ಬ್ರೇಕಿಂಗ್ ನ್ಯೂಸ್
08-03-23 06:58 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.8 : ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕಾ? ಹಾಗಾದ್ರೆ ಮಾಡಾಳ್ ತಳಿಯ ಅಡಿಕೆ ಗಿಡಗಳನ್ನು ಬೆಳೆಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ ಎಂದು ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ಮತ್ತು ಅವರಿಗೆ ಜಾಮೀನು ಸಿಗುತ್ತಲೇ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದನ್ನು ಜೆಡಿಎಸ್ ವ್ಯಂಗ್ಯ ಮತ್ತು ಕಟು ಶಬ್ದಗಳಲ್ಲಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಲಂಚ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕನನ್ನು ಬಿಜೆಪಿ ಕಾರ್ಯಕರ್ತರು 'ಭಾರತ್ ಮಾತಾ ಕಿ ಜೈ' ಎಂದು ಕೂಗುತ್ತಾ ಅದ್ದೂರಿ ಮೆರವಣಿಗೆ ಮಾಡಿದ್ದಾರೆ. ಭ್ರಷ್ಟರಿಗೆ ಜೈಕಾರ ಹಾಕುವುದೇ ಬಿಜೆಪಿ ಇಂಡಿಯಾ ಹೇಳುವ ದೇಶ ಪ್ರೇಮ. ನಿಮ್ಮ ನಾಚಿಕೆಯಿಲ್ಲದ ನಡೆಯನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ ಎಂದು ಜೆಡಿಎಸ್ ಛೀಮಾರಿ ಹಾಕಿದೆ.
ನಾಪತ್ತೆಯಾಗಿದ್ದ ಶಾಸಕ ಜಾಮೀನು ಸಿಗುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಆರಗ ಜ್ಞಾನೇಂದ್ರ ಅವರೇ ನಾಪತ್ತೆಯಾಗಿದ್ದ ವೇಳೆ ಅವರು ಎಲ್ಲಿದ್ದರು ಎಂದು ನಿಮಗೆ ಗೊತ್ತಿರಲಿಲ್ಲವೇ ? ಜನರಿಗೆ ಎಷ್ಟು ಮಂಕುಬೂದಿ ಎರಚಬಲ್ಲಿರಿ? ಈ ಬಾರಿ ನಿಮ್ಮೆಲ್ಲರನ್ನೂ ಮನೆಯಲ್ಲಿ ಕೂರುವಂತೆ ಜನತೆ ಮಾಡಲಿದ್ದಾರೆ ನೆನಪಿರಲಿ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೇ ನೀವು ಪದೇ ಪದೇ ರಾಜ್ಯಕ್ಕೆ ಬರುತ್ತಿರುವುದು ಮಾಡಾಳು ವಿರೂಪಾಕ್ಷ ಅವರ ಮನೆಯಲ್ಲಿ ಸಿಕ್ಕ ಹಣಕ್ಕಾಗಿ ಎಂದು ಜನರು ಮಾತನಾಡುತ್ತಿದ್ದಾರೆ. ಈ ಬಗ್ಗೆ ಮುಂದಿನ ಬಾರಿ ಬಂದಾಗ ಸ್ಪಷ್ಟೀಕರಣ ನೀಡಿ ಎಂದು ಜೆಡಿಎಸ್ ಒತ್ತಾಯಿಸಿದೆ.
ಅಡಿಕೆ ಬೆಳೆದು ಕೋಟಿ ಕೋಟಿ ಸಂಪಾದಿಸಬೇಕಾ? ಹಾಗಾದ್ರೆ ಮಾಡಾಳ್ ತಳಿಯ ಅಡಿಕೆ ಗಿಡಗಳನ್ನು ಬೆಳಸಿ ಕೋಟ್ಯಾಂತರ ರೂಪಾಯಿ ಸಂಪಾದಿಸಿ.#ಕಮೀಷನ್_ರಾಜ್ಯವಲ್ಲ_ಕರ್ನಾಟಕ pic.twitter.com/VziwH5RQuf
— Janata Dal Secular (@JanataDal_S) March 8, 2023
Jds mocks celebration of BJP MLA Madal Virupakshappa, taunts him. The Advocates’ Association, Bengaluru, has expressed concern over quick posting of the interim anticipatory bail application of BJP MLA Madal Virupakshappa, facing charges of collecting bribes through his son Prashanth Kumar M V.
07-02-25 11:00 pm
Bangalore Correspondent
ಮುಡಾ ಹಗರಣ ; ಸಿಎಂ ಸಿದ್ದರಾಮಯ್ಯಗೆ ಹೈಕೋರ್ಟ್ ರಿಲೀಫ...
07-02-25 08:09 pm
Microfinance Karnataka, Governor, Siddaramai...
07-02-25 04:22 pm
National aerobic Championship Karnataka: ಜಮ್ಮ...
06-02-25 07:55 pm
Yadagiri Accident, Five Killed: ಯಾದಗಿರಿ; ಸಾರಿ...
05-02-25 06:39 pm
08-02-25 02:23 pm
HK News Desk
BJP Delhi, AAP, Live result, Election: 27 ವರ್...
08-02-25 12:14 pm
Mahakumbh accident, Jaipur: ಜೈಪುರದಲ್ಲಿ ಭೀಕರ ರ...
07-02-25 05:27 pm
Zamfara school fire accident: SHOCKING; ತರಗತ...
07-02-25 05:23 pm
Telangana, student suicide: ಪ್ರಾಂಶುಪಾಲರು ಬೈದರ...
06-02-25 05:37 pm
08-02-25 01:08 pm
Mangalore Correspondent
Covid 19 death, Karnataka CM Siddaramaiah: ಕೋ...
07-02-25 10:13 pm
Brijesh Chowta, DK MP, Piyush Goyal: ದ.ಕ.ದಲ್ಲ...
07-02-25 08:24 pm
Belthangady, House, Evil spirit: ಬೆಳ್ತಂಗಡಿ ;...
07-02-25 03:12 pm
Mangalore airport: ಮಂಗಳೂರು ಏರ್ಪೋರ್ಟ್ ರನ್ ವೇ ವ...
06-02-25 10:16 pm
08-02-25 06:21 pm
HK News Desk
Mangalore Mayor raid, slaughterhouse Kudroli:...
08-02-25 04:36 pm
Bidar murder crime: ಬೀದರ್ ; ಮನೆಮಂದಿ ನೋಡಿದ ಹುಡ...
08-02-25 01:00 pm
Mangalore court, Crime: ಕುಡಿದ ಮತ್ತಿನಲ್ಲಿ ಪತ್ನ...
07-02-25 11:55 am
Mangalore crime, blackmail Temple priest: ಅರ್...
06-02-25 09:32 pm