ದೂರು ನೀಡಲು ಬಂದಿದ್ದ ಯುವತಿ ಜೊತೆಗೆ ಕೊಡಿಗೇಹಳ್ಳಿ ಠಾಣೆ ಇನ್ಸ್ ಪೆಕ್ಟರ್ ಅಶ್ಲೀಲ ವಾಟ್ಸಪ್ ಚಾಟಿಂಗ್ ; ತನಿಖಾ ವರದಿ ಸಲ್ಲಿಕೆ

21-03-23 09:36 pm       Bangalore Correspondent   ಕರ್ನಾಟಕ

ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಯುವತಿಯೊಂದಿಗೆ ಅಲ್ಲಿನ ಇನ್ಸ್ ಪೆಕ್ಟರ್ ವಾಟ್ಸಪ್ ಚಾಟಿಂಗ್ ಮಾಡಿದ್ದಲ್ಲದೆ, ಅಶ್ಲೀಲ ಸಂದೇಶ ಕಳುಹಿಸಿದ ಬಗ್ಗೆ ದೂರು ದಾಖಲಾಗಿದ್ದು, ಮೇಲಧಿಕಾರಿಗಳು ತನಿಖೆ ನಡೆಸಿದ್ದಾರೆ.

ಬೆಂಗಳೂರು, ಮಾ.21: ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಯುವತಿಯೊಂದಿಗೆ ಅಲ್ಲಿನ ಇನ್ಸ್ ಪೆಕ್ಟರ್ ವಾಟ್ಸಪ್ ಚಾಟಿಂಗ್ ಮಾಡಿದ್ದಲ್ಲದೆ, ಅಶ್ಲೀಲ ಸಂದೇಶ ಕಳುಹಿಸಿದ ಬಗ್ಗೆ ದೂರು ದಾಖಲಾಗಿದ್ದು, ಮೇಲಧಿಕಾರಿಗಳು ತನಿಖೆ ನಡೆಸಿದ್ದಾರೆ.

15 ಲಕ್ಷ ರೂ. ವಂಚನೆ ನಡೆಸಿದ ಪ್ರಕರಣದಲ್ಲಿ ಯುವತಿ ಕೊಡಿಗೇಹಳ್ಳಿ ಠಾಣೆಗೆ ದೂರು ನೀಡಲು ಬಂದಿದ್ದರು. ಈ ವೇಳೆ, ಯುವತಿಯ ನಂಬರ್ ಪಡೆದಿದ್ದ ಇನ್ಸ್ ಪೆಕ್ಟರ್ ವಾಟ್ಸಪ್ ಚಾಟಿಂಗ್ ಮಾಡಲು ತೊಡಗಿದ್ದರು. ಈ ಬಗ್ಗೆ ದಕ್ಷಿಣ ವಿಭಾಗದ ಡಿಸಿಪಿ ದರ್ಜೆಯ ಅಧಿಕಾರಿಗೆ ಯುವತಿ ಪೊಲೀಸ್ ದೂರು ನೀಡಿದ್ದು, ತನಿಖೆಯ ಹೊಣೆಯನ್ನು ಯಲಹಂಕ ವಿಭಾಗದ ಎಸಿಪಿಗೆ ವಹಿಸಲಾಗಿತ್ತು. ತನಿಖೆ ನಡೆಸಿದ ಎಸಿಪಿ ಈ ಕುರಿತ ವರದಿಯನ್ನು ಡಿಸಿಪಿ ಲಕ್ಷ್ಮೀ ಪ್ರಸಾದ್ ಗೆ ಸಲ್ಲಿಸಿದ್ದಾರೆ.

ಯುವತಿಗೆ ನಿರಂತರವಾಗಿ ವಾಟ್ಸಪ್ ಸಂದೇಶಗಳನ್ನು ಕಳುಹಿಸುತ್ತಿದ್ದರು. ಅಲ್ಲದೆ, ತನ್ನ ದೂರಿನ ಬಗ್ಗೆ ಕೇಳಲು ಹೋದಾಗ ಆಕೆಗೆ ಡ್ರೈ ಫ್ರುಟ್ಸ್ ಮತ್ತು ರೂಮ್ ಕೀಯನ್ನು ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು. ಇದೀಗ ಅಧಿಕಾರಿ ವಿರುದ್ಧದ ದೂರಿನ ಬಗ್ಗೆ ತನಿಖೆ ನಡೆದು ವರದಿ ಸಲ್ಲಿಕೆಯಾಗಿದ್ದು, ಡಿಸಿಪಿ ಲಕ್ಷ್ಮೀ ಪ್ರಸಾದ್ ವರದಿಯನ್ನು ಬೆಂಗಳೂರು ಕಮಿಷನರ್ ಪ್ರತಾಪ್ ರೆಡ್ಡಿಗೆ ಸಲ್ಲಿಸಿದ್ದಾರೆ.

Bangalore Kodihalli police Inapector Flirts With Woman Complainant, Report Sent To commissioner.