ಬ್ರೇಕಿಂಗ್ ನ್ಯೂಸ್
16-03-23 03:30 pm Bangalore Correspondent ಕರ್ನಾಟಕ
ಬೆಂಗಳೂರು, ಮಾ.16 : ವಿಶ್ವಾದ್ಯಂತ ಮನೆಮಾತಾದ ಕನ್ನಡ ಚಲನಚಿತ್ರ ಕಾಂತಾರ ವಿಶ್ವಸಂಸ್ಥೆಯ ಜಿನೀವಾದಲ್ಲಿ ಮಾರ್ಚ್ 17ರಂದು ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ಅದೇ ದಿನ ರಿಷಬ್ ಶೆಟ್ಟಿ ಭಾರತೀಯ ಸಿನಿಮಾಗಳ ಕುರಿತು ಕನ್ನಡದಲ್ಲಿ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ.
ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿದ ಸಂಭ್ರಮದ ನಡುವಲ್ಲೇ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಕಡಲಾಚೆಯಲ್ಲಿ ಸುದ್ದಿ ಮಾಡುತ್ತಿದೆ. ವಿಶ್ವಾದ್ಯಂತ ಬಹು ಭಾಷೆಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಕನ್ನಡ ಚಲನಚಿತ್ರ ಕಾಂತಾರ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮಾರ್ಚ್ 17 ರಂದು ಪ್ರದರ್ಶನಗೊಳ್ಳಲಿದೆ. ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಈಗಾಗಲೇ ಜಿನೀವಾ ತಲುಪಿದ್ದಾರೆ. ಸೆಂಟರ್ ಫಾರ್ ಗ್ಲೋಬಲ್ ಅಫೇರ್ಸ್ ಮತ್ತು ಪಬ್ಲಿಕ್ ಪೋಲೀಸ್ನ ಸಾಮಾಜಿಕ ಮಾಧ್ಯಮ ನೆಲೆಯಲ್ಲಿ ಯುಎನ್ಎಚ್ಆರ್ ಸಿ ಅಧಿವೇಶನದಲ್ಲಿ ಪರಿಸರ, ಹವಾಮಾನ ಮತ್ತು ಸಂರಕ್ಷಣೆಯಲ್ಲಿ ಭಾರತೀಯ ಸಿನಿಮಾದ ಪಾತ್ರದ ಬಗ್ಗೆ ಮಾತನಾಡಲಿದ್ದಾರೆ ಎಂದು ಸಿಜಿಎಪಿಪಿ ನಿರ್ದೇಶಕಿ ಅನಿಂಧ್ಯಾ ಸೇನ್ ಗುಪ್ತಾ ತಿಳಿಸಿದ್ದಾರೆ.

ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ವಿಶ್ವದ ಹಲವು ದೇಶದ ಪ್ರತಿನಿಧಿಗಳು ಭಾಗಿ ಆಗುತ್ತಿದ್ದಾರೆ. ಸಿನಿಮಾದ ಮೂಲಕ ಪರಿಸರ ಮತ್ತು ಅರಣ್ಯದಂಚಿನ ಜನರ ಸಮಸ್ಯೆಗಳನ್ನು ರಿಷಬ್ ತೋರಿಸಿದ್ದಾರೆ. ಅದೇ ವಿಷಯವನ್ನ ರಿಷಬ್ ವಿಶ್ವಸಂಸ್ಥೆಯಲ್ಲೂ ಮಾತನಾಡಲಿದ್ದಾರೆ ಎಂದು ತಿಳಿದುಬಂದಿದೆ.
ಸ್ಕ್ರೀನಿಂಗ್ ನಂತರ, ರಿಷಬ್ ಕನ್ನಡದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಮತ್ತು ನಂತರ ಯುಎನ್ ಗಣ್ಯರೊಂದಿಗೆ ಖಾಸಗಿ ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ. ಸಾಮಾನ್ಯವಾಗಿ ಈ ಸಭೆಯಲ್ಲಿ ಹೆಚ್ಚು ಇಂಗ್ಲಿಷ್ ಭಾಷೆಯನ್ನು ಬಳಸುವುದು ವಾಡಿಕೆ. ಆದರೆ, ರಿಷಬ್ ಈ ಸಭೆಯಲ್ಲಿ ಕನ್ನಡದಲ್ಲೇ ಭಾಷಣ ಮಾಡಲಿದ್ದಾರೆ. ಈ ಮೂಲಕ ಕನ್ನಡದಲ್ಲಿ ಭಾಷಣ ಮಾಡಿದ ಮೊದಲ ಕನ್ನಡಿಗ ಎಂಬ ಕೀರ್ತಿಗೂ ಪಾತ್ರರಾಗಲಿದ್ದಾರೆ.
