ಬ್ರೇಕಿಂಗ್ ನ್ಯೂಸ್
08-03-23 02:18 pm HK News Desk ಕರ್ನಾಟಕ
ಚಿಕ್ಕಮಗಳೂರು, ಮಾ.8 : ಚಾರ್ಮಾಡಿ ಘಾಟಿ ಆಸುಪಾಸಿನ ಕಾಡಿನಲ್ಲಿ ಬೆಂಕಿ ಬಿದ್ದು ಮೂರು ದಿನಗಳಿಂದ ನಿರಂತರ ಉರಿಯುತ್ತಿದೆ. ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದರೂ ನಿಯಂತ್ರಣಕ್ಕೆ ಬಂದಿಲ್ಲ. ಇದರಿಂದಾಗಿ ಬೆಂಕಿಯ ಜ್ವಾಲೆಗೆ ನೂರಾರು ಪಕ್ಷಿ, ಪ್ರಾಣಿಗಳು ಆಹುತಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್ ನಲ್ಲಿ ನಿರಂತರ ಬೆಂಕಿ ಉರಿಯತೊಡಗಿದ್ದು ಆಸುಪಾಸಿನ ನಿವಾಸಿಗಳು ಭೀತಿಗೆ ಒಳಗಾಗಿದ್ದಾರೆ. ಬೆಂಕಿಯಿಂದ ಜೀವ ಉಳಿಸಿಕೊಳ್ಳಲು ಕಾಡಿನಲ್ಲಿರುವ ಪ್ರಾಣಿಗಳು, ಘಟ ಸರ್ಪಗಳು ಹೊರಕ್ಕೆ ಬರುತ್ತಿವೆ. ಕಾಡಂಚಿನ ಗ್ರಾಮ ತರುವೆಯಲ್ಲಿ ಬೃಹತ್ ಕಾಳಿಂಗ ಸರ್ಪವೊಂದು ಹೊರಗೆ ಬಂದಿದ್ದು ಸೆರೆಯಾಗಿದೆ.
ದೈತ್ಯಾಕಾರದ ಕಾಳಿಂಗನನ್ನ ನೋಡಿ ಗ್ರಾಮಸ್ಥರು ಭೀತಿಗೆ ಒಳಗಾಗಿದ್ದಾರೆ. ಹಾವಾಡಿಗ ಆರೀಫ್ ಎಂಬವರು ಕಾಳಿಂಗನನ್ನು ಹಿಡಿದಿದ್ದು ಆತ ಸೆರೆಹಿಡಿದು ಎತ್ತಲಾಗದಷ್ಟು ದೈತ್ಯಾಕಾರವಾಗಿತ್ತು. ಬೃಹತ್ ಕಾಳಿಂಗ ಸರ್ಪವನ್ನು ಬಳಿಕ ಚಾರ್ಮಾಡಿ ಘಾಟಿಯ ಬೆಂಕಿ ಬೀಳದ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ.
ಭಾರೀ ಬಿಸಿಲಿನ ಕಾರಣದಿಂದ ನಿರಂತರ ಬೆಂಕಿ ಬೀಳುತ್ತಿದ್ದು ದೂರ ದೂರಕ್ಕೆ ಪಸರಿಸುತ್ತಿದೆ. ಕಾಡಂಚಿನಲ್ಲಿ ಇರುವ ಗ್ರಾಮಸ್ಥರು ಎಸ್ಟೇಟ್ ಮಾಫಿಯಾದ ಹುನ್ನಾರದಲ್ಲಿ ಕಾಡಿಗೆ ಬೆಂಕಿ ಹಚ್ಚುತ್ತಿದ್ದಾರೆಂಬ ಶಂಕೆಯಿದೆ. ಅರಣ್ಯ ಇಲಾಖೆಯ ಸಿಬಂದಿ ಚಾರ್ಮಾಡಿಯಲ್ಲಿ ಬೆಂಕಿ ಹಾಕಿರುವ ಒಬ್ಬನನ್ನು ಬಂಧಿಸಿದ್ದಾರೆ.
ಇದೇ ವೇಳೆ, ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಬಸವನಕೋಟೆ ಮೀಸಲು ಅರಣ್ಯಕ್ಕೆ ಬೆಂಕಿ ಹಾಕಿದ ಓರ್ವನನ್ನು ಅರಣ್ಯ ಸಿಬಂದಿ ಬಂಧಿಸಿದ್ದಾರೆ. ರಘು ಎಂಬಾತನನ್ನು ಬಂಧಿಸಿದ್ದು ಕುಮಾರ್ ಹಾಗೂ ವೆಂಕಟೇಶ್ ಪರಾರಿಯಾಗಿದ್ದಾರೆ. ಮೀಸಲು ಅರಣ್ಯ ಸೇರಿ ಅಕ್ಕಪಕ್ಕದ ತೋಟಗಳಿಗೂ ಬೆಂಕಿ ಆವರಿಸಿದ್ದರಿಂದ ನೂರಾರು ಎಕರೆ ಅರಣ್ಯ , ತೋಟ ಬೆಂಕಿಗಾಹುತಿಯಾಗಿತ್ತು.
Mangalore Charmadi Ghat fire, hundreds of animals and birds found dead, snakes captured by villagers. A forest fire is raging in the highlands of Alekan, and a huge amount of forest, animals and birds have been burnt due to the fire started by miscreants. Fire spewed out of transformer, Kichi Natana in Halenerenki Shivaru Sanctuary: Hundreds of acres of forest destroyed Forest officials rushed to the spot on getting the information and tried to put out the fire with the help of locals. Due to the high altitude, the fire fighting vehicle could not go.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 01:08 pm
Mangalore Correspondent
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
08-02-25 06:21 pm
HK News Desk
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am
Mangalore crime, blackmail Temple priest: ಅರ್...
06-02-25 09:32 pm