ಬ್ರೇಕಿಂಗ್ ನ್ಯೂಸ್
21-03-23 09:55 pm HK News Desk ಕರ್ನಾಟಕ
ತುಮಕೂರು, ಮಾ.21 : ಟಿಪ್ಪುವನ್ನು ಕೊಂದಿದ್ದ ಉರಿಗೌಡ, ನಂಜೇಗೌಡರ ಬಗ್ಗೆ ದಾಖಲೆ ಸಂಗ್ರಹ ಮಾಡ್ತಿದ್ದೇವೆ. ಶೀಘ್ರದಲ್ಲೇ ಆದಿಚುಂಚನಗಿರಿ ಶ್ರೀಗಳ ಮುಂದೆ ದಾಖಲೆ ಇಟ್ಟು ಅವರಿಗೆ ಸತ್ಯ ಮನವರಿಕೆ ಮಾಡುತ್ತೇವೆ. ಇದೇನು ನಾವು ಸೃಷ್ಟಿಸಿದ ಕಾಲ್ಪನಿಕ ಪಾತ್ರಗಳಲ್ಲ, ಸತ್ಯದ ಪಾತ್ರಗಳು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ತಿರುಗೇಟು ನೀಡಿದ್ದಾರೆ.
ಆದಿಚುಂಚನಗಿರಿ ಸ್ವಾಮೀಜಿ ಉರಿಗೌಡರ ಬಗ್ಗೆ ದಾಖಲೆ ಇಲ್ಲ ಎಂದಿದ್ದಕ್ಕೆ ತುರುವೇಕೆರೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಉರಿಗೌಡ ಮತ್ತು ನಂಜೇಗೌಡ ಅವರು ಕಾಲ್ಪನಿಕ ಪಾತ್ರಗಳಲ್ಲ, ಸತ್ಯದ ಪಾತ್ರಗಳು ಎಂದು ದೇ. ಜವರೇಗೌಡರು ಸುವರ್ಣ ಮಂಡ್ಯ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಸುಳ್ಳು ಅಂತ ಹೇಳಿದೋರು, ಕಾಲ್ಪನಿಕ ಅನ್ನೋರು ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.
ಟಿಪ್ಪು ಕೊಂದಿದ್ದಕ್ಕೆ ದಾಖಲೆ ಏನಿದೆ ಅಂತ ಹೊಸ ವರಸೆ ತೆಗೆದಿದ್ದಾರೆ. ಇದು ಸಂಶೋಧನೆ ಆಗಬೇಕಾಗಿರುವ ವಿಷಯ. ಟಿಪ್ಪು ಕೊಂದವರು ಯಾರು. ಟಿಪ್ಪು ಕೊಂದವರು ಅಪರಿಚಿತರು ಅಂತಾರೆ. ನಾವು ಅಪರಿಚಿತರಲ್ಲ ಅಂತ ಹೇಳಿದೀವಿ. ಉರಿಗೌಡ, ನಂಜೇಗೌಡರನ್ನ ಇವತ್ತಿನ ವರೆಗೂ ಇವರೇ ಸೃಷ್ಟಿ ಮಾಡಿದ್ದಾರೆ ಅಂತ ಹೇಳ್ಕೊಂಡು ಬಂದಿದ್ದಾರೆ ಎಂದು ಕಿಡಿಕಾರಿದರು.
ಆದಿಚುಂಚನಗಿರಿ ನಿರ್ಮಲಾನಂದನಾಥ ಸ್ವಾಮೀಜಿ ನನ್ನ ಜೊತೆ ಮಾತಾಡಿದ್ದಾರೆ. ಸ್ವಾಮೀಜಿಗಳ ಮಾತಿಗೆ ನಾವು ಗೌರವ ಕೊಡುತ್ತೇವೆ. ಸ್ವಾಮೀಜಿ ಅವರಿಗೆ ವಾಸ್ತವಿಕ ಸತ್ಯವನ್ನ ಮನವರಿಕೆ ಮಾಡುತ್ತೇವೆ. ಖಂಡಿತ ದಾಖಲೆ ತಗೊಂಡು ಹೋಗುತ್ತೇವೆ. ಸದ್ಯ ದಾಖಲೆ ಸಂಗ್ರಹಿಸುವ ಕೆಲಸ ಮಾಡ್ತಿದ್ದೇವೆ. ಆ ದಾಖಲೆ ಮುಂದಿಟ್ಟು ಸ್ವಾಮೀಜಿ ಬಳಿ ಚರ್ಚೆ ಮಾಡುತ್ತೇವೆ. ಸ್ವಾಮೀಜಿ ಅವರ ಬಗ್ಗೆ ಶ್ರದ್ದೆ ಗೌರವ ನಮಗೆ ಇದೆ ಎಂದರು.
ಟಿಪ್ಪು ಮತ್ತು ಉರಿಗೌಡ ನಂಜೇಗೌಡರ ಚರ್ಚೆ ಮುಂದುವರೆಸುತ್ತೇವೆ. ನನ್ನನ್ನು ಯಾರಿಗೆ ಬೇಕಾದರು ಹೋಲಿಕೆ ಮಾಡಿ, ಹೈಲೈಟ್ ಮಾಡಿ, ನನಗೆ ಹೆಮ್ಮೆ ಇದೆ. ಉರಿಗೌಡ ನಂಜೇಗೌಡ ಅವರು ಮೈಸೂರು ಸಂಸ್ಥಾನಕ್ಕೆ ನಿಷ್ಠಾವಂತರಾಗಿದ್ದರು ಅನ್ನೋದಕ್ಕೆ ಹೆಮ್ಮೆ ಇದೆ. ಚುನಾವಣೆ ಇರುವುದರಿಂದ ಉರಿಗೌಡ, ನಂಜೇಗೌಡ ವಿಚಾರ ಬೇರೆ ಬೇರೆ ತಿರುವು ಪಡೆಯುತ್ತಿದೆ. ಆ ರೀತಿ ಆಗಬಾರದು ಅನ್ನೋ ದೃಷ್ಟಿಯಿಂದ ಸ್ವಾಮೀಜಿಗಳು ತಿಳಿ ಹೇಳಿದ್ದಾರೆ ಎಂದು ಹೇಳಿದರು.
We have Clear Documents on Uri Gowda and Nanje Gowda says CT Ravi. The ruling BJP party leaders faced an embarrassment on Monday when they were asked by a Vokkaliga pontiff to refrain from making comments on Uri Gowda and Nanje Gowda. In fact, the Horticulture Minister Muniratna had to clarify that he would not make any movie on the duo. For the last few weeks, the ruling BJP and the opposition have been trading barbs over the issue.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm