ಬ್ರೇಕಿಂಗ್ ನ್ಯೂಸ್
10-03-23 03:13 pm Bengaluru Correspondent ಕರ್ನಾಟಕ
ಬೆಂಗಳೂರು, ಮಾ.10: ವದಂತಿ, ಗೊಂದಲದ ಬಳಿಕ ಕಡೆಗೂ ಸುಮಲತಾ ಅಂಬರೀಶ್ ತನ್ನ ಮುಂದಿನ ನಡೆಯನ್ನು ಘೋಷಿಸಿದ್ದಾರೆ. ಮಂಡ್ಯದ ಅಭಿವೃದ್ಧಿಗಾಗಿ ಮೋದಿ ಅವರಿಗೆ ನನ್ನ ಬೆಂಬಲ ಎನ್ನುವ ಮೂಲಕ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ.
ತಾಂತ್ರಿಕ ಕಾರಣಗಳಿಂದಾಗಿ ಪಕ್ಷೇತರ ಗೆದ್ದಿದ್ದ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಯಾಗೋದು ಸದ್ಯಕ್ಕೆ ಅನುಮಾನ ಎಂದು ಹೇಳಲಾಗಿತ್ತು. ಅದೇ ರೀತಿಯಲ್ಲಿ ಮಹತ್ವದ ಸುದ್ದಿಗೋಷ್ಟಿ ಕರೆದು ತನ್ನ ಬೆಂಬಲ ಬಿಜೆಪಿಗೆ ಎಂದು ಘೋಷಣೆ ಮಾಡಿದ್ದಾರೆ. ಆದರೆ ಸದ್ಯಕ್ಕೆ ಬಿಜೆಪಿ ಸೇರ್ಪಡೆಯಾಗಲ್ಲ ಎಂದು ಹೇಳಿದ್ದಾರೆ. ಮಂಡ್ಯ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಮಾತನಾಡಿದ ಅಂಬಿ ಪತ್ನಿ, ತಾನು ಸ್ವಾರ್ಥಿಯಾಗಿದ್ದರೆ ಅವಕಾಶವನ್ನು ಬಳಸಿ ತನ್ನ ಲಾಭಕ್ಕಾಗಿ ಕೆಲಸ ಮಾಡಬಹುದಿತ್ತು. ಗೆದ್ದ ಆರು ತಿಂಗಳಲ್ಲಿ ಬಿಜೆಪಿಗೆ ಹೋಗಬಹುದಿತ್ತು. ಪಕ್ಷೇತರ ನೆಲೆಯಲ್ಲಿ ನನಗೆ ಮತ ನೀಡಿದ್ದಾರೆ. ನನ್ನ ಮಂಡ್ಯದ ಅಭಿವೃದ್ಧಿಯೇ ನನಗೆ ಮುಖ್ಯವಾಗಿತ್ತು. ಜಿಲ್ಲೆಯ ಅಭಿವೃದ್ಧಿಗಾಗಿ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ಘೋಷಿಸುತ್ತಿದ್ದೇನೆ ಎಂದಿದ್ದಾರೆ.

ಇದೇ ವೇಳೆ, ಪರೋಕ್ಷವಾಗಿ ಎಚ್ಡಿಕೆ, ಕುಟುಂಬ ರಾಜಕಾರಣದ ಆಕ್ರೋಶ ವ್ಯಕ್ತಪಡಿಸಿದರು. ಚುನಾವಣೆ ಸಂದರ್ಭದಲ್ಲಿ ನನ್ನ ವಿರುದ್ಧ ಕೆಲವರು ಅಪಪ್ರಚಾರ ಮಾಡಿದರು. ಆದರೆ ಜನ ನನ್ನ ಕೈಬಿಡಲಿಲ್ಲ. ಅಂಬರೀಶ್ ಪತ್ನಿಯೆಂದು ನನ್ನನ್ನು ಸ್ವೀಕಾರ ಮಾಡಿದರು. ನಾನು ರಾಜಕೀಯ ಬೇಕಾದರೆ ಬಿಡ್ತೀನಿ, ಸ್ವಾಭಿಮಾನ ಬಿಡಲ್ಲ ಎಂದು ಸುಮಲತಾ ಹೇಳಿದ್ದಾರೆ. ಮಗ ಅಭಿಷೇಕ್ ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆಯೇ ಎಂಬ ಪ್ರಶ್ನೆಗೆ, ತಾನು ರಾಜಕೀಯದಲ್ಲಿ ಇರುವವರೆಗೆ ಯಾವುದೇ ಕಾರಣಕ್ಕೂ ನನ್ನ ಮಗ ಅಭಿಷೇಕ್ ಈ ಕ್ಷೇತ್ರಕ್ಕೆ ಬರುವುದಿಲ್ಲ ಎಂದಿದ್ದಾರೆ. ಕುಟುಂಬ ರಾಜಕಾರಣ ನಾನು ಮಾಡೋದಿಲ್ಲ. ಚಾಮುಂಡಿ ತಾಯಿ ಆಣೆಯಾಗಿ ಹೇಳ್ತೀನಿ, ಮಗನಿಗೆ ಟಿಕೆಟ್ ಬೇಕೆಂದು ಕೇಳಿಲ್ಲ. ನಾನು ರಾಜಕಾರಣದಲ್ಲಿ ಇರೋ ವರೆಗೂ ಮಗನನ್ನು ರಾಜಕೀಯಕ್ಕೆ ತರೋದಿಲ್ಲ ಎನ್ನುವ ಮೂಲಕ ತನ್ನ ವಿರುದ್ಧ ಕಳೆದ ಚುನಾವಣೆಯಲ್ಲಿ ತೊಡೆ ತಟ್ಟಿದ್ದ ಜೆಡಿಎಸ್ ವಿರುದ್ಧ ಟಾಂಗ್ ನೀಡಿದರು
Actor and Member of Parliament Sumalatha Ambareesh announced that she will extend her support to the Bharatiya Janata Party (BJP) in the upcoming assembly elections. Sumalatha had called for a press meet at her residence in Mandya ahead of Prime Minister Narendra Modi’s visit to the district on March 12. Chief Minister Basavaraj Bommai had earlier said that discussions were held with Sumalatha to induct her into BJP and that the process was underway. She maintained that her decision was taken keeping the development of Mandya district in mind.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 11:13 pm
Mangaluru Staffer
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Manjunath Bhandary MLC: ಕೆಪಿಸಿಸಿ ಕಾರ್ಯಾಧ್ಯಕ್ಷ...
16-02-26 01:48 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm