ಅರಕಲಗೂಡು ; ಹಾಸನ- ಮಡಿಕೇರಿ ಹೆದ್ದಾರಿಯಲ್ಲಿ ಸುಂಟರಗಾಳಿಗೆ ಹೆದರಿ ಓಡಿದ ಜನರು, ತರಗೆಲೆಗಳಂತೆ ಹಾರಿದ ಗೂಡಂಗಡಿ ವಸ್ತುಗಳು ! 

18-03-23 09:14 pm       HK News Desk   ಕರ್ನಾಟಕ

ದಿಢೀರ್ ಎದ್ದ ಸುಂಟರಗಾಳಿಯಿಂದ ರಸ್ತೆ ಬದಿಯ ಜನರು ಹೆದರಿ ಓಡಿದ್ದಲ್ಲದೆ, ಸಣ್ಣ ಪುಟ್ಟ ಗೂಡಂಗಡಿಗಳಲ್ಲಿದ್ದ ವಸ್ತುಗಳು ತರಗೆಲೆಗಳಂತೆ ಹಾರಿ ಹೋದ ಘಟನೆ ಹಾಸನ ಜಿಲ್ಲೆಯ ಅರಕಲಗೂಡಿನ ಕೊಣನೂರು ಗ್ರಾಮದಲ್ಲಿ ನಡೆದಿದೆ. 

ಹಾಸನ, ಮಾ.18 : ದಿಢೀರ್ ಎದ್ದ ಸುಂಟರಗಾಳಿಯಿಂದ ರಸ್ತೆ ಬದಿಯ ಜನರು ಹೆದರಿ ಓಡಿದ್ದಲ್ಲದೆ, ಸಣ್ಣ ಪುಟ್ಟ ಗೂಡಂಗಡಿಗಳಲ್ಲಿದ್ದ ವಸ್ತುಗಳು ತರಗೆಲೆಗಳಂತೆ ಹಾರಿ ಹೋದ ಘಟನೆ ಹಾಸನ ಜಿಲ್ಲೆಯ ಅರಕಲಗೂಡಿನ ಕೊಣನೂರು ಗ್ರಾಮದಲ್ಲಿ ನಡೆದಿದೆ. 

ಕೊಣನೂರು ಗ್ರಾಮದ ಹಾಸನ -ಮಡಿಕೇರಿ ರಸ್ತೆಯಲ್ಲಿ ಘಟನೆ ನಡೆದಿದ್ದು ಶನಿವಾರ ಸಂಜೆ ವೇಳೆಗೆ ಉಂಟಾದ ಸುಂಟರಗಾಳಿಗೆ ಜನರು  ದಿಕ್ಕಾಪಾಲಾಗಿ ಓಡಿದ್ದಾರೆ. ರಸ್ತೆ ಬದಿಯ ಗೂಡಂಗಡಿ, ಕ್ಯಾಂಟೀನ್, ಸಣ್ಣ ಪುಟ್ಟ ಅಂಗಡಿಗಳ ತಗಡು ಶೀಟ್ ಹಾರಿ ಹೋಗಿವೆ‌, ಅಂಗಡಿಗೆ ಹಾಕಿದ್ದ ಟಾರ್ಪಾಲ್ ಹೊದಿಕೆಗಳು ಹಾರಿ ಹೋಗಿ ವಿದ್ಯುತ್ ತಂತಿಗೆ ಸಿಲುಕಿವೆ. 

ಗ್ರಾಮದಲ್ಲಿ ಹಲವು ಅಂಗಡಿಗಳಿಗೆ ಹಾನಿಯಾಗಿದ್ದು ರಸ್ತೆ ಬದಿಯ ಕೆಲವು ಅಂಗಡಿಗಳ ಮುಂದೆ ಇಟ್ಟಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಧೂಳು ಮಿಶ್ರಿತ ಗಾಳಿ ರಸ್ತೆಯಲ್ಲಿ ಹೆದ್ದೆರೆಯಂತೆ ಎದ್ದು ಬಂದಿದ್ದು ಜನರು ಓಡಿ ಅವಿತುಕೊಂಡಿದ್ದಾರೆ. ಹಾರಿ ಹೋಗುತ್ತಿದ್ದ ಗೂಡಂಗಡಿಗಳ ಶೀಟ್‌ಗಳನ್ನು ಹಿಡಿದಿಡಲು ಜನರು ಹರಸಾಹಸ ಪಟ್ಟಿದ್ದಾರೆ.

Whrilwind in Hassan Madikeri highway, video goes viral. This is said to have happened at Konnanuru village in Hassan.