ಮೂಡಿಗೆರೆಯಲ್ಲಿ ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ ; ಯಡಿಯೂರಪ್ಪ, ಸಿಟಿ ರವಿ ಕಾರಿಗೆ ತಡೆ, ಶಾಸಕ ಕುಮಾರಸ್ವಾಮಿ ವಿರುದ್ಧ ಆಕ್ರೋಶ, ಅರ್ಧದಲ್ಲೇ ಹೊರನಡೆದ ಬಿಎಸ್ವೈ 

16-03-23 10:23 pm       HK News Desk   ಕರ್ನಾಟಕ

ಮೂಡಿಗೆರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಬದಲಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಹೆದ್ದಾರಿಯಲ್ಲಿ ಯಡಿಯೂರಪ್ಪ ಮತ್ತು ಸಿಟಿ ರವಿ ಅವರಿದ್ದ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ. 

ಚಿಕ್ಕಮಗಳೂರು, ಮಾ.16 : ಮೂಡಿಗೆರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಬದಲಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಹೆದ್ದಾರಿಯಲ್ಲಿ ಯಡಿಯೂರಪ್ಪ ಮತ್ತು ಸಿಟಿ ರವಿ ಅವರಿದ್ದ ಕಾರನ್ನು ಅಡ್ಡಗಟ್ಟಿ ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ. 

ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ನೂರಾರು ಕಾರ್ಯಕರ್ತರು ಚಿಕ್ಕಮಗಳೂರು - ಮೂಡಿಗೆರೆ ಹೆದ್ದಾರಿಯ ನಡು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ‌ಕುಮಾರಸ್ವಾಮಿ ಬೇಡವೇ ಬೇಡ ಅಂತ ಕೂಗಾಟ ನಡೆಸಿದ್ದು ಬಿ.ಎಸ್.ವೈ. ಬರುವ ಮಾರ್ಗದಲ್ಲಿ ರಸ್ತೆ ತಡೆದು ಭಾರೀ ಪ್ರತಿಭಟನೆ ನಡೆಸಿದ್ದಾರೆ. 1000ಕ್ಕೂ ಅಧಿಕ ಜನರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದ್ದು ಬಿಜೆಪಿ ಸ್ಥಳೀಯ ಮುಖಂಡರು, ಕಾರ್ಯಕರ್ತರೇ ಸೇರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 ಈ ವೇಳೆ, ಶಾಸಕ ಕುಮಾರಸ್ವಾಮಿ ಅವರನ್ನ ಪೊಲೀಸರು ಬೇರೆ ಕಡೆ ಕರೆದೊಯ್ದು ಬಚಾವ್ ಮಾಡಿದ್ದಾರೆ.  ಬಿಜೆಪಿ ಕಾರ್ಯಕರ್ತರ ಆಕ್ರೋಶ ಹಿನ್ನೆಲೆಯಿಂದ ಬಿಎಸ್ವೈ ರೋಡ್ ಶೋ ಕ್ಯಾನ್ಸಲ್ ಮಾಡಿ ಬಂದ ದಾರಿಯಲ್ಲೇ ಹಿಂತಿರುಗಿದ್ದಾರೆ. 

ಯಡಿಯೂರಪ್ಪ ಮತ್ತು ಸಿಟಿ ರವಿ ಅವರನ್ನ ರಸ್ತೆ ಮಧ್ಯೆಯೇ ಅಡ್ಡ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಇದರಿಂದ ನಾಯಕರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಅಲ್ಲದೆ ಸಿಟ್ಟುಗೊಂಡು, ರೋಡ್ ಶೋ ಕ್ಯಾನ್ಸಲ್ ಮಾಡಿ ಯಡಿಯೂರಪ್ಪ ನೇರವಾಗಿ ಹೆಲಿಪ್ಯಾಡ್ ಗೆ ತೆರಳಿದ್ದಾರೆ. 

ಇದರಿಂದ ಗರಂ ಆದ ಸಿಟಿ ರವಿ, ಪಕ್ಷದ ಮರ್ಯಾದೆ ಕಳೆಯುತ್ತಿದ್ದೀರಾ ಎಂದು ಕಾರ್ಯಕರ್ತರ ಬಗ್ಗೆ ಸಿಟ್ಟಾಗಿದ್ದಾರೆ. ಆಕ್ರೋಶ ಇದ್ದರೆ, ನೀವು ಮೊದಲೇ ಮಾತನಾಡಿಕೊಳ್ಳಬೇಕಿತ್ತು. ಕಾರ್ಯಕ್ರಮ ಏರ್ಪಡಿಸಿ ಇಷ್ಟೆಲ್ಲ ಹೈಡ್ರಾಮಾ ಮಾಡಬೇಕಿತ್ತೇ ಎಂದು ಸ್ಥಳೀಯ ಮುಖಂಡರನ್ನು ತರಾಟೆಗೆತ್ತಿಕೊಂಡಿದ್ದಾರೆ.

Rift within the BJP in Karnataka were laid bare to the public today as former Karnataka Chief Minister BS Yediyurappa was forced to cancel the party's pre-election march in Chikkamagaluru district, after being gheraoed by party workers apparently supporting party national general secretary CT Ravi.