ಸಭೆಯಲ್ಲಿ ಸದ್ಯ ಜಗತ್ತು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳ ಕುರಿತು ಚರ್ಚೆಗಳು ನಡೆಯುತ್ತಿದ್ದು, ರಿಷಬ್ ಯಾವೆಲ್ಲ ವಿಚಾರಗಳ ಕುರಿತು ಬೆಳಕು ಚೆಲ್ಲುತ್ತಾರೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
It is, indeed, a golden era for South cinema. First, Telugu film RRR grabbed the Oscars and made its mark forever on the global map and now, Kannada film Kantara will be screened at the United Nations, Geneva, Switzerland on March 17th, which also happens to be actor Puneeth Rajkumar’s birth anniversary.
09-07-26 02:56 pm
HK News Staffer
ಸಚಿವ ಸಂಪುಟ ವಿಸ್ತರಣೆಯಾದರೆ ಸರ್ಕಾರ ಸ್ವಲ್ಪಮಟ್ಟಿಗೆ...
09-07-26 02:56 pm
ಬೆಳಗಾವಿಯಲ್ಲಿ ಆರೆಸ್ಸೆಸ್ ಪ್ರತಿನಿಧಿ ಸಭೆ ; ಖಾಸಗಿ...
08-07-26 02:06 pm
ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪ...
08-07-26 01:13 pm
ಮೈಸೂರಿನಲ್ಲಿ ಹುಲಿ ದಾಳಿ ; ಒಂದೂವರೆ ಗಂಟೆ ಮರ ಏರಿ...
07-07-26 09:02 pm
09-07-26 03:40 pm
HK News Staffer
18 ವರ್ಷಗಳ ಬಳಿಕ ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರ...
07-07-26 03:22 pm
ವಯನಾಡಿನಲ್ಲಿ ಮತ್ತೆ ಭೀಕರ ಭೂಕುಸಿತ ; ಭಾರೀ ಮಳೆಗೆ ಸ...
07-07-26 01:51 pm
ಮುಂಬೈನಲ್ಲಿ ಮರಣ ಮಳೆಗೆ 13 ಮಂದಿ ಬಲಿ; ಕುಸಿದ ರಸ್ತ...
06-07-26 01:14 pm
ಅಟ್ಲಾಂಟಿಕ್ ಸಾಗರದಲ್ಲಿ 80 ವರ್ಷಗಳ ಹಿಂದೆ ಮುಳುಗಿದ್...
05-07-26 08:39 pm
09-07-26 11:09 pm
HK News Desk
ಮೋದಿಯನ್ನ ಪ್ರಶ್ನಿಸುವ ಕೈ ಮುಖಂಡ ಅಭಿಷೇಕ್ ಮೂಡಾ ಭ್ರ...
09-07-26 10:47 pm
ಕೆಪಿಟಿ ಜಂಕ್ಷನ್ ಬಳಿಯಲ್ಲಿ ಡಿವೈಡರ್ ಡಿಕ್ಕಿಯಾಗಿ ಬೈ...
08-07-26 11:04 pm
ಸಚಿವರಿಲ್ಲದ ಶಿಕ್ಷಣ ಇಲಾಖೆ ಬಣ ಬಣ ; ಪಿಯು ಕಾಲೇಜಿಗೆ...
08-07-26 08:38 pm
ಕನ್ನಡದ ಸುದ್ದಿ ವಾಹಿನಿಗಳು ಮಲಯಾಳ ಮಾಧ್ಯಮ ನೋಡಿ ಕಲಿ...
08-07-26 06:53 pm
09-07-26 09:11 pm
HK News Staffer
ಹೆಂಗಸರ ವಿಷ್ಯ ಬೇಡವೋ ಶಿಷ್ಯಾ..! ಚಾಡಿ ಹೇಳಿ ಸಾವಿಗೆ...
09-07-26 07:52 pm
ಬೆಳಗಾವಿ ಸಂತೆಯಲ್ಲಿ ಎತ್ತು ಖರೀದಿಸಿ ಕೇರಳಕ್ಕೆ ಸಾಗಿ...
09-07-26 07:49 pm
ಬೆಂಗಳೂರಿನ ಎಂಎನ್ ಸಿ ಕಂಪನಿಯಲ್ಲಿ ಉದ್ಯೋಗ ನೆಪ ಹೇಳಿ...
09-07-26 05:34 pm
ಯಲ್ಲಾಪುರ ಅರಬೈಲ್ ಘಾಟ್ನಲ್ಲಿ ಲಾರಿ-ಕ್ರೂಸರ್ ಮುಖಾಮ...
09-07-26 11:38 am