ಸಿಎಂ ತವರು ಜಿಲ್ಲೆಯಲ್ಲೇ ಬಿಜೆಪಿ ಎಸ್ಟಿ ಸಮಾವೇಶದಲ್ಲಿ ಮಹಿಳೆಯ ಆಕ್ರೋಶ ; ರಾಜ್ಯಾಧ್ಯಕ್ಷರ ಭಾಷಣದ ವೇಳೆ ಸಿಲಿಂಡರ್ ದುಬಾರಿಯಾಗಿದ್ದಕ್ಕೆ ಕೂಗಾಟ 

11-03-23 07:24 pm       HK News Desk   ಕರ್ನಾಟಕ

ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಯಲ್ಲಿ ನಡೆದ ಬಿಜೆಪಿ ಎಸ್ ಟಿ ಸಮಾವೇಶದಲ್ಲಿ ಮಹಿಳೆಯೊಬ್ಬರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭಾಷಣ ಮಾಡುತ್ತಿದ್ದಾಗಲೇ ಸಿಟ್ಟಿಗೆದ್ದು ರಂಪ ಮಾಡಿದ್ದಾರೆ. ಗ್ಯಾಸ್ ಸಿಲಿಂಡರ್ ದರ ದುಬಾರಿಯಾದ್ದಕ್ಕೆ ಕೂಗಾಡಿ ಕಾರ್ಯಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಹಾವೇರಿ, ಮಾ.11 : ಮುಖ್ಯಮಂತ್ರಿ ತವರು ಜಿಲ್ಲೆ ಹಾವೇರಿಯಲ್ಲಿ ನಡೆದ ಬಿಜೆಪಿ ಎಸ್ ಟಿ ಸಮಾವೇಶದಲ್ಲಿ ಮಹಿಳೆಯೊಬ್ಬರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭಾಷಣ ಮಾಡುತ್ತಿದ್ದಾಗಲೇ ಸಿಟ್ಟಿಗೆದ್ದು ರಂಪ ಮಾಡಿದ್ದಾರೆ. ಗ್ಯಾಸ್ ಸಿಲಿಂಡರ್ ದರ ದುಬಾರಿಯಾದ್ದಕ್ಕೆ ಕೂಗಾಡಿ ಕಾರ್ಯಕರ್ತೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸಿಲಿಂಡರ್ ಗೆ ₹1300 ರೂಪಾಯಿ ರೊಕ್ಕ ಮಾಡಿರಿ, ಬಡವರು ಎಲ್ಲಿ ಹೋಗಬೇಕು. ಯಾಕೆ ₹1500 ರುಪಾಯಿ ಮಾಡಿಬಿಡ್ರಿ ಸರಿ ಆಗುತ್ತದೆ ಎಂದು ಮಹಿಳೆ ಆಕ್ರೋಶ ಹೊರಹಾಕಿದ್ದಾರೆ. ಬ್ಯಾಡಗಿಯಲ್ಲಿ ನಡೆದ ಎಸ್ಸಿ -ಎಸ್ಟಿ ಸಮಾವೇಶದಲ್ಲಿ ಬಸಮ್ಮ ಕಮ್ಥರ್ ಎಂಬ ಮಹಿಳೆ ನಾಯಕರ ವಿರುದ್ಧವೇ ಕೂಗಾಡಿದ್ದಾರೆ. 

ಸಿಲಿಂಡರ್ ಗೆ ಇಷ್ಟೊಂದು ರೆಟ್ ಮಾಡೀರಾ, ಮತ್ತೆ ಕುಕ್ಕರಲ್ಲೆ ಅಡುಗೆ ಮಾಡಿಕೊಂಡು ತಿನ್ನಿ ಅಂತಾರೆ. ನಿಮಗೆ ದುಡ್ಡಿದೆ, ನಿಮ್ಮ ಮನೆಯ ಹೆಣ್ಮಕ್ಕಳು ಹೆಂಡ್ರು ಮಾಡಿ ಹಾಕ್ತಾರೆ. ನಾವು ಬಡವರು ಎಲ್ಲಿಂದ ರೊಕ್ಕ ತರಬೇಕ್ರೀ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಳಿನ್ ಕುಮಾರ್ ಎಂದಿನಂತೆ ರಾಮ, ರಾವಣರ ಹೆಸರೇಳಿ ಭಾಷಣ ಮಾಡುತ್ತಿದ್ದರೆ, ಮಹಿಳೆ ಕಾರ್ಯಕರ್ತರ ನಡುವಿನಿಂದ ಎದ್ದು ಜೋರಾಗಿ ಮಾತನಾಡಿದ್ದು‌ ಎಲ್ಲರ ಗಮನ ಸೆಳೆದಿದೆ.

Haveri woman raises voice against raise in cylinder price middle of Nalin Kateel speech.