ಬ್ರೇಕಿಂಗ್ ನ್ಯೂಸ್
20-03-23 06:23 pm HK News Desk ಕರ್ನಾಟಕ
ಮಂಡ್ಯ, ಮಾ.20 : ಟಿಪ್ಪುವನ್ನು ಕೊಂದಿದ್ದಾರೆಂದು ವಾದಿಸಿ ಉರಿಗೌಡ, ನಂಜೇಗೌಡರ ಬಗ್ಗೆ ಸಿನಿಮಾ ಮಾಡಲು ಹೊರಟಿರುವ ಬಿಜೆಪಿ ನಾಯಕರಿಗೆ ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಉರಿಗೌಡ ನಂಜೇಗೌಡ ವಿಚಾರ ಅಪ್ರಸ್ತುತ. ಸರಿಯಾದ ಸಂಶೋಧನೆ ಆಗದೆ ಇತಿಹಾಸದ ಬಗ್ಗೆ ಚರ್ಚಿಸೋದು ಸೂಕ್ತವಲ್ಲ ಎಂದು ಸ್ವಾಮೀಜಿ ಹೇಳಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಸ್ವಾಮೀಜಿ, ನೈಜ ಇತಿಹಾಸವನ್ನ ಅರಿತವನು ಮಾತ್ರ ಮತ್ತೊಂದು ಇತಿಹಾಸ ಸೃಷ್ಟಿಸಲು ಸಾಧ್ಯ. ಇತಿಹಾಸವನ್ನ ಅರಿತವರು ಎಂದರೆ ಆಯಾ ಕಾಲಘಟ್ಟದಲ್ಲಿ ಇದ್ದಂತಹ ವ್ಯಕ್ತಿಗಳು, ಆಗ ಬರೆದಿಟ್ಟ ಶಿಲಾ ಶಾಸನಗಳು, ತಾಳೆಗರಿಗಳು, ಅಂದಿನ ಸಮಕಾಲೀನ ವ್ಯಕ್ತಿಗಳು ಬರೆದ ಮಾಹಿತಿಗಳು ಸಿಗಬೇಕು. ನಂತರ ಬರೆದ ಇತಿಹಾಸ ಸಾಕಷ್ಟು ಗೊಂದಲಕ್ಕೆ ಎಡೆಮಾಡಿಕೊಡುತ್ತದೆ. ಅದರ ಬಗ್ಗೆ ಗೊಂದಲ ಸೃಷ್ಟಿಸುವ ಬದಲು ಸಮುದಾಯಕ್ಕೆ, ರಾಜ್ಯಕ್ಕೆ ಮಾಡಬೇಕಾದ ಕೆಲಸಗಳು ಸಾಕಷ್ಟಿದೆ. ಈ ವಿಚಾರವನ್ನು ಇಟ್ಟುಕೊಂಡು ಸಮಾಜದಲ್ಲಿ ಗೊಂದಲ ಸೃಷ್ಟಿ ಮಾಡೋದು ಸರಿಯಲ್ಲ ಎಂದಿದ್ದಾರೆ.
ಸಿಟಿ ರವಿ, ಗೋಪಾಲಯ್ಯ, ಅಶ್ವಥ್ ನಾರಾಯಣ್ ಇನ್ನಿತರರು ಈ ವಿಚಾರದ ಬಗ್ಗೆ ತಿಳಿದು ಮಾತನಾಡಬೇಕು. ಈ ಬಗ್ಗೆ ಇನ್ಮುಂದೆ ಮಾತನಾಡದೆ ಸುಮ್ಮನಾಗಬೇಕು, ಸುಮ್ಮನಿರ್ತಾರೆ ಅನ್ನೋದು ನಮ್ಮ ಭಾವನೆ ಎಂದು ನೇರ ಟಾಂಗ್ ನೀಡಿದ್ದಾರೆ. ಕಲ್ಪನೆ ಮಾಡಿಕೊಂಡು ಬರೆಯುವುದು ಕಾದಂಬರಿ. ಶಾಸನಗಳು, ಹಿಂದಿನ ಇತಿಹಾಸದಲ್ಲಿ ಬಂದಿರುವಂತದ್ದು ಮುಂದಿನ ಪೀಳಿಗೆಗೆ ಶಕ್ತಿಯಾಗುತ್ತದೆ. ಯುವ ಶಕ್ತಿಯನ್ನು ಹಾಳು ಮಾಡುವಂತದ್ದು, ಸಮುದಾಯಕ್ಕೆ ಧಕ್ಕೆ ತರುವಂತ ಕೆಲಸ ಆಗಬಾರದು. ಉರಿಗೌಡ ನಂಜೇಗೌಡ ವಿಚಾರದಲ್ಲಿ ಶಾಸನಗಳು, ತಾಳೆಗರಿಗಳು ಸಿಕ್ಕಿದರೆ ಅದನ್ನ ಮಠಕ್ಕೆ ತಂದು ಕೊಡಲಿ. ಅದನ್ನ ಕ್ರೋಡೀಕರಿಸಿ ಶಾಸನ ತಜ್ಞರು, ಕಾರ್ಬನ್ ಡೇಟಿಂಗ್ ತಜ್ಞರು ಅದನ್ನ ಪರಿಶೀಲಿಸಿ ತೀರ್ಮಾನಕ್ಕೆ ಬರುತ್ತಾರೆ. ವಿನಾಕಾರಣ ಗೊಂದಲ ಎಬ್ಬಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಸಚಿವ ಅಶ್ವತ್ಥ ನಾರಾಯಣ ಮತ್ತು ಸಿಟಿ ರವಿ ಅವರು ಉರಿಗೌಡ, ನಂಜೇಗೌಡರ ಬಗ್ಗೆ ಮಾತುಗಳನ್ನಾಡಿ, ಇವರೇ ಟಿಪ್ಪುವನ್ನು ಕೊಂದಿದ್ದ ಒಕ್ಕಲಿಗ ಸಮುದಾಯದ ವೀರರು ಎಂದು ಹಾಡಿ ಹೊಗಳಿದ್ದರು. ಅಲ್ಲದೆ ಇತ್ತೀಚೆಗೆ ಮಂಡ್ಯಕ್ಕೆ ಮೋದಿ ಬಂದಿದ್ದಾಗ ಉರಿಗೌಡ- ನಂಜೇಗೌಡ ಹೆಸರಲ್ಲಿ ದ್ವಾರ ನಿರ್ಮಿಸಿ ಒಕ್ಕಲಿಗರಲ್ಲೇ ಗೊಂದಲ ಸೃಷ್ಟಿಸಿದ್ದರು. ಬಿಜೆಪಿ ನಾಯಕರ ಈ ನಡೆಗೆ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ತೀವ್ರ ಟೀಕಿಸಿದ್ದಲ್ಲದೆ, ಇತಿಹಾಸವನ್ನು ನೀವು ಬರೆಯೋದು ಬೇಡ. ಅಂಥವರು ಇದ್ದರೆ ಇತಿಹಾಸ ದಾಖಲೆ ತೋರಿಸಿ. ನಾವು ಕಲಿತ ಇತಿಹಾಸದಲ್ಲಿ ಅಂಥದನ್ನು ಕಲಿತಿಲ್ಲ. ಸಮುದಾಯವನ್ನು ಒಡೆಯುವುದಕ್ಕಾಗಿ ಈ ರೀತಿ ಮಾಡಬೇಡಿ ಎಂದು ಕಿಡಿಕಾರಿದ್ದರು.
ಉರಿಗೌಡ, ನಂಜೇಗೌಡರ ವಿಚಾರ ಮುನ್ನೆಲೆಗೆ ಬರುತ್ತಲೇ ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ ಶಾಸಕ ಮುನಿರತ್ನ, ಸಿನಿಮಾ ಟೈಟಲ್ ಬುಕ್ ಮಾಡಿದ್ದರು. ಎರಡೇ ದಿನದಲ್ಲಿ ಟೈಟಲ್ ಆಗಿದ್ದಲ್ಲದೆ, ಚಿತ್ರಕಥೆಯನ್ನು ಸಚಿವ ಅಶ್ವತ್ಥ ನಾರಾಯಣ ಅವರೇ ಮಾಡಲಿದ್ದಾರೆ ಎಂದು ಮುನಿರತ್ನ ಹೇಳಿದ್ದರು. ಈ ರೀತಿಯ ನಡೆಗೆ ಭಾರೀ ವಿರೋಧ ಕೇಳಿಬಂದಿದ್ದಲ್ಲದೆ, ಚಿತ್ರ ಸಾಹಿತಿಗಳು ಕೂಡ ಟೀಕೆ ಮಾಡಿದ್ದರು.
Nirmalananda Swamiji Of Sri Adichunchanagiri slams over narrative on Uri Gowda and Nanje Gowda. The controversy surrounding Uri Gowda and Nanje Gowda, the fictional characters being promoted as brave Vokkaliga soldiers who killed Tipu Sultan, has caused tension within the Vokkaliga community in Karnataka.
13-05-25 01:14 pm
HK News Desk
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm