೊರಡಿಸಿದೆ.
ರಾಜಧಾನಿಯಲ್ಲಿ ಕಳೆದ ಎರಡು ದಿನಗಳಿಂದ ಬೇಸಿಗೆಯ ಧಗೆ ಉಲ್ಬಣಿಸಿದೆ. ಉಷ್ಣಾಂಶವು ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇಲ್ಲಿ ಮುಂದಿನ 48 ಗಂಟೆಗಳಲ್ಲಿ ಮೇಲ್ಮೈ ಬಿಸಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈ ಮುನ್ನೆಚ್ಚರಿಕೆಗಳನ್ನು ಪಾಲಿಸಿ:
ಬಾಯಾರಿಕೆ ಇಲ್ಲದಿದ್ದರೂ ಪದೇ ಪದೆ ನೀರು ಕುಡಿಯಬೇಕು. ಪ್ರಯಾಣ ಸಮಯದಲ್ಲೂ ನೀರು ತೆಗೆದುಕೊಂಡು ಹೋಗಬೇಕು.ದೇಹವು ನಿರ್ಜಲೀಕರಣಗೊಳ್ಳಲು ಬಿಡಬಾರದು.
ರಾಜ್ಯದಲ್ಲಿ ಬಿಸಿಲು ಬೇಗೆ ಹೆಚ್ಚುತ್ತಿದ್ದಂತೆ ಋುತುಮಾನದ ಕಾಯಿಲೆಗಳಾದ ಕಾಲರಾ, ವಿಷಮಶೀತ ಜ್ವರ, ಕಣ್ಣಿನ ತೊಂದರೆ, ವೈರಲ್ ಸೋಂಕು, ನಿರ್ಜಲೀಕರಣ, ಹೊಟ್ಟೆ ನೋವು, ಡೆಂಗೆ, ಚಿಕನ್ ಫಾಕ್ಸ್, ಬಿಸಿನಿಲಿಂದ ತಲೆ ಸುತ್ತು, ಮೂಗಿನಲ್ಲಿ ರಕ್ತ ಸುರಿಯುವುದು, ಅತಿಯಾದ ಸೂರ್ಯಕಿರಣಗಳಿಂದ ಚರ್ಮ ಸಮಸ್ಯೆಗಳು ಹೆಚ್ಚಾಗಿ ಜನರನ್ನು ಕಾಡುತ್ತಿವೆ. ಈ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಕ್ಲಿನಿಕಲ್ ಮತ್ತು ಎನರ್ಜಿ ಆಡಿಟಿಂಗ್ ಮಾಡಲು ರಾಜ್ಯ ತಾಂತ್ರಿಕ ಸಲಹಾ ಸಮಿತಿಯು (ಟಿಎಸಿ) ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ.
ಕರಾವಳಿಯಲ್ಲಿ ಮಳೆ ಸಾಧ್ಯತೆ:
ಕರಾವಳಿಯಲ್ಲಿ ಮಳೆ ಬರುವ ಸಾಧ್ಯತೆ ಕೂಡ ಜಾಸ್ತಿಯಾಗಿದೆ. ಈಗಾಗಲೇ ಗುಜರಾತ್‌ನಲ್ಲಿ ಮಳೆಯ ಸೂಚನೆ ನೀಡಲಾಗಿದೆ. ಭಾನುವಾರದಿಂದ ಮಹಾರಾಷ್ಟ್ರದಲ್ಲೂ ಮಳೆ ನಿರೀಕ್ಷೆಯನ್ನು ಐಎಂಡಿ ನೀಡಿದೆ. ಈ ಎರಡು ರಾಜ್ಯಗಳಲ್ಲಿ ಮಳೆಯಾದರೆ ನಂತರ ನಿಧಾನವಾಗಿ ಇದರ ಪರಿಣಾಮದಿಂದ ಕರಾವಳಿ ಭಾಗದಲ್ಲೂ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.
Rising temperature in karnataka and coastal regions, viral infections spread, safety alert by weather department.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:18 pm
Mangalore Correspondent
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
Sameer MD, Latest News: ಬುರುಡೆ ರಹಸ್ಯ ; ಬೆಳ್ತಂ...
25-08-25 10:28 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm