ಬ್ರೇಕಿಂಗ್ ನ್ಯೂಸ್
15-03-23 10:54 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.15: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಮಗ ವಿಜಯೇಂದ್ರ ವಿರುದ್ಧ ಮುನಿಸಿಕೊಂಡಿರುವ ಸೋಮಣ್ಣ ಬಿಜೆಪಿಯಲ್ಲಿ ಕೆಲವು ಸಮಯದಿಂದ ಸೈಲಂಟ್ ಆಗಿದ್ದರು. ಪಕ್ಷದಲ್ಲಿ ಸೈಲಂಟ್ ಆಗಿದ್ದೇ ತಡ ಸೋಮಣ್ಣ ಅವರನ್ನು ಕಾಂಗ್ರೆಸಿಗೆ ಕರೆತರಲು ಡಿಕೆ ಶಿವಕುಮಾರ್ ಇನ್ನಿಲ್ಲದ ಪ್ರಯತ್ನ ನಡೆಸಿದ್ದರು. ಸೋಮಣ್ಣ ಕಾಂಗ್ರೆಸ್ ಹೋಗುತ್ತಾರೆ ಎನ್ನುವುದು ತಿಳಿಯುತ್ತಲೇ ಅವರನ್ನು ದೆಹಲಿಗೆ ಕರೆಸಿಕೊಂಡು ಓಲೈಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಸೋಮಣ್ಣ ಸುದ್ದಿಗೋಷ್ಠಿ ಕರೆದು ನಾನು ನೇರವಾಗಿ ಮಾತನಾಡಿದರೆ ಕೆಲವರಿಗೆ ಸಿಹಿಯಾಗದು. ಹಾಗಂತ, ಸತ್ಯ ಯಾವಾಗಲೂ ಕಹಿಯಾಗಿಯೇ ಇರುತ್ತದೆ, ಸ್ವಾಭಿಮಾನಕ್ಕೆ ಧಕ್ಕೆಯಾದರೆ ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅದೇ ವೇಳೆ, ಬಿಜೆಪಿ ಬಿಡುವುದಿಲ್ಲ ಎಂದೂ ಹೇಳಿದ್ದರು. ಇತ್ತೀಚೆಗೆ ಚಾಮರಾಜನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ ಬಂದಿದ್ದಾಗ ಅಲ್ಲಿನ ಉಸ್ತುವಾರಿಯೂ ಆಗಿದ್ದ ವಸತಿ ಸಚಿವ ಸೋಮಣ್ಣ ಗೈರಾಗಿದ್ದು ನಾನಾ ರೀತಿಯ ಶಂಕೆ, ಚರ್ಚೆಗೆ ಕಾರಣವಾಗಿತ್ತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕಾರ್ಯಕ್ರಮಕ್ಕೇ ಬರದೆ ದೂರ ನಿಂತಿದ್ದು, ಅಲ್ಲಿಗೆ ಬಂದಿದ್ದ ವಿಜಯೇಂದ್ರ ಪರೋಕ್ಷವಾಗಿ ಸೋಮಣ್ಣ ಮತ್ತು ಅವರ ಮಗ ಅರುಣ್ ಸೋಮಣ್ಣ ವಿರುದ್ಧ ಕಿಡಿಕಾರಿದ್ದು ಇವರ ನಡುವಿನ ವೈಮನಸ್ಸಿಗೆ ತುಪ್ಪ ಸುರಿಯುವಂತೆ ಮಾಡಿತ್ತು.
ಬೆಂಗಳೂರು ಭಾಗದಲ್ಲಿ ಪ್ರಭಾವಿ ಲಿಂಗಾಯತ ನಾಯಕರಾಗಿರುವ ಸೋಮಣ್ಣ ಪಕ್ಷ ಬಿಟ್ಟು ಹೋದರೆ ದೊಡ್ಡ ನಷ್ಟವಾಗುತ್ತದೆ ಎಂದು ತಿಳಿದಿರುವ ಪಕ್ಷದ ನಾಯಕರು ಸೋಮಣ್ಣ ಅವರನ್ನು ಮನವೊಲಿಸಲು ಮುಂದಾಗಿದ್ದಾರೆ. ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮತ್ತು ಸಚಿವ ಪ್ರಹ್ಲಾದ ಜೋಷಿ ಮಾತುಕತೆ ನಡೆಸಲಿದ್ದು, ಅನಿವಾರ್ಯವಾದಲ್ಲಿ ಅಮಿತ್ ಷಾರನ್ನು ಭೇಟಿ ಮಾಡಿಸಿ ಪಕ್ಷದಲ್ಲಿ ಸ್ಥಾನಮಾನದ ಬಗ್ಗೆ ಭರವಸೆ ನೀಡುವ ಕೆಲಸ ಮಾಡಲಿದ್ದಾರೆ. ಆದರೆ 75 ವರ್ಷದ ಸೋಮಣ್ಣ ಅವರಿಗೆ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗಲ್ಲ ಎನ್ನಲಾಗುತ್ತಿದೆ. ಇವರ ಬದಲಿಗೆ ಮಗನಿಗೆ ಟಿಕೆಟ್ ಕೊಡಿಸಲು ಸೋಮಣ್ಣ ಕಸರತ್ತು ಮಾಡುತ್ತಿದ್ದಾರೆ. ಆದರೆ ಕೇಂದ್ರ ನಾಯಕರಿಂದ ಇದಕ್ಕೆ ಒಪ್ಪಿಗೆ ಸಿಗದೇ ಇರುವುದು ಸೋಮಣ್ಣ ಮುನಿಸಿಗೆ ಕಾರಣ.
ಈ ಹಿಂದೆ ಯಡಿಯೂರಪ್ಪ ಮತ್ತು ಸೋಮಣ್ಣ ಜೊತೆಯಾಗಿಯೇ ಇದ್ದವರು. ಆದರೆ, 2013ರಲ್ಲಿ ಯಡಿಯೂರಪ್ಪ ಕೆಜೆಪಿ ಕಟ್ಟಿ ಪ್ರತ್ಯೇಕ ಹೋಗಿದ್ದ ಸಂದರ್ಭದಲ್ಲಿ ಲಿಂಗಾಯತ ಶಾಸಕರನ್ನು ಬಿಜೆಪಿಯಲ್ಲೇ ಉಳಿಸಿಕೊಂಡಿದ್ದು ಸೋಮಣ್ಣ. ಇದೇ ವಿಚಾರದಲ್ಲಿ ಸೋಮಣ್ಣ ಬಗ್ಗೆ ಯಡಿಯೂರಪ್ಪ ಮುನಿಸು ಹೊಂದಿದ್ದಾರೆ. ಬೆಂಗಳೂರು ಭಾಗದ ಲಿಂಗಾಯತರನ್ನು ಸೋಮಣ್ಣ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದಾರೆ ಎಂದು ಒಳಗಿನ ವೈಮನಸ್ಸು. ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿದ್ದ ಸೋಮಣ್ಣ ಬಳಿ ವಿಜಯೇಂದ್ರ ಬಗ್ಗೆ ಪ್ರಶ್ನೆ ಮಾಡಿದಾಗ, ಸಿಡುಕಿನ ಉತ್ತರವನ್ನೇ ನೀಡಿದ್ದರು. ವಿಜಯೇಂದ್ರನ ವಯಸ್ಸೇನು, ಆತನನ್ನು ನನ್ನ ಜೊತೆ ಹೋಲಿಕೆ ಮಾಡುವುದು ಹೇಗೆ. ಆತನ ವಯಸ್ಸಿನ ಅನೇಕರು ನಮ್ಮ ಪಕ್ಷದಲ್ಲಿದ್ದಾರೆ. ಆತ ಯಡಿಯೂರಪ್ಪ ಅವರ ಪುತ್ರ ಅಷ್ಟೇ,. ಯಡಿಯೂರಪ್ಪ ನನ್ನ ಜೊತೆ ಮಾತುಕತೆ ಮಾಡಿಲ್ಲ. ಅವರು ಕರೆದರೆ ನಾನು ಮಾತುಕತೆಗೆ ಹೋಗಲು ರೆಡಿಯಿದ್ದೇನೆ. ನಾನು ಯಡಿಯೂರಪ್ಪ ಅವರ ಜೊತೆ ಸಿಟ್ಟು ಇಟ್ಟುಕೊಂಡಿಲ್ಲ ಎಂದಿದ್ದರು.
ಮಾಹಿತಿ ಪ್ರಕಾರ, ಸೋಮಣ್ಣ ಅವರನ್ನು ಸೆಳೆದುಕೊಳ್ಳಲು ಕಾಂಗ್ರೆಸ್ ಎಲ್ಲ ಕಸರತ್ತನ್ನೂ ಮಾಡಿದೆ. ಯಾವುದೇ ಶರತ್ತು ನೀಡಿದರೂ ಒಪ್ಪಲು ರೆಡಿ ಇರೋದಾಗಿ ಕಾಂಗ್ರೆಸ್ ನಾಯಕರು ಹೇಳಿದ್ದಾರಂತೆ. ಸೋಮಣ್ಣ ಸ್ಪರ್ಧಿಸುವುದಿದ್ದರೂ, ಮಗ ಸ್ಪರ್ಧೆ ಮಾಡೋದಿದ್ದರೂ ಟಿಕೆಟ್ ನೀಡಲು ಕಾಂಗ್ರೆಸ್ ರೆಡಿ ಇದೆ. ಜೊತೆಗೆ, ಸೋಮಣ್ಣ ಬಳಸಿಕೊಂಡು ಬೆಂಗಳೂರಿನ ಹತ್ತು ಕ್ಷೇತ್ರಗಳಲ್ಲಿ ಲಿಂಗಾಯತರ ಮತಗಳನ್ನು ಸೆಳೆಯಲು ಪ್ಲಾನ್ ಹಾಕಿದೆ. ಈ ಬಗ್ಗೆ ಯಡಿಯೂರಪ್ಪ ಅವರಲ್ಲಿ ಪತ್ರಕರ್ತರು ಕೇಳಿದಾಗ, ಸೋಮಣ್ಣ ನಮ್ಮ ಪಕ್ಷದಲ್ಲೇ ಇರುತ್ತಾರೆ, ಎಲ್ಲಿಗೂ ಹೋಗಲ್ಲ. ಅವರ ಜೊತೆ ಮಾತುಕತೆ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ ಯಡಿಯೂರಪ್ಪ ಮಾತುಕತೆ ಅಂತೂ ಮಾಡಿಲ್ಲ ಎನ್ನೋದು ಪಕ್ಷದ ಒಳಗಿನ ಮಾತು.
ಯಡಿಯೂರಪ್ಪ ಜೊತೆಗೆ ವೈಮನಸ್ಸು ಹೊಂದಿದ್ದ ಕಾರಣಕ್ಕಾಗಿಯೇ ವಿರೋಧಿ ಬಣದ ಬಿಎಲ್ ಸಂತೋಷ್, ಸೋಮಣ್ಣ ಅವರನ್ನು ತನ್ನ ಹತ್ತಿರ ಸೆಳೆದುಕೊಂಡಿದ್ದರು. ವಸತಿ ಸಚಿವ ಸ್ಥಾನ ಕೊಡಿಸಿದ್ದು, ಪಕ್ಷದಲ್ಲಿ ಯಡಿಯೂರಪ್ಪ ವಿರೋಧಿ ಪಾಳಯ ಬೆಳೆಸಲು ಕೆಲಸ ಮಾಡಿದ್ದರು. ಆದರೆ ಚುನಾವಣೆ ವೇಳೆಗೆ ಸೋಮಣ್ಣ ಅವರನ್ನು ಸಂತೋಷ್ ಕೈಬಿಟ್ಟಿದ್ದು ಅವರ ಸಿಟ್ಟಿಗೆ ಕಾರಣ. ಅಲ್ಲಿಯೂ ಇಲ್ಲ, ಇಲ್ಲಿಯೂ ಇಲ್ಲ ಅನ್ನುವ ನೋವಿನಲ್ಲಿರುವ ಸೋಮಣ್ಣ ಮಗನ ಭವಿಷ್ಯ ರೂಪಿಸುವುದಕ್ಕಾಗಿ ಸೂಕ್ತ ನಿರ್ಧಾರಕ್ಕೆ ಎದುರು ನೋಡುತ್ತಿದ್ದಾರೆ. ಬಿಜೆಪಿಯಲ್ಲಿ ಸ್ಥಾನಮಾನ ಸಿಗದೇ ಇದ್ದರೆ, ಕಾಂಗ್ರೆಸಿನತ್ತ ಹೋಗುವುದು ಖಚಿತ ಎನ್ನಲಾಗುತ್ತಿದೆ.
The differences between BJP veteran leader B.S. Yediyurappa and party senior leader V. Somanna came out in the open on Tuesday, after a video in which the latter’s son Arun Somanna is seen taking potshots at the former’s son B.Y. Vijayendra went viral. In the video, Mr. Arun is heard saying without taking the name of Mr. Vijayendra: “There is a veteran leader who sacrificed his seat for his son. He (son) is touring as though he is the next leader for the entire Karnataka.” He also accuses Mr. Vijayendra of speaking disrespectfully.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